ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಶಾಸಕ ವಾಹಿದ್ ಪಾರಾ ವಿಧಾನಸಭೆಯಲ್ಲಿ ಮಂಡಿಸಿದ ಅಂಶ

ಶ್ರೀನಗರ (ಜಮ್ಮು-ಕಾಶ್ಮೀರ) – ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಾಲಟಾಲ ಮತ್ತು ಪಹಲ್ಗಾಮ್‌ನಲ್ಲಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ವಿಧಾನಸಭೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಶಾಸಕ ವಾಹಿದ್ ಪಾರಾ ಈ ರಸ್ತೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರು, ಈ ರಸ್ತೆಗಳ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗಬಹುದು ಎಂದು ಹೇಳಿದ್ದಾರೆ. ಪರಿಸರಕ್ಕೆ ಯಾವುದೇ ಅಪಾಯವಾಗದ ರೀತಿಯಲ್ಲಿ ಯಾತ್ರೆಯನ್ನು ಆಯೋಜಿಸಬೇಕು.
https://twitter.com/SanatanPrabhat/status/1897302114969567621
ಇದಕ್ಕೆ ವಿರೋಧ ಪಕ್ಷದ ನಾಯಕ ಮತ್ತು ಭಾಜಪದ ಹಿರಿಯ ನಾಯಕ ಸುನೀಲ್ ಶರ್ಮಾ ಪ್ರತಿಕ್ರಿಯಿಸಿ, ಅಮರನಾಥ ಯಾತ್ರೆಗೆ ವಿರೋಧ ವ್ಯಕ್ತಪಡಿಸುವ ಇತಿಹಾಸ ಪಿಡಿಪಿಯಲ್ಲಿದೆ. 2008 ರಲ್ಲಿ ಅಮರನಾಥ ಯಾತ್ರೆಯ ಸಮಯದಲ್ಲಿ ಪಿಡಿಪಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿತ್ತು ಮತ್ತು ಈಗಲೂ ಅದೇ ಮನಸ್ಥಿತಿ ಕಂಡುಬರುತ್ತಿದೆ. ಅಮರನಾಥ ಯಾತ್ರೆ ಕೇವಲ ಶ್ರದ್ಧೆಯ ವಿಷಯವಲ್ಲ, ಜಮ್ಮು-ಕಾಶ್ಮೀರದ ಸಾವಿರಾರು ಜನರ ಜೀವನೋಪಾಯವು ಅದರೊಂದಿಗೆ ಸಂಬಂಧ ಹೊಂದಿದೆ. ವಾಹಿದ್ ಪಾರಾ ಅವರ ಅಂಶ ಕೇವಲ ಪರಿಸರಕ್ಕೆ ಸಂಬಂಧಿಸಿದ್ದರೆ, ಅವರು ಕೇವಲ ಅಮರನಾಥ ಯಾತ್ರೆಯ ಬಗ್ಗೆ ಮಾತ್ರ ಏಕೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ? ಕಾಶ್ಮೀರದಲ್ಲಿ ಪರಿಸರದ ಬಗ್ಗೆ ಚರ್ಚಿಸಬಹುದಾದ ಅನೇಕ ಸ್ಥಳಗಳಿವೆ. ಆದರೆ ಪಿಡಿಪಿ ಉದ್ದೇಶಪೂರ್ವಕವಾಗಿ ಹಿಂದೂಗಳ ನಂಬಿಕೆಯನ್ನು ಗುರಿಯಾಗಿಸುತ್ತಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಪರಿಸರಕ್ಕೆ ಹಾನಿಯು ಕೇವಲ ಹಿಂದೂಗಳ ಹಬ್ಬಗಳ ಅಥವಾ ಯಾತ್ರೆಯ ಸಂದರ್ಭದಲ್ಲಿ ಮಾತ್ರ ಆಗುತ್ತದೆ ಎಂಬ ಕೂಗು ಯಾವಾಗಲೂ ಏಕೆ ಕೇಳಿಬರುತ್ತದೆ? ಇತರ ಧರ್ಮಗಳ ಹಬ್ಬಗಳ ಸಮಯದಲ್ಲಿ ಪರಿಸರಕ್ಕೆ ಹಾನಿಯ ಪ್ರಶ್ನೆಯನ್ನು ಏಕೆ ಯಾರೂ ಎತ್ತುವುದಿಲ್ಲ? |