13 ರಿಂದ 70 ವರ್ಷ ವಯಸ್ಸಿನವರು ನೋಂದಣಿಗೆ ಅವಕಾಶ !
ನವ ದೆಹಲಿ – ಅಮರನಾಥ ಯಾತ್ರೆಗೆ ಏಪ್ರಿಲ್ 17 ರಿಂದ ನೋಂದಣಿ ಆರಂಭವಾಗಿದೆ. 13 ರಿಂದ 70 ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದು. ದೇಶದಾದ್ಯಂತ 31 ಬ್ಯಾಂಕ್‌ಗಳ 542 ಶಾಖೆಗಳಲ್ಲಿ ಆಫ್‌ಲೈನ್ (ಪ್ರತ್ಯಕ್ಷ ಹೋಗಿ) ನೋಂದಣಿಯನ್ನು ಮಾಡಬಹುದಾದರೆ ಆನ್ ಲೈನ್ ಮೂಲಕ ಅಮರನಾಥ ಯಾತ್ರೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿಯನ್ನು ಮಾಡಬಹುದು.
ಅಮರನಾಥ ಯಾತ್ರೆಗೆ ರಿಜಿಸ್ಟರ್ ಮಾಡೋದು ಹೀಗೆ#AmarnathYatra #Bengaluru #Local18 #KannadaNewshttps://t.co/Q1Dp1yfCGl
— News18 Kannada (@News18Kannada) April 16, 2023
ಆಫ್‌ಲೈನ್ ನೋಂದಣಿಗೆ ಪ್ರತಿ ವ್ಯಕ್ತಿಗೆ 120 ರೂಪಾಯಿ ಮತ್ತು ಆನ್‌ಲೈನ್ ನೋಂದಣಿಗೆ 220 ರೂಪಾಯಿ ತುಂಬ ಬೇಕಾಗುವುದು. ಗುಂಪು ನೋಂದಣಿಗೆ ಪ್ರತಿ ವ್ಯಕ್ತಿಗೆ ರೂ 220 ಮತ್ತು ಅನಿವಾಸಿ ಭಾರತೀಯರಿಗೆ 1 ಸಾವಿರದ 520 ರೂಪಾಯಿ ಶುಲ್ಕ ತುಂಬ ಬೇಕಾಗುವುದು. ನೋಂದಣಿ ಸಮಯದಲ್ಲಿ, ಭಕ್ತರು ಪಾಸ್‌ಪೋರ್ಟ್ ಅಳತೆಯ ಫೋಟೊ, ಗುರುತಿನ ಚೀಟಿಯ ನಕಲು, ವೈದ್ಯಕೀಯ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕು. ಈ ಯಾತ್ರೆಯು ಜುಲೈ 1 ರಿಂದ ಆಗಸ್ಟ್ 31 ರವರೆಗೆ ಇರುತ್ತದೆ.
ಜಮ್ಮು-ಕಾಶ್ಮೀರ; ಅಮರನಾಥ ಯಾತ್ರೆ ಜುಲೈ 1 ರಿಂದ ಪ್ರಾರಂಭ.
ಇದೇ 17ರಿಂದ ನೋಂದಣಿ ಪ್ರಕ್ರಿಯೆ ಆರಂಭ. pic.twitter.com/WBnLuUXwVK— DD Chandana News (@DDChandanaNews) April 15, 2023