ಅಪಘಾತಕ್ಕೀಡಾದ ಯುವಕನಿಗೆ ಯಾರು ಸಹಾಯ ಮಾಡದೇ ಇರುವುದರಿಂದ ಅವನ ಮೃತ್ಯು !

ಭಾರತೀಯರಲ್ಲಿ ನೈತಿಕತೆಯೇ ಉಳಿದಿಲ್ಲದ ಕಾರಣ ಈ ರೀತಿಯ ಘಟನೆಗಳಾಗ ತೊಡಗಿವೆ. ರಾಜಕಾರಣಿಗಳು ಜನರಿಗೆ ನೈತಿಕತೆ ಕಲಿಸದೇ ಇರುವುದರ ಪರಿಣಾಮ ಇದಾಗಿದೆ.

ಜಮ್ಮುವಿನ ಶ್ರೀ ರಣಬೀರೇಶ್ವರ ದೇವಸ್ಥಾನದ ಕೆಲವು ಭಾಗ ಕುಸಿತ !

ಲ್ಲಿಯ ಶ್ರೀ ರಣಬೀರೇಶ್ವರ ದೇವಸ್ಥಾನದ ಕೆಲವು ಭಾಗ ಇತ್ತೀಚೆಗೆ ಕುಸಿದಿದೆ. ಈ ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಅಥವಾ ಯಾರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ

ಬಕ್ಸರ್ (ಬಿಹಾರ)ನಲ್ಲಿ ರೈಲು ಹಳಿತಪ್ಪಿದ್ದರಿಂದ 4 ಪ್ರಯಾಣಿಕರು ಸಾವು : 80 ಜನರು ಗಾಯ

ಇಲ್ಲಿ ಈಶಾನ್ಯ ಎಕ್ಸ್‌ಪ್ರೆಸ್‌ನ 20 ಬೋಗಿಗಳು ಹಳಿತಪ್ಪಿದ್ದರಿಂದ ನಡೆದ ಅಪಘಾತದಲ್ಲಿ 4 ಜನರು ಸಾವನ್ನಪ್ಪಿದ್ದು, 80 ಜನರು ಗಾಯಗೊಂಡಿದ್ದಾರೆ. ಟೂರಿಗಂಜೆಯಿಂದ ರಘುನಾಥಪುರ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.

ಬಿಹಾರದ ಪೊಲೀಸರು ಅಪಘಾತಕ್ಕೊಳಗಾದ ವ್ಯಕ್ತಿಯ ಶವವನ್ನು ಸೇತುವೆಯಿಂದ ಹೊಳೆಗೆ ಎಸೆದರು !

ಇಂತಹವರನ್ನು ಪೊಲೀಸರು ಎನ್ನಬೇಕೋ ಅಥವಾ ಕಟುಕರು ಎನ್ನಬೇಕೊ ? ಇಂತಹ ಪೋಲೀಸರನ್ನು ಬಂಧಿಸಿ ಜೈಲಿಗೆ ಹಾಕಬೇಕು !

ಬೆಂಗಳೂರಿನಲ್ಲಿ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 14 ಜನರ ಸಾವು

ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ “ಬಾಲಾಜಿ ಕ್ರಾಕರ್ಸ್” ಈ ಪಟಾಕಿಯ ಅಂಗಡಿಯಲ್ಲಿ ಸಂಭವಿಸಿದ ಬೆಂಕಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಸಂಜೆ ಸುಮಾರು 4.30 ರ ಸಮಯದಲ್ಲಿ ಈ ಘಟನೆ ನಡೆದಿದೆ.

ಕೆನಡಾದಲ್ಲಿ ವಿಮಾನ ಪತನ ಮುಂಬಯಿನ ಟ್ರೈನಿ ಪೈಲಟ್‌ಗಳ ಸಾವು

ಕೆನಡಾದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರದಿಂದ 100 ಕಿಲೋಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದ್ದೂ 2 ಟ್ರೈನಿ ಪೈಲಟ್ ಸೇರಿದಂತೆ 3 ಜನರು ಸಾವನ್ನಪ್ಪಿದ್ದಾರೆ.

ಚೀನಾದ ಜಲಾಂತರ್ಗಾಮಿ ನೀರಿನಲ್ಲಿ ಮುಳುಗಿದ ಬಗ್ಗೆ ಚರ್ಚೆ !

ಚೀನಾದ ರಕ್ಷಣಾಸಚಿವ ಶಾಂಗಫೂ ಕಳೆದ ೨ ವಾರಗಳಿಂದ ನಾಪತ್ತೆಯಾಗಿದ್ದಾರೆ. ಆಗಸ್ಟ್ ನಲ್ಲಿ ಚೀನಾದ ಪರಮಾಣು ಜಲಾಂತರ್ಗಾಮಿ ತೈವಾನನ ಸಮುದ್ರದಲ್ಲಿ ಮುಳುಗಿತ್ತು. ಅದರಲ್ಲಿದ್ದ ೧೦೦ ನೌಕಾಪಡೆ ಸೈನಿಕರು ಸಾವನ್ನಪ್ಪಿದರು.

ಮುಜಫ್ಫರಪುರ (ಬಿಹಾರ) ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ದೋಣಿ ಮಗುಚಿದ್ದರಿಂದ 18 ವಿದ್ಯಾರ್ಥಿಗಳು ನಾಪತ್ತೆ !

ನಗರದ ಬಾಗಮತಿ ನದಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ತುಂಬಿದ ದೋಣಿಯೊಂದು ಮಗುಚಿದ ಅಪಘಾತ ನಡೆದಿದೆ. ಈ ದೋಣಿಯಲ್ಲಿ 34 ವಿದ್ಯಾರ್ಥಿಗಳಿದ್ದರು. ಈ ಪೈಕಿ 18 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.

ಬಂಗಾಲದಲ್ಲಿ ಪಟಾಕಿ ಅನಧಿಕೃತ ಕಾರ್ಖಾನೆಯ ಸಂಭವಿಸಿದ ಸ್ಫೋಟದಲ್ಲಿ 8 ಸಾವು

ರಾಜ್ಯದಲ್ಲಿ ಪಟಾಕಿಗಳ ಅನಧಿಕೃತ ಕಾರ್ಖಾನೆ ನಡೆಯುತ್ತಿರುವಾಗ ಹಾಗೂ ಅದರ ಬಗ್ಗೆ ಮೊದಲೇ ಮಾಹಿತಿ ನೀಡಿದರೂ ಪೊಲೀಸರು ನಿರ್ಲಕ್ಷ ಮಾಡುತ್ತಾರೆ, ಇದರಿಂದ ಅವರಿಗೆ ಲಂಚ ನೀಡಲಾಗಿತ್ತು ಎಂದು ತಿಳಿದುಕೊಳ್ಳಬೇಕೆ ? ಎಂದು ಪೊಲೀಸ್ ಮತ್ತು ರಾಜ್ಯದ ನಿಷ್ಕ್ರೀಯ ತೃಣಮೂಲ ಕಾಂಗ್ರಸ್ ಸರಕಾರ ಹಿಂದೂ ರಾಷ್ಟ್ರಕ್ಕೆ ಅನಿವಾರ್ಯಗೊಳಿಸುತ್ತದೆ !

ಮಧುರೈನಲ್ಲಿ ರೈಲಿಗೆ ಬೆಂಕಿ, 9 ಪ್ರಯಾಣಿಕರ ದುರ್ಮರಣ

ಲಕ್ಷ್ಮಣಪುರಿಯಿಂದ ರಾಮೇಶ್ವರಂಗೆ ತೆರಳುತ್ತಿದ್ದ ರೈಲಿನ ಒಂದು ಬೋಗಿಗೆ ಮಧುರೈನಲ್ಲಿ ಬೆಂಕಿ ಹೊತ್ತಿಕೊಂಡಿದೆ. ರೈಲಿನ ಒಂದು ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ.