-
ದೆಹಲಿಯಲ್ಲಿ ಮಾನವೀಯತೆಗೆ ಮಸಿ ಬಳಿಯುವ ಘಟನೆ !
-
ಕಳ್ಳರಿಂದ ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಳವು
-
ಜನರು ಅಪಘಾತದ ವಿಡಿಯೋ ತಯಾರಿಸುತ್ತಿದ್ದರು
|
ನವದೆಹಲಿ – ಇಲ್ಲಿ ಅಪಘಾತದಲ್ಲಿ ಗಾಯಗೊಂಡ ಯುವಕನ ಸಹಾಯಕ್ಕಾಗಿ ಯಾರು ಮುಂದೆ ಬರದ ಕಾರಣ ಅವನ ಮೃತ್ಯುವಾಯಿತು. ಯುವಕನು ಸಹಾಯ ಕೇಳುತ್ತಿರುವಾಗ ಜನರು ಅವನ ವಿಡಿಯೋ ಮಾಡುತಿದ್ದರು. ಈ ಯುವಕನ ಮೊಬೈಲ್ ಮತ್ತು ಲ್ಯಾಪ್ಟಾಪ್ ಅನ್ನು ಕಳ್ಳರು ಈ ಸಮಯದಲ್ಲಿ ಕಳವು ಮಾಡಿದರು. ಪಿಯೂಷ್ ಪಾಲ(೩೦ ವರ್ಷ) ಎಂಬುದು ಈ ಯುವಕನ ಹೆಸರಾಗಿದೆ. ಈ ಘಟನೆಯಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಎಂದಿನಂತೆ ಪಿಯುಷನು ರಾತ್ರಿ ಸುಮಾರು ೯.೪೫ ಗಂಟೆಯ ಸಮಯದಲ್ಲಿ ಔಟರ್ ರಿಂಗ್ ರೋಡ್ ದಿಂದ ಬೈಕ್ ನಲ್ಲಿ ಹೋಗುತ್ತಿದ್ದನು. ಅನಿರೀಕ್ಷಿತವಾಗಿ ಅವನ ಬೈಕ್ ಅಪಘಾತಕೀಡಾಯಿತು. ಅದರ ನಂತರ ಅವನು ರಸ್ತೆಯಲ್ಲಿ ಸಹಾಯಕ್ಕಾಗಿ ಯಾಚಿಸುತ್ತಿದ್ದನು. ಅದೇ ಸಮಯದಲ್ಲಿ ಕಳ್ಳರು ಅವನ ಮೊಬೈಲ್ ಕದ್ದರು ಆ ಸಮಯದಲ್ಲಿ ಮೊಬೈಲಲ್ಲಿ ಅವನ ಪೋಷಕರ ಫೋನ್ ಬಂದಿರುವಾಗ ಕಳ್ಳರು ಅದನ್ನು ಕಟ್ ಮಾಡಿ ನಂತರ ಫೋನ್ ಸ್ವಿಚ್ ಆಫ್ ಮಾಡಿದರು. ಅಪಘಾತ ಪಿಯೂಷ್ನ ಮನೆಯ ಹತ್ತಿರವೇ ನಡೆದಿತ್ತು. ಆದ್ದರಿಂದ ಅವನ ಫೋನ್ ಕರೆ ಸ್ವೀಕರಿಸಿ ಅವರ ಮನೆಯವರಿಗೆ ಮಾಹಿತಿ ನೀಡಿದ್ದರೆ ಅವನ ಜೀವ ಉಳಿಯುತ್ತಿತ್ತು. ಪಂಕಜ ಜೈನ್ ಎಂಬ ಯುವಕನು ಪಿಯುಷನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದನು ; ಆದರೆ ಅಷ್ಟೊತ್ತಿಗೆ ಪಿಯುಷನು ಸಾವನ್ನಪ್ಪಿದ್ದನು.
ಸಂಪಾದಕೀಯ ನಿಲುವು
- ಭಾರತೀಯರಲ್ಲಿ ನೈತಿಕತೆಯೇ ಉಳಿದಿಲ್ಲದ ಕಾರಣ ಈ ರೀತಿಯ ಘಟನೆಗಳಾಗ ತೊಡಗಿವೆ. ರಾಜಕಾರಣಿಗಳು ಜನರಿಗೆ ನೈತಿಕತೆ ಕಲಿಸದೇ ಇರುವುದರ ಪರಿಣಾಮ ಇದಾಗಿದೆ.
- ಸಹಾಯ ಮಾಡುವವರನ್ನೇ ಅಪರಾಧಿಗಳೆಂದು ಎಂದು ತಿಳಿಯುವ ಪೊಲೀಸರ ಮಾನಸಿಕತೆ ಬದಲಾದರೆ, ಆಗ ಜನರು ಸಹಾಯಕ್ಕಾಗಿ ಮುಂದೆ ಬರುವರು, ಇದು ಕೂಡ ಅಷ್ಟೇ ಸತ್ಯವಾಗಿದೆ.
|