ಜೂನ್ 29 ರಿಂದ ಆಗಸ್ಟ್ 19 ರವರೆಗೆ ನಡೆಯಲಿದೆ ಯಾತ್ರೆ!
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) – ಅಮರನಾಥ ಯಾತ್ರೆ ಈ ವರ್ಷ ಜೂನ್ 29 ರಿಂದ ಪ್ರಾರಂಭವಾಗಲಿದೆ. ಈ ಯಾತ್ರೆಯು ಆಗಸ್ಟ್ 19 ರವರೆಗೆ ನಡೆಯಲಿದ್ದು ಅದಕ್ಕಾಗಿ ಏಪ್ರಿಲ್ 15 ರಿಂದ ನೋಂದಣಿ ಪ್ರಾರಂಭವಾಗಿದೆ. ನೋಂದಣಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಹೀಗೆ ಎರಡೂ ಪದ್ಧತಿಯಿಂದ ಮಾಡಬಹುದು. ಶ್ರೈನ್ ಬೋರ್ಡ್‌ನ (ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕಛೇರಿ)ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಆನ್‌ಲೈನ್ ಮೂಲಕ ನೋಂದಣಿಯನ್ನು ಮಾಡಬಹುದು. ಅದರ ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಸ್. ಬಿ.ಐ., ಯೆಸ್ ಬ್ಯಾಂಕ್ ಮತ್ತು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ಗಳಿಂದ ಆಫ್‌ಲೈನ್ ನೋಂದಣಿಯನ್ನು ಮಾಡಬಹುದು. ಸರ್ಕಾರದ ನಿಯಮಗಳ ಪ್ರಕಾರ, 13 ರಿಂದ 70 ವರ್ಷದೊಳಗಿನ ಭಾರತೀಯ ನಾಗರಿಕರು ಈ ಯಾತ್ರೆಯನ್ನು ಮಾಡಬಹುದು. ಪ್ರಯಾಣಕ್ಕಾಗಿ ಅಗತ್ಯವಾದ ವೈದ್ಯಕೀಯ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.
ಕಳೆದ ಬಾರಿ ಸುಮಾರು ನಾಲ್ಕೂವರೆ ಲಕ್ಷ ಭಕ್ತರು ಅಮರನಾಥ ಕ್ಷೇತ್ರದ ದರ್ಶನ ಪಡೆದಿದ್ದರು. ಈ ಬಾರಿ 6 ಲಕ್ಷ ಪ್ರಯಾಣಿಕರು ಬರುವ ಸಾಧ್ಯತೆ ಇದೆ. ಸಂಪೂರ್ಣ ಈ ಮಾರ್ಗದುದ್ದಕ್ಕೂ ಊಟ, ನಿಲುಗಡೆ ಮತ್ತು ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗುವುದು. ಆಮ್ಲಜನಕ ಬೂತ್, ಐಸಿಯು ಬೆಡ್, ಎಕ್ಸ್-ರೇ, ಸೋನೋಗ್ರಫಿ ಯಂತ್ರ ಮತ್ತು ದ್ರವ ಆಮ್ಲಜನಕ ಘಟಕ ಇವುಗಳಿಂದ ಸುಸಜ್ಜಿತವಾಗಿರುವ 2 ಕ್ಯಾಂಪ್ ಆಸ್ಪತ್ರೆಗಳ ಸಿದ್ದತೆ ನಡೆಯುತ್ತಿವೆ.