ಜುಲೈ ೧ ರಿಂದ ಅಮರನಾಥ ಯಾತ್ರೆ ಪ್ರಾರಂಭ

ಶ್ರೀನಗರ – ಜುಲೈ ೧ ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ೬೨ ದಿನಗಳವರೆಗೆ ಈ ಯಾತ್ರೆ ಇರುತ್ತದೆ. ಯಾತ್ರೆಯು ಆಗಸ್ಟ್ 31, ೨೦೨೩ ರಂದು ಮುಕ್ತಾಯಗೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ ೯, ೨೦೨೩ ರಂದು ನಡೆಸಿದ ಉನ್ನತ ಸಭೆಯಲ್ಲಿ ಯಾತ್ರೆಗಾಗಿ ನೀಡಿದ್ದ ಭದ್ರತಾ ವ್ಯವಸ್ಥೆಗಳ ವರದಿಯನ್ನು ತೆಗೆದುಕೊಂಡರು. ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಉಪ ರಾಜ್ಯಪಾಲರು ಮತ್ತು ಭದ್ರತಾ ವ್ಯವಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ‘ಶ್ರೀ ಅಮರನಾಥ ಶ್ರಾಯಿನ್ ಬೋರ್ಡ್’ ಯಾತ್ರೆಯ ಸಮಯದಲ್ಲಿ ಅನೇಕ ಆಹಾರ ಪದಾರ್ಥಗಳ ಸೇವನೆಯನ್ನು ನಿಷೇಧಿಸಿದೆ.

ಅಮರನಾಥ ಯಾತ್ರೆಯು ಅತ್ಯಂತ ದುರ್ಗಮ ಪರ್ವತ ರಸ್ತೆಗಳ ಮೂಲಕ ಹಾದುಹೋಗುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಯಾತ್ರೆಯನ್ನು ಭಯೋತ್ಪಾದಕರು ಗುರಿ ಮಾಡಿದ್ದಾರೆ (ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರ ಕರಿನೆರಳಿರುವುದು ನಾಚಿಕೆಗೇಡಿನ ಸಂಗತಿ ! – ಸಂಪಾದಕರು) ಹಾಗಾಗಿ, ಈ ಕಾಲಾವಧಿಯಲ್ಲಿ ಅತ್ಯಂತ ಬಿಗಿಯಾದ ಭದ್ರತಾ ವ್ಯವಸ್ತೆಯನ್ನು ಇಡಲಾಗಿದೆ. ಯಾತ್ರೀಕರನ್ನು ಗುಂಪುಗಳಾಗಿ ಕಳುಹಿಸಲಾಗುತ್ತದೆ.