ಉತ್ತರ ಕಾಶಿಯಲ್ಲಿ ಕಾಮಗಾರಿ ನಡೆಯುತ್ತಿರುವಾಗ ಸುರಂಗ ಕುಸಿತದಿಂದ ೩೬ ಕಾರ್ಮಿಕರು ಸಿಲುಕಿದ್ದಾರೆ !

ಸಹಾಯ ಕಾರ್ಯ ಜಾರಿ !

ಉತ್ತರಕಾಶಿ (ಉತ್ತರಖಂಡ) – ಇಲ್ಲಿ ಕಾಮಗಾರಿ ನಡೆಯುತ್ತಿರುವ ಸುರಂಗ ಕುಸಿದಿದ್ದರಿರಿಂದ ಅದರ ಅಡಿಯಲ್ಲಿ ಸುಮಾರು ೩೬ ಕಾರ್ಮಿಕರು ಸಿಲುಕಿದ್ದಾರೆ. ಬ್ರಹ್ಮ ಕಮಳ ಮತ್ತು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯರದಿಂದ ದಂಡಲ್‌ಗಾವ ನಡುವೆ ಈ ಸುರಂಗ ಕಟ್ಟಲಾಗುತ್ತಿತ್ತು. ಈಗ ಸುರಂಗದ ಒಳಗೆ ಆಕ್ಸಿಜನ್ ಕಳುಹಿಸಲಾಗುತ್ತಿದೆ. ನವೆಂಬರ್ ೧೨ ರಂದು ಬೆಳಗ್ಗಿನ ಜಾವ ೪ ಗಂಟೆಗೆ ಈ ಘಟನೆ ನಡೆದಿದೆ. ಈ ಸುರಂಗ ೪ ಕಿಲೋಮೀಟರ್ ಉದ್ದವಾಗಿತ್ತು ಸುರಂಗದ ೧೫೦ ಮೀಟರ್ ಭಾಗ ಕುಸಿದಿದೆ. ಅಧಿಕಾರಿಗಳು, ಕಾರ್ಮಿಕರನ್ನು ಹೊರತೆಗೆಯಲು ೨ ರಿಂದ ೩ ದಿನ ಬೇಕಾಗಬಹುದು ಎಂದು ಹೇಳಿದ್ದಾರೆ. ಇಲ್ಲಿ ರಾಷ್ಟ್ರೀಯ ಆಪತ್ತು ಪರಿಹಾರ ತಂಡ ಹಾಗೂ ಇತರ ವ್ಯವಸ್ಥೆ ಮೂಲಕ ಸಹಾಯಕಾರ್ಯ ನಡೆಯುತ್ತಿದೆ. ಈ ಸುರಂಗ ಚಾರಧಾಮ ರಸ್ತೆ ಪ್ರಕಲ್ಪದ ಅಡಿಯಲ್ಲಿ ಕಟ್ಟಲಾಗುತ್ತಿದೆ. ಇದರ ಕಾಮಗಾರಿ ನಂತರ ಉತ್ತರ ಕಾಶಿಯಿಂದ ಯಮುನೋತ್ರಿ ಧಾಮದಲ್ಲಿನ ಅಂತರ ೨೬ ಕಿಲೋಮೀಟರ್ ಕಡಿಮೆ ಆಗಲಿದೆ.