ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಲೂಯಿಝಿಯಾನ ರಾಜ್ಯದಲ್ಲಿನ ನ್ಯೂ ಆರ್ಲಿನ್ಸ್ ನಗರದ ಬೋರ್ಬನ್ ರಸ್ತೆಯಲ್ಲಿ ಡಿಸೆಂಬರ್ ೩೧ ರಾತ್ರಿ ಹೊಸ ವರ್ಷ ಆಚರಿಸುತ್ತಿರುವವರ ಮೇಲೆ ಓರ್ವ ವ್ಯಕ್ತಿ ಟ್ರಕ್ ಹರಿಸಿದ್ದರಿಂದ ಕನಿಷ್ಠ ೧೨ ಜನರು ಸಾವನ್ನಪ್ಪಿದ್ದು, ೩೦ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ಘಟನೆಯ ಬಳಿಕ ಟ್ರಕ್ ನಿಂದ ಹೊರಬಂದ ವ್ಯಕ್ತಿಯು ಜನರ ಮೇಲೆ ಗುಂಡಿನ ದಾಳಿ ನಡೆಸಿದನು. ಆ ಸಮಯದಲ್ಲಿ ಅಲ್ಲಿ ಉಪಸ್ಥಿತ ಪೊಲೀಸರು ಅವನ ಮೇಲೆ ಗುಂಡು ಹಾರಿಸಿದರು, ಅದರಲ್ಲಿ ಅವನು ಸಾವನ್ನಪ್ಪಿದನು ಅಥವಾ ಅವನನ್ನು ಬಂಧಿಸಲಾಗಿದೆ, ಇದು ಸ್ಪಷ್ಟವಾಗಿಲ್ಲ. ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದು ದಾಳಿ ನಡೆಸುವ ವ್ಯಕ್ತಿ ಮತ್ತು ಅದರ ಕಾರಣ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಪೊಲೀಸರು ಇದನ್ನು ಭಯೋತ್ಪಾದಕ ಘಟನೆ ಅಲ್ಲವೆಂದು ತಿಳಿಸಿದ್ದಾರೆ.