ಅಮರನಾಥ ಯಾತ್ರೆ ಆರಂಭವಾಗಿದೆ
ಶ್ರೀನಗರ(ಜಮ್ಮು-ಕಾಶ್ಮೀರ) – ಕಾಶ್ಮೀರದ ಅನಂತನಾಗ ಜಿಲ್ಲೆಯಲ್ಲಿ ಅಮರನಾಥ ಯಾತ್ರೆಯಲ್ಲಿ ಪವಿತ್ರ ಗುಹೆಯಲ್ಲಿನ ಮಂಜುಗಡ್ಡೆಯಿಂದ ನೈಸರ್ಗಿಕವಾಗಿ ರೂಪುಗೊಂಡಿರುವ ಬಾಬಾ ಬರ್ಫಾನಿ ಎಂಬ ಶಿವಲಿಂಗದ ದರ್ಶನವು ಜೂನ್ ೨೯ ರಿಂದ ಪ್ರಾರಂಭವಾಗಿದೆ. ಬಾಲತಾಲ ಮತ್ತು ಪಹಲಗಾಮ ಈ ಯಾತ್ರಾನೆಲೆಗಳಿಂದ ಯಾತ್ರಿಕರ ಮೊದಲ ತಂಡ ಅಮರನಾಥ ಗುಹೆಯ ದಿಕ್ಕಿನಲ್ಲಿ ಹೊರಟಿತು. ಮೊದಲ ದಿನ ಒಟ್ಟು ೪ ಸಾವಿರದ ೬೦೩ ಭಾವಿಕರು ಶಿವಲಿಂಗನ ದರ್ಶನ ಪಡೆದರು. ಅಮರನಾಥ ಯಾತ್ರೆಯು ೫೨ ದಿನಗಳ ವರೆಗೆ ನಡೆಯಲಿದೆ. ಈ ಯಾತ್ರೆ ಆಗಸ್ಟ್ ೧೯ ರಂದು ಕೊನೆಗೊಳ್ಳಲಿದೆ. ಈ ವರ್ಷ ಅಮರನಾಥಯಾತ್ರೆಗಾಗಿ ೩ ಲಕ್ಷದ ೫೦ ಸಾವಿರಕ್ಕೂ ಹೆಚ್ಚಿನ ಜನರು ನೊಂದಾಯಿಸಿದ್ದಾರೆ.
Amarnath Yatra 2024: On the first day, 4,603 devotees visited and had a glimpse of the Shivalinga ! pic.twitter.com/Wnjnqtz3kc
— Sanatan Prabhat (@SanatanPrabhat) June 29, 2024