ಪಾಟಲೀಪುತ್ರ (ಬಿಹಾರ) – ಬಿಹಾರದಲ್ಲಿ ಅಪಘಾತದಲ್ಲಿ ಮೃತಪಟ್ಟ ಒಬ್ಬ ವ್ಯಕ್ತಿಯ ಶವವನ್ನು ಪೊಲೀಸರು ಸೇತುವೆಯಿಂದ ಹೊಳೆಗೆ ಎಸೆದಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಶಾಂತವಾಗಿ ಈ ದೃಶ್ಯವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು. (ತಪ್ಪು ವಿಷಯಗಳನ್ನು ವಿರೋಧಿಸಲು ನಾಗರಿಕರಲ್ಲಿ ಧೈರ್ಯ ಇಲ್ಲದಿರುವುದು ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ದೇಶಕ್ಕೆ ನಾಚಿಕೆಗೇಡಿನ ಸಂಗತಿ ! – ಸಂಪಾದಕರು) ಈ ಘಟನೆ ಅಕ್ಟೋಬರ್ 8 ರಂದು ಬಿಹಾರದ ಮುಜಫ್ಫರಪುರದ ಫಾಕುಲಿ ಒಪಿ ಪ್ರದೇಶದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಶವದ ಕೆಲವು ಭಾಗಗಳು ಮತ್ತು ಬಟ್ಟೆಗಳು ಒಟ್ಟಿಗೆ ಅಂಟಿಕೊಂಡಿತ್ತು. ಅದನ್ನು ತೆಗೆಯಲು ಸಾಧ್ಯವಾಗದ ಕಾರಣ ಪಕ್ಕದ ಹೊಳೆಗೆ ಎಸೆಯಲಾಗಿದೆ. (ಆ ಸ್ಥಳದಲ್ಲಿ ಒಬ್ಬ ಪೋಲೀಸ್ ಅಥವಾ ಯಾವುದಾದರೂ ನಾಯಕನಿಗೆ ಅಪಘಾತವಾಗಿದ್ದರೆ, ಪೊಲೀಸರು ಇಂತಹುದೇ ಕೃತ್ಯವನ್ನು ಮಾಡುತ್ತಿದ್ದರೇ ? – ಸಂಪಾದಕರು)
ಸಂಪಾದಕೀಯ ನಿಲುವುಇಂತಹವರನ್ನು ಪೊಲೀಸರು ಎನ್ನಬೇಕೋ ಅಥವಾ ಕಟುಕರು ಎನ್ನಬೇಕೊ ? ಇಂತಹ ಪೋಲೀಸರನ್ನು ಬಂಧಿಸಿ ಜೈಲಿಗೆ ಹಾಕಬೇಕು ! |