ಕಾರ್ಮಿಕರು ಸುರಕ್ಷಿತವಾಗಿ ಹೊರಬರುವುದು ಒಂದು ಪವಾಡವಾಗಿರುವುದರಿಂದ ನನಗೆ ಅಲ್ಲಿನ ದೇವಸ್ಥಾನಕ್ಕೆ ಹೋಗಿ ಧನ್ಯವಾದ ಹೇಳಬೇಕಾಗಿದೆ ! – ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ತಜ್ಞ ಅರ್ನಾಲ್ಡ್ ಡಿಕ್ಸ್

ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ತಜ್ಞ ಅರ್ನಾಲ್ಡ್ ಡಿಕ್ಸ್ ಹೇಳಿಕೆ !

ಉತ್ತರಕಾಶಿ (ಉತ್ತರಾಖಂಡ) – ಇಲ್ಲಿನ ಸಿಲ್ಕ್ಯಾರಾ ಸುರಂಗದಿಂದ 17 ದಿನಗಳ ನಂತರ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತೆಗೆದ ಬಳಿಕ ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರನ್ನು ಪ್ರಶಂಸಿಸಲಾಗುತ್ತಿದೆ. ಈ ಕಾರ್ಯದಲ್ಲಿ ಅವರ ಕೊಡುಗೆಯೂ ಅಪಾರವಾಗಿದೆ. ಕಾರ್ಯಕರ್ತರನ್ನು ಹೊರಗೆ ತೆಗೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕ್ಸ್, `ನನಗೆ ಸುರಂಗದ ಹೊರಗಿರುವ ದೇವಸ್ಥಾನಕ್ಕೆ ಹೋಗಿ ಕೃತಜ್ಞತೆ ಸಲ್ಲಿಸಬೇಕಾಗಿದೆ. ಕಾರ್ಮಿಕರು ಸುರಕ್ಷಿತವಾಗಿ ಪಾರಾಗಿರುವುದು ಪವಾಡವೇ ಸರಿ. ಏನು ನಡೆದಿದೆಯೋ, ಅದಕ್ಕೆ ಧನ್ಯವಾದ ಹೇಳುವುದಾಗಿ ನಾನು ಪ್ರತಿಜ್ಞೆ ಮಾಡಿದ್ದೇನೆ’ ಎಂದು ಹೇಳಿದರು. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಡಿಕ್ಸ್ ಅವರನ್ನು ಶ್ಲಾಘಿಸಿದರು ಮತ್ತು ಅವರ ಕೆಲಸಕ್ಕೆ ಧನ್ಯವಾದ ಹೇಳಿದರು. ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಥೊನಿ ಅಲ್ಬನಿಸ ಅವರು ಡಿಕ್ಸ ಅವರನ್ನು ಶ್ಲಾಘಿಸುತ್ತಾ, ಅವರಿಗೆ ಅವರ ಕಾರ್ಯಕ್ಕಾಗಿ `ಧನ್ಯವಾದ’ ಹೇಳಿದ್ದಾರೆ.

(ಸೌಜನ್ಯ – Republic World)

ಡಿಕ್ಸ ಮಾತು ಮುಂದುವರೆಸುತ್ತಾ, “ನಿಮಗೆ ನೆನಪಿದೆಯೇ ?” ಈ ಕೆಲಸಗಾರರು ಕ್ರಿಸ್ಮಸ್ ವೇಳೆಗೆ ಹೊರಬರುತ್ತಾರೆ ಎಂದು ನಾನು ನಿಮಗೆ ಹೇಳಿದ್ದೆನು. ಯಾರಿಗೂ ಯಾವುದೇ ನೋವುಂಟಾಗುವುದಿಲ್ಲ. ಕ್ರಿಸ್ಮಸ್ ಸಮೀಪಿಸುತ್ತಿದೆ. ನಾವು ರಕ್ಷಣಾ ಕಾರ್ಯ ಮಾಡುವಾಗ ಶಾಂತವಾಗಿದ್ದೆವು. ‘ಮುಂದಿನ ಕಾರ್ಯ ಯಾವ ಪದ್ಧತಿಯಿಂದ ಮಾಡುವುದು?’ ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಇದೆ. ನಾವು ತಂಡವಾಗಿ ಉತ್ತಮ ಕೆಲಸ ಮಾಡಿದ್ದೇವೆ. ಭಾರತವು ವಿಶ್ವದ ಅತ್ಯುತ್ತಮ ಎಂಜಿನಿಯರ್‌ಗಳನ್ನು ಹೊಂದಿದೆ. ಈ ಯಶಸ್ವಿ ಅಭಿಯಾನದ ಭಾಗವಾಗಿದ್ದೆನು. ಈ ಬಗ್ಗೆ ನನಗೆ ಸಂತೋಷವಾಗಿದೆ ಎಂದು ಹೇಳಿದರು.

ಡಿಕ್ಸ್ ಪ್ರತಿದಿನ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು !

ಅರ್ನಾಲ್ಡ್ ಡಿಕ್ಸ್ ಕೆಲಸದ ನಿಮಿತ್ತ ಸುರಂಗಕ್ಕೆ ಆಗಮಿಸಿದ ದಿನ, ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ಬಾಬಾ ಬೌಖ ನಾಗ ದೇವಾಲಯದಲ್ಲಿ ಮಂಡಿಯೂರಿ ಪ್ರಾರ್ಥನೆ ಮಾಡುವ ಮೂಲಕ ಕೆಲಸವನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿನಿತ್ಯ ದೇವಸ್ಥಾನದ ಮುಂದೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ವಿಷಯದಲ್ಲಿ ಅವರು ಮಾತನಾಡಿ, “ನಾನು ನನಗಾಗಿ ಏನನ್ನೂ ಕೇಳಲಿಲ್ಲ, ಆದರೆ ನಾನು 41 ಕಾರ್ಮಿಕರು ಮತ್ತು ಅವರ ಬಿಡುಗಡೆಗಾಗಿ ಅವರಿಗೆ ಸಹಾಯ ಮಾಡಿದವರಿಗಾಗಿ ಪ್ರಾರ್ಥಿಸುತ್ತಿದ್ದೆ” ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಎಷ್ಟು ತಜ್ಞರು ಈ ಭಾವವನ್ನು ಇಡುತ್ತಾರೆ ?