ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ !

  • ಯಾತ್ರೆಯಲ್ಲಿ ತಂಬಾಕು ನಿಷೇಧ !

  • ಎರಡೂವರೆ ಕಿ.ಮೀ ಪ್ರಯಾಣದಲ್ಲಿ ಹೆಲ್ಮೆಟ್ ಕಡ್ಡಾಯ!

  • ಯಾತ್ರೆಗೆ 3 ಲಕ್ಷಕ್ಕೂ ಹೆಚ್ಚು ಯಾತ್ರಿಕರ ನೋಂದಣಿ !

ಶ್ರೀನಗರ (ಜಮ್ಮು-ಕಾಶ್ಮೀರ) – ಜುಲೈ 1 ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಗೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಬಾರಿ ಸಂಪೂರ್ಣ ಯಾತ್ರೆಯು ತಂಬಾಕು ಮುಕ್ತವಾಗಲಿದೆ. ಈ ಸಂಬಂಧ ಜೂನ್ 28 ರಂದು ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಯಾತ್ರೆಯು ತಂಬಾಕು ಮುಕ್ತವಾಗಿರುತ್ತದೆ. ಇದರೊಂದಿಗೆ ‘ಅಮರನಾಥ ಶ್ರೈನ್ ಬೋರ್ಡ್’ ಕೂಡ ಕೆಲವು ನಿಯಮಗಳನ್ನು ಮಾಡಿದೆ. ಇದರ ಪ್ರಕಾರ 2.5 ಕಿ.ಮೀ ಹೈ ರಿಸ್ಕ್ ಮಾರ್ಗದಲ್ಲಿ ಯಾತ್ರಿಕರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಲಿದೆ. ಅಷ್ಟೇ ಅಲ್ಲ, ಹೇಸರಗತ್ತೆಯ ಮೇಲೆ ಸವಾರಿ ಮಾಡುವ ಭಕ್ತರಿಗೂ ಹೆಲ್ಮೆಟ್ ಕಡ್ಡಾಯವಾಗಲಿದೆ. ಹೆಲ್ಮೆಟ್ ಅನ್ನು ‘ಶ್ರೇನ್ ಬೋರ್ಡ್’ ಉಚಿತವಾಗಿ ನೀಡಲಿದೆ.

1. ಯಾತ್ರಿಕರ ಮೊದಲ ತಂಡವು ಜೂನ್ 30 ರಂದು ‘ಜಮ್ಮು ಭಗವತಿ ನಗರ ಬೇಸ್ ಕ್ಯಾಂಪ್’ನಿಂದ ಹೊರಡಲಿದೆ.

2. ಕಳೆದ ವರ್ಷ ಮೇಘಸ್ಫೋಟದಿಂದ ಪವಿತ್ರ ಗುಹೆಯ ಬಳಿ ಪ್ರವಾಹ ಉಂಟಾಗಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ನಿಗಾ ವಹಿಸಲಾಗಿದೆ.

3. ಜೂನ್ 28 ರ ವೇಳೆಗೆ 3 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಅಂಕಿ ಅಂಶವು ಕಳೆದ ವರ್ಷಕ್ಕಿಂತ ಶೇ.10 ಹೆಚ್ಚಾಗಿದೆ.

4. ಈ ವರ್ಷ ಯಾವುದೇ ಪ್ರಯಾಣಿಕರಿಗೆ ರಾತ್ರಿಯಲ್ಲಿ ಪವಿತ್ರ ಗುಹೆಯ ಬಳಿ ನಿಲ್ಲಲು ಅನುಮತಿ ನೀಡಲಾಗುವುದಿಲ್ಲ.

5. ಅಮರನಾಥ ಯಾತ್ರೆಗೆ ಮುಂಚಿತವಾಗಿ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಬಾಲ್ಟಾಲ್ ಮತ್ತು ಚಂದನ್ವಾಡಿಯಲ್ಲಿ ತಲಾ 100 ಹಾಸಿಗೆಗಳ ಎರಡು ಆಸ್ಪತ್ರೆಗಳನ್ನು ನಿರ್ಮಿಸಿದೆ. ಈ ಅತ್ಯಾಧುನಿಕ ಆಸ್ಪತ್ರೆಗಳಿಗೆ ಸರಕಾರ 13 ಕೋಟಿ ರೂಪಾಯಿ ವೆಚ್ಚ ಮಾಡಿದೆ. ‘ಶ್ರಾಯಿನ್ ಬೋರ್ಡ್’ 1 ಸಾವಿರದ 700 ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದೆ.

ಪಾಕಿಸ್ತಾನದ ಒಳನುಸುಳುವಿಕೆ ಯತ್ನಗಳನ್ನು ತಡೆಯಲು ಸೆಕ್ಷನ್ 144 ಜಾರಿ !

ಪಾಕಿಸ್ತಾನದ ನಿರಂತರ ಒಳನುಸುಳುವಿಕೆ ಪ್ರಯತ್ನಗಳು ಮತ್ತು ಅಮರನಾಥ ಯಾತ್ರೆಯ ಭದ್ರತೆಯ ದೃಷ್ಟಿಯಿಂದ ಸಾಂಬಾದಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ 1 ಕಿ.ಮೀ.ಅಂತರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇದರಿಂದ ವಿಚಾರಣೆಯ ಸಮಯದಲ್ಲಿ ಸ್ಥಳೀಯ ಗ್ರಾಮಸ್ಥರು ಮತ್ತು ಇತರೆ ಜನರಿಗೆ ತನ್ನ ಪರಿಚಯವನ್ನು ಹೇಳಬೇಕಾಗುವುದು.

ಸಂಪಾದಕರ ನಿಲುವು

ಬಹುಸಂಖ್ಯಾತ ಸಮಾಜದ ಧಾರ್ಮಿಕ ಯಾತ್ರೆಗಳಿಗೆ ಜಿಹಾದಿ ಭಯೋತ್ಪಾದನೆಯ ಕರಿನೆರಳು ಬೀರಿರುವ ವಿಶ್ವದ ಏಕೈಕ ದೇಶ ಭಾರತ !