ಬಾಬಾ ಬೌಖ ನಾಗ ದೇವತೆಯ ಮಂದಿರವನ್ನು ಕೆಡವಿದಾಕ್ಷಣ, ಸಿಲ್ಕ್ಯಾರಾ ಸುರಂಗದಲ್ಲಿ ಬಿಕ್ಕಟ್ಟು !

ಉತ್ತರಕಾಶಿಯಲ್ಲಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಮತ್ತು ಸುರಕ್ಷಿತವಾಗಿ ಹೊರಬಂದ ಪ್ರಕರಣ

ಉತ್ತರಕಾಶಿ (ಉತ್ತರಾಖಂಡ) – ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸುರಂಗದ ಕೆಲವು ಭಾಗವು ಕುಸಿದಿದ್ದರಿಂದ ಕಳೆದ 17 ದಿನಗಳಿಂದ ಒಳಗೆ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ನವೆಂಬರ್ 28 ರ ಸಂಜೆ ಹಂತಹಂತವಾಗಿ ಹೊರಗೆ ತೆಗೆಯಲಾಯಿತು. 17ನೇ ದಿನ ಕಾರ್ಮಿಕರು ಹೊರಗೆ ಬರುವುದನ್ನು ಕಂಡು ಅವರ ಕುಟುಂಬದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರು ಈ ಕಾರ್ಮಿಕರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಕೂಡ ಅಲ್ಲಿ ಹಾಜರಿದ್ದರು. ಧಾಮಿಯವರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಸೈನಿಕರ ಮಾನಸಿಕಸ್ಥೈರ್ಯ ಮತ್ತು ಧೈರ್ಯವನ್ನು ಪ್ರಶಂಸಿದರು. ಸ್ಥಳಿಯ ಪ್ರಕಾರ, ಬಾಬಾ ಬೌಖ ನಾಗ ದೇವರ ಕೋಪದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ.

ಬಾಬಾ ಬೌಖ ನಾಗ ದೇವತೆಯು ಕೋಪಗೊಂಡಿದ್ದಾನೆ ಎಂದು ಸ್ಥಳೀಯರ ಅಭಿಪ್ರಾಯ !

ಬಾಬಾ ಬೌಖ ನಾಗ ದೇವರ ದೇವಸ್ಥಾನವನ್ನು ನಿರ್ಮಾಣ ಕಂಪನಿಯು ದೀಪಾವಳಿಯ ಕೆಲವು ದಿನಗಳ ಮೊದಲು ನೆಲಸಮಗೊಳಿಸಿತು. ಅದಕ್ಕೆ ಬದಲಾಗಿ ಸುರಂಗದ ಬಳಿ ದೇವಸ್ಥಾನವನ್ನು ನಿರ್ಮಿಸುವುದಾಗಿ ನಿರ್ಮಾಣ ಸಂಸ್ಥೆಯು ಭರವಸೆ ನೀಡಿತ್ತು; ಆದರೆ 2019 ರಿಂದ ಇಲ್ಲಿಯವರೆಗೆ ದೇವಾಲಯವನ್ನು ನಿರ್ಮಿಸಿರಲಿಲ್ಲ. ಇದರೊಂದಿಗೆ ಗ್ರಾಮಸ್ಥರು ನಿರ್ಮಿಸಿದ್ದ ಚಿಕ್ಕ ದೇವಸ್ಥಾನವನ್ನೂ ನಿರ್ಮಾಣ ಕಂಪನಿ ಕೆಡವಿತ್ತು. ಸ್ಥಳೀಯ ನಾಗರಿಕರು ಇದನ್ನು ಹಲವು ಬಾರಿ ನೆನಪಿಸಿದ್ದರು; ಆದರೆ ಅದನ್ನು ನಿರ್ಮಾಣ ಕಂಪನಿಯವರು ನಿರ್ಲಕ್ಷಿಸಿದರು. ಇದಾದ ಬಳಿಕ ಅಪಘಾತ ಸಂಭವಿಸಿದೆ. `ಇದು ದೇವರ ಕೋಪವೇ ಆಗಿದೆ’ ಎಂದು ಸ್ಥಳೀಯರ ಹೇಳಿಕೆಯಾಗಿದೆ.

ಕಾರ್ಮಿಕರ ಬಿಡುಗಡೆಗಾಗಿ ಪೂಜಾರಿಯ ಪ್ರಾರ್ಥನೆ !

ಕಾರ್ಮಿಕರನ್ನು ಹೊರತರುವ ಎಲ್ಲಾ ವ್ಯವಸ್ಥೆಗಳು ವಿಫಲವಾದ ನಂತರ, ನಿರ್ಮಾಣ ಕಂಪನಿಯ ಅಧಿಕಾರಿಗಳು ಬಾಬಾ ಬೌಖ ನಾಗ ದೇವತೆಯ ಅರ್ಚಕರನ್ನು ಭೇಟಿ ಮಾಡಿ, ಅವರಲ್ಲಿ ಕ್ಷಮೆಯಾಚಿಸಿದರು ಮತ್ತು ಪೂಜೆ ಮಾಡಲು ವಿನಂತಿಸಿದರು. ಪೂಜಾರಿ ಗಣೇಶ ಪ್ರಸಾದ ಬಿಜಲವಾನ ಇವರು ಸುರಂಗದಲ್ಲಿ ಪೂಜೆ ಮಾಡಿದರು ಮತ್ತು ಶಂಖ ಊದಿದರು. ಕಾರ್ಮಿಕರನ್ನು ರಕ್ಷಿಸುವ ಈ ಅಭಿಯಾನಕ್ಕೆ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿದರು.

ಮಂದಿರ ಕೆಡವದಂತೆ ಸಲಹೆ ನೀಡಲಾಗಿತ್ತು !

ಸಿಲ್ಕ್ಯಾರಾ ಗ್ರಾಮದ 40 ವರ್ಷದ ಧನವೀರ ಚಂದ ರಾಮೋಲಾ ಮಾತನಾಡಿ, `ಯೋಜನೆ ಪ್ರಾರಂಭವಾಗುವ ಮೊದಲು ಸುರಂಗದ ಬಾಯಿಯ ಬಳಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಲಾಗಿತ್ತು. ಸ್ಥಳೀಯ ದೇವತೆಗೆ ಪ್ರಾರ್ಥನೆ ಸಲ್ಲಿಸಿದ ನಂತರ ಅಧಿಕಾರಿಗಳು ಮತ್ತು ಕೆಲಸಗಾರರು ಸುರಂಗದಲ್ಲಿ ಪ್ರವೇಶಿಸುತ್ತಿದ್ದರು; ಆದರೆ, ಕೆಲ ದಿನಗಳ ಹಿಂದೆ ಕಟ್ಟಡ ನಿರ್ಮಾಣ ಕಂಪನಿಯವರು ದೇವಸ್ಥಾನವನ್ನು ಸ್ಥಳದಿಂದ ತೆಗೆದುಹಾಕಿದರು ಮತ್ತು ಇದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಜನರು ನಂಬಿಕೆಯಾಗಿದೆ.

ಸ್ಥಳೀಯ ದೇವತೆಯ ಸಣ್ಣ ದೇವಾಲಯವನ್ನು ನಿರ್ಮಿಸುವುದು ಪರಂಪರೆ !

ಮತ್ತೊಬ್ಬ ಗ್ರಾಮಸ್ಥ ರಾಕೇಶ್ ನೌಟಿಯಾಲ ಮಾತನಾಡಿ, “ನಾವು ಕಟ್ಟಡ ಕಂಪನಿಯವರಿಗೆ ದೇವಸ್ಥಾನವನ್ನು ಕೆಡವಬೇಡಿ ಅಥವಾ ಹತ್ತಿರದಲ್ಲಿ ಇನ್ನೊಂದು ದೇವಸ್ಥಾನವನ್ನು ನಿರ್ಮಿಸಿರಿ ಎಂದು ಹೇಳಿದ್ದೆವು; ಆದರೆ ಕಂಪನಿಯ ಅಧಿಕಾರಿಗಳು ಮೂಢನಂಬಿಕೆಯಾಗಿದೆಯೆಂದು ಹೇಳುತ್ತಾ, ನಮ್ಮ ಎಚ್ಚರಿಕೆಯನ್ನು ತಳ್ಳಿಹಾಕಿದರು,’ ಎಂದು ಹೇಳಿದರು. ಈ ಹಿಂದೆಯೂ ಸುರಂಗದಲ್ಲಿ ಕೆಲವು ಭಾಗ ಬಿದ್ದಿತ್ತು; ಆದರೆ ಅದರಲ್ಲಿ ಒಬ್ಬ ಕಾರ್ಮಿಕನೂ ಸಿಕ್ಕಿಬಿದ್ದಿರಲಿಲ್ಲ ಅಥವಾ ಯಾವುದೇ ಹಾನಿ ಸಂಭವಿಸಿರಲಿಲ್ಲ.

ಮುಖ್ಯಮಂತ್ರಿ ಧಾಮಿ ಹಾಗೂ ವಿದೇಶಿ ತಜ್ಞರಿಂದ ಪೂಜೆ

ಬಾಬಾ ಬೌಖ ನಾಗ ದೇವರ ಕೋಪದ ಬಗ್ಗೆ ಮಾಹಿತಿ ಪಡೆದ ನಂತರ ಮುಖ್ಯಮಂತ್ರಿ ಪುಷ್ಕರ್‌ಸಿಂಹ ಧಾಮಿ ಮತ್ತು ವಿದೇಶದಿಂದ ಬಂದಿದ್ದ ಅಂತರರಾಷ್ಟ್ರೀಯ ಹೆಸರಾಂತ ಸುರಂಗ ತಜ್ಞರಾದ ಅರ್ನಾಲ್ಡ್ ಡಿಕ್ಸ ಇವರು ಬಾಬಾ ಬೌಖ ನಾಗ ದೇವರಿಗೆ ಪೂಜೆ ಸಲ್ಲಿಸಿದರು.

ಪ್ರಧಾನಮಂತ್ರಿ ಮೋದಿಯವರು ಕೂಡ ಪ್ರಾರ್ಥನೆಗೆ ಕರೆ ನೀಡಿದ್ದರು !

ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಿಗಾಗಿ ಪ್ರಾರ್ಥಿಸುವಂತೆ ಪ್ರಧಾನಿ ಮೋದಿಯವರು ನವೆಂಬರ್ 27 ರಂದು, ದೇಶವಾಸಿಗಳಿಗೆ ಮನವಿ ಮಾಡಿದ್ದರು.

ಸಂಪಾದಕೀಯ ನಿಲುವು

ಈ ವಿಷಯದಲ್ಲಿ ಬುದ್ಧಿವಾದಿಗಳಿಗೆ ಏನು ಹೇಳುವುದಿದೆ ?