Bangladesh India Trade Impact : ಬಾಂಗ್ಲಾದೇಶವು ಭಾರತದೊಂದಿಗಿನ ಸಂಬಂಧ ಹದಗೆಡಿಸಿದರೆ ವ್ಯಾಪಾರದಲ್ಲಿ ಅಪಾರ ನಷ್ಟ ಆಗುವುದು !

ನವ ದೆಹಲಿ – ಬಾಂಗ್ಲಾದೇಶದಲ್ಲಿ ನಡೆದಿರುವ ಅಧಿಕಾರ ಬದಲಾವಣೆಯ ನಂತರ ಬಾಂಗ್ಲಾದೇಶದಿಂದ ಪಾಕಿಸ್ತಾನದೊಂದಿಗಿನ ಆತ್ಮೀಯತೆ ಹೆಚ್ಚಾಗುತ್ತಿದೆ. ಬಾಂಗ್ಲಾದೇಶ ಪಾಕಿಸ್ತಾನದಿಂದ ಸಕ್ಕರೆ, ಆಲೂಗಡ್ಡೆ ಮುಂತಾದ ವಸ್ತುಗಳು ಖರೀದಿಸುತ್ತಿದೆ. ಇಲ್ಲಿಯವರೆಗೆ ಈ ವಸ್ತುಗಳು ಭಾರತದಿಂದ ಕಳುಹಿಸಲಾಗುತ್ತಿದ್ದವು; ಆದರೆ ಪರಿಸ್ಥಿತಿ ಗಂಭೀರವಾಗಿರುವುದರಿಂದ ಬಾಂಗ್ಲಾದೇಶ ಭಾರತದ ಒಂದು ಆಘಾತ ಕೂಡ ಸಹಿಸಲಾರದು. ಬಾಂಗ್ಲಾದೇಶ ಭಾರತದಿಂದ ಗೋಧಿ, ಈರುಳ್ಳಿ, ಬೆಳ್ಳುಳ್ಳಿ, ಹತ್ತಿ, ಬೇಳೆ ಕಾಳುಗಳು, ಪೆಟ್ರೋಲಿಯಂ, ಎಲೆಕ್ಟ್ರಾನಿಕ್ಸ್, ಪ್ಲಾಸ್ಟಿಕ್, ಸ್ಟೀಲ್ ಮುಂತಾದವು ಖರೀದಿಸುತ್ತದೆ ಮತ್ತು ಅದು ದೊಡ್ಡ ಪ್ರಮಾಣದಲ್ಲಿ ಭಾರತದ ಮೇಲೆ ಅವಲಂಬಿತವಾಗಿದೆ. ಇನ್ನೊಂದು ಕಡೆ ಭಾರತ ಬಾಂಗ್ಲಾದೇಶದ ಏಷಿಯಾದಲ್ಲಿನ ಎರಡನೇ ಎಲ್ಲಕಿಂತ ದೊಡ್ಡ ವ್ಯಾಪಾರಿ ಪಾಲುದಾರ ಆಗಿದೆ. ಬಾಂಗ್ಲಾದೇಶವು ಭಾರತದೊಂದಿಗಿನ ಸಂಬಂಧ ಹಾಳು ಮಾಡಿಕೊಂಡರೆ ಅದಕ್ಕೆ ವ್ಯಾಪಾರದಲ್ಲಿ ದೊಡ್ಡ ನಷ್ಟವಾಗುವುದು, ಎಂದು ಅಂತರಾಷ್ಟ್ರೀಯ ತಜ್ಞರ ಅಭಿಪ್ರಾಯವಾಗಿದೆ.

ಬಾಂಗ್ಲಾದೇಶವು, ಬಾಂಗ್ಲಾದೇಶ ವ್ಯಾಪಾರ ಮತ್ತು ಶುಲ್ಕ ಆಯೋಗವು ಆಲೂಗಡ್ಡೆ ಮತ್ತು ಈರುಳ್ಳಿಯ ಬೆಲೆ ಮತ್ತು ಪೂರೈಕೆ ಸ್ಥಿರಗೊಳಿಸುವುದಕ್ಕಾಗಿ ಪರ್ಯಾಯ ಹುಡುಕಿದೆ ಎಂದು ಹೇಳಿದೆ. ಬಾಂಗ್ಲಾದೇಶವು, ಈ ಹೆಚ್ಚುತ್ತಿರುವ ಬೆಲೆಯಿಂದ ಹೊಸ ಪೂರೈಕೆದಾರರು ಹುಡುಕುತ್ತಿದೆ. ಇದರಲ್ಲಿ ಪಾಕಿಸ್ತಾನದ ಸಮಾವೇಶ ಕೂಡ ಇದೆ’, ಎಂದು ಹೇಳಿದೆ.

ವ್ಯಾಪಾರಿಗಳಿಗೆ ಬೆದರಿಕೆ ನೀಡಲಾಗುತ್ತಿದೆ !

ಬಾಂಗ್ಲಾದೇಶ ಅದರ ಉದ್ಯಮಿಗಳ ಮೇಲೆ ಭಾರತದ ಬದಲು ಪಾಕಿಸ್ತಾನದೊಂದಿಗೆ ವ್ಯಾಪಾರ ನಡೆಸಿ ಅಲ್ಲಿಂದ ವಸ್ತುಗಳು ಖರೀದಿಸಲು ಒತ್ತಡ ಹೇರುತ್ತಿದೆ. ಹಾಗೆ ಮಾಡದಿದ್ದರೆ ಅವರಿಗೆ ಬೆದರಿಸಲಾಗುತ್ತಿದೆ. ಭಾರತದ ಜೊತೆಗಿನ ಸಂಬಂಧ ತೊಂದರೆಗೆ ಸಿಲುಕಿರುವುದರಿಂದ ಬಾಂಗ್ಲಾದೇಶಕ್ಕೆ ತೊಂದರೆ ನಿರ್ಮಾಣವಾಗಬಹುದು. ಬಾಂಗ್ಲಾದೇಶ ಇನ್ನೂ ಕೂಡ ಆಹಾರ ನೀರು ಸಹಿತ ಅನೇಕ ವಿಷಯಗಳಲ್ಲಿ ಭಾರತದ ಮೇಲೆ ಅವಲಂಬಿಸಿದೆ. ಬಾಂಗ್ಲಾದೇಶವು ಭಾರತದಿಂದ ಅಂತರ ಕಾಯ್ದುಕೊಂಡಿದೆ, ಆದರೆ ಅದು ಅದರ ಆರ್ಥಿಕ ವ್ಯವಸ್ಥೆಗಾಗಿ ಅಪಾಯ ತಂದೋಡ್ಡಬಹುದು’, ಎಂದು ಹೇಳಿದೆ.

ಸಂಪಾದಕೀಯ ನಿಲುವು

ವಾಸ್ತವದಲ್ಲಿ ಭಾರತವೇ ಬಾಂಗ್ಲಾದೇಶದ ಜೊತೆಗೆ ಎಲ್ಲಾರೀತಿಯ ಸಂಬಂಧ ಕಡಿದುಕೊಂಡು ಅದಕ್ಕೆ ಸರಿಯಾದ ಪಾಠ ಕಲಿಸುವ ಅಗತ್ಯವಿದೆ !