ಅಂತರಾಷ್ಟ್ರೀಯ ಸುರಂಗ ತಜ್ಞರು ಉತ್ತರಕಾಶಿಯ ಬೌಖನಾಗ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅಪಘಾತ ಸ್ಥಳಕ್ಕೆ ತೆರಳಿದರು !

9 ದಿನಗಳಿಂದ 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾರೆ !

ಉತ್ತರಕಾಶಿ (ಉತ್ತರಾಖಂಡ) – 9 ದಿನಗಳ ನಂತರವೂ ಇಲ್ಲಿನ ಸಿಲ್ಕ್ಯರಾ ಸುರಂಗದಲ್ಲಿ 41 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಹೊರತರಲು ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅದೇ ರೀತಿ ನವೆಂಬರ್ 20 ರಂದು ಬೆಳಗ್ಗೆ ‘ಅಂತಾರಾಷ್ಟ್ರೀಯ ಸುರಂಗ ಮಾರ್ಗದ ಅಂಡರ್ ಗ್ರೌಂಡ್ ಸ್ಪೇಸ್ ಅಸೋಸಿಯೇಷನ್’ ಅಧ್ಯಕ್ಷ ಹಾಗೂ ಅಂತಾರಾಷ್ಟ್ರೀಯ ಸುರಂಗ ತಜ್ಞ ಪ್ರೊ. ಅರ್ನಾಲ್ಡ್ ಡಿಕ್ಸ್ ಕೂಡ ಉತ್ತರಕಾಶಿ ತಲುಪಿದರು. ಆಸ್ಟ್ರೇಲಿಯಾ ಮೂಲದ ಡಿಕ್ಸ್ ಇವರು ರಕ್ಷಣಾ ಕಾರ್ಯಾಚರಣೆಯ ವರದಿಯನ್ನು ಪರಿಶೀಲಿಸುವ ಮೊದಲು ಬಾಬಾ ಬೌಖನಾಗ ದೇವಸ್ಥಾನದಲ್ಲಿ ಪೂಜೆ ಮಾಡಿದರು.

1. ಡಿಕ್ಸ್ ಇವರು ‘ವರ್ಟಿಕಲ್ ಡ್ರಿಲ್ಲಿಂಗ್’ಗಾಗಿ ಎರಡು ಸ್ಥಳಗಳನ್ನು ಗುರುತಿಸಿದರು.

2. ಮತ್ತೊಂದೆಡೆ, ‘ಸಟ್ಲೆಜ್ ಜಲವಿದ್ಯುತ್ ನಿಗಮ’, ಸರ್ಕಾರಿ ಸ್ಥಾಪನೆಯ ಮುಖ್ಯ ಎಂಜಿನಿಯರ್ ಜಸ್ವಂತ್ ಕಪೂರ್ ಇವರು, ಗುಜರಾತ ಮತ್ತು ಒಡಿಶಾದಿಂದ ಇನ್ನೂ ಎರಡು ‘ಡ್ರಿಲ್ಲಿಂಗ್ ಮೆಷಿನ್’ಗಳನ್ನು ಆರ್ಡರ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದರ ಅಂದಾಜು ತೂಕ 77 ಟನ್ ಮತ್ತು ನವೆಂಬರ್ 21 ರ ವರೆಗೆ ಇಲ್ಲಿಗೆ ತಲುಪುವ ನಿರೀಕ್ಷೆಯಿದೆನಿರೀಕ್ಷೆಯಿದೆ ಎಂದರು.

3. ‘ವರ್ಟಿಕಲ್ ಡ್ರಿಲ್ಲಿಂಗ್’ ಯಂತ್ರಕ್ಕಾಗಿ ಸೀಮಾ ರಸ್ತೆ ಸಂಘಟನೆಯು 1 ಸಾವಿರದ 200 ಮೀಟರ್‌ಗಳಲ್ಲಿ 900 ಮೀಟರ್ ರಸ್ತೆ ಸಿದ್ದಪಡಿಸಿದೆ.

4. ಕಳೆದ 7 ದಿನಗಳಲ್ಲಿ ರಕ್ಷಣೆಗಾಗಿ ಬಂದಿರುವ 4 ಯಂತ್ರಗಳು ಮತ್ತು 3 ಯೋಜನೆಗಳು ವಿಫಲವಾಗಿವೆ.  ಹೊಸ ನೀತಿಯಂತೆ ಒಟ್ಟು 9 ಕಂಪನಿಗಳು ಏಕಕಾಲಕ್ಕೆ 5 ಕಡೆಯಿಂದ ಸುರಂಗ ಕೊರೆಯಲಿವೆ.

5. ನವೆಂಬರ್ 12 ರಂದು ಮುಂಜಾನೆ 4 ಗಂಟೆಗೆ ಇಲ್ಲಿನ ಸಿಲ್ಕ್ಯರಾ ಸುರಂಗದಲ್ಲಿ ಅಪಘಾತ ಸಂಭವಿಸಿತ್ತು.  ಸುರಂಗ ಮಾರ್ಗದ ಪ್ರವೇಶ ದ್ವಾರದ 200 ಮೀಟರ್‌ ಅಂತರದಲ್ಲಿ 60 ಮೀಟರ್‌ ಮಣ್ಣು ಕುಸಿದಿದೆ. ಹಾಗಾಗಿ 41 ಕಾರ್ಮಿಕರು ಅದರಲ್ಲಿ ಸಿಲುಕಿ ಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ಇನ್ನಷ್ಟು ಕಲ್ಲುಗಳು ಬಿದ್ದಿದ್ದು, ಕಲ್ಲುಗಳ ರಾಶಿ ಒಟ್ಟು 70 ಮೀಟರ್ ವರೆಗೆ ವ್ಯಾಪಿಸಿವೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರು ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಬಂಗಾಳ ಮತ್ತು ಒಡಿಶಾ ರಾಜ್ಯದವರಾಗಿದ್ದಾರೆ.