Switzerland Hijab Ban : ಸ್ವಿಟ್ಜರ್ಲೆಂಡ್‌ನಲ್ಲಿ ಬುರ್ಖಾ ನಿಷೇಧ

ಬರ್ನ್ (ಸ್ವಿಟ್ಜರ್ಲೆಂಡ್) – ಜನವರಿ 1, 2025 ರಿಂದ ಸ್ವಿಟ್ಜರ್ಲೆಂಡ್ ಮಹಿಳೆಯರು ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಬುರ್ಖಾ ಅಥವಾ ಇತರೆ ಯಾವುದೇ ವಿಧಾನಗಳನ್ನು ಬಳಸಿ ತಮ್ಮ ಮುಖವನ್ನು ಮುಚ್ಚುವುದನ್ನು ನಿಷೇಧಿಸಿದೆ.  ಈ ಕಾನೂನಿನ ಪ್ರಕಾರ, ಸಾರ್ವಜನಿಕ ಕಚೇರಿಗಳು, ಸಾರ್ವಜನಿಕ ಸಾರಿಗೆ, ರೆಸ್ಟೋರೆಂಟ್‌ಗಳು, ಅಂಗಡಿಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚುವಂತಿಲ್ಲ. ಈ ಕಾನೂನನ್ನು ಉಲ್ಲಂಘಿಸಿದರೆ ಸರಿಸುಮಾರು 96 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಸ್ವಿಟ್ಜರ್ಲೆಂಡ್‌ಗಿಂತ ಮೊದಲು, ಬೆಲ್ಜಿಯಂ, ಫ್ರಾನ್ಸ್, ಡೆನ್ಮಾರ್ಕ್, ಆಸ್ಟ್ರಿಯಾ, ನೆದರ್ಲ್ಯಾಂಡ್ಸ್ ಮತ್ತು ಬಲ್ಗೇರಿಯಾ ಕೂಡ ಈ ಬಗ್ಗೆ ಕಾನೂನುಗಳನ್ನು ಜಾರಿಗೆ ತಂದಿವೆ. 2022 ರಲ್ಲಿ, ಸ್ವಿಸ್ ಸಂಸತ್ತು ಮಹಿಳೆಯರು ತಮ್ಮ ಮುಖವನ್ನು ಮುಚ್ಚಿಕೊಳ್ಳುವುದನ್ನು ನಿಷೇಧಿಸುವ ಕಾನೂನಿಗೆ ಮತದಾನ ಮಾಡಿತ್ತು. ಆ ಸಮಯದಲ್ಲಿ 151 ಸದಸ್ಯರು ಪರವಾಗಿ ಹಾಗೂ 29 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಅದರ ನಂತರ, ಈ ನಿಟ್ಟಿನಲ್ಲಿ ಕಾನೂನು ಜಾರಿಗೆ ಬಂದಿತು. 2009 ರಲ್ಲಿ, ಸ್ವಿಟ್ಜರ್ಲೆಂಡ್ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಮಿನಾರ್‌ಗಳ (ಮಸೀದಿಗಳ ಸುತ್ತಲೂ ನಿರ್ಮಿಸಲಾಗುವ ಗೋಪುರಗಳು) ನಿರ್ಮಾಣವನ್ನು ನಿರ್ಬಂಧಿಸಿತ್ತು.

ಸಂಪಾದಕೀಯ ನಿಲುವು

ಸ್ವಿಟ್ಜರ್ಲೆಂಡ್‌ನಂತಹ ಜಾತ್ಯತೀತ ಮತ್ತು ಸುಧಾರಣಾವಾದಿ ರಾಷ್ಟ್ರವು ಅಂತಹ ಕಾನೂನನ್ನು ಜಾರಿಗೊಳಿಸಬಹುದಾದರೆ, ಭಾರತದಲ್ಲಿ ಏಕೆ ಮಾಡಲು ಸಾಧ್ಯವಿಲ್ಲ ?