ಹಮೀರಪುರ (ಉತ್ತರ ಪ್ರದೇಶ): ನದಿಗೆ ನಿರ್ಮಿಸಲಾಗುತ್ತಿದ್ದ ಸೇತುವೆಯ ಸ್ಲ್ಯಾಬ್ ಬಿರುಗಾಳಿಗೆ ಕುಸಿತ: 6 ಕಾರ್ಮಿಕರ ಸಾವು

ಇಲ್ಲಿನ ಬೆತ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯ ಸ್ಲ್ಯಾಬ್ ಮೇ 28ರ ಮಧ್ಯರಾತ್ರಿ ಕುಸಿದು ಬಿದ್ದಿದೆ. ಈ ಭೀಕರ ಅಪಘಾತದಲ್ಲಿ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನುಳಿದ 6 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮುಸ್ಲಿಂ ‘ಪಂಕ್ಚರ್ ಮಾಫಿಯಾ’ಗಳಿಂದ ರಸ್ತೆಯ ಮೇಲೆ ಮೊಳೆಗಳನ್ನು ಎಸೆದು ವ್ಯಾಪಾರ ಹೆಚ್ಚಿಸುವ ಕೃತ್ಯ!

ಕುಖ್ಯಾತ ಮುಸ್ಲಿಂ ‘ಪಂಕ್ಚರ್ ಮಾಫಿಯಾ’ಗಳು ಹಣಕ್ಕಾಗಿ ಮತ್ತೊಮ್ಮೆ ಜನರ ಜೀವಕ್ಕೆ ಕುತ್ತು ತರುವ ಕೃತ್ಯವನ್ನು ಆರಂಭಿಸಿದ್ದಾರೆ. ಈ ಗ್ಯಾಂಗ್ ವಾಹನ ಸವಾರರ ಜೀವದ ಜೊತೆ ಆಟವಾಡುತ್ತಿದೆ.

ವಿಮಾನದಲ್ಲಿ ‘ಪವರ್ ಬ್ಯಾಂಕ್’ ಸ್ಫೋಟ: ೫ ಜನರಿಗೆ ಗಾಯ

ಭಾಗ್ಯನಗರದಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಇಂಡಿಗೋ ಸಂಸ್ಥೆಯ ‘೬ಈ-೧೦೮’ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್‌ ನಲ್ಲಿದ್ದ ‘ಪವರ್ ಬ್ಯಾಂಕ್’ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ೫ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಕರ್ಣಾವತಿ ಏರ್ ಇಂಡಿಯಾ ಅಪಘಾತ: ಲಿಥಿಯಂ ಬ್ಯಾಟರಿ ವೈಫಲ್ಯವೇ ಕಾರಣ

೧೨ ಜೂನ್ ೨೦೨೫ ರಂದು ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುಜರಾತ್‌ನ ಕರ್ಣಾವತಿಯಲ್ಲಿ ಭೀಕರ ಅಪಘಾತಕ್ಕೀಡಾಗಿತ್ತು. ಈ ಪ್ರಕರಣದ ಸರಕಾರಿ ವರದಿಯು ಪೈಲೆಟ್ ಇದಕ್ಕೆ ನೇರ ಹೊಣೆಗಾರ ಎಂದು ಹೇಳಿತ್ತು.

ಕೊಲಂಬಿಯಾ: ಬಸ್ ಬಾಂಬ್ ಸ್ಫೋಟ: 13 ಪ್ರಯಾಣಿಕರ ಸಾವು, 38 ಜನರಿಗೆ ಗಾಯ!

ಪ್ರಾಂತ್ಯದ ಗವರ್ನರ್ ಆಕ್ಟಾವಿಯೊ ಗುಜಮಾನ್ ಅವರು ಈ ಘಟನೆಯ ಕುರಿತು ಮಾತನಾಡಿ, ರಸ್ತೆಯಲ್ಲಿ ಸ್ಫೋಟಕಗಳನ್ನು ಹೂತಿಡಲಾಗಿತ್ತು ಮತ್ತು ಬಸ್ ಅಲ್ಲಿಂದ ಹಾದು ಹೋಗುವಾಗ ‘ರಿಮೋಟ್’ ಸಹಾಯದಿಂದ ಸ್ಫೋಟಿಸಲಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಹಾರಾಟದ ವೇಳೆ ಇಂಜಿನ್‌ ನಲ್ಲಿ ಬೆಂಕಿಯ ಅವಘಡ : ೬ ಪ್ರಯಾಣಿಕರಿಗೆ ಗಾಯ

ಈ ವಿಮಾನದಲ್ಲಿ ೪ ನವಜಾತ ಶಿಶುಗಳು ಸೇರಿದಂತೆ ಒಟ್ಟು ೨೩೨ ಪ್ರಯಾಣಿಕರಿದ್ದರು. ಏಪ್ರಿಲ್ ೨೫ ರಂದು ಮಧ್ಯರಾತ್ರಿ ೧ ಗಂಟೆ ೮ ನಿಮಿಷಕ್ಕೆ ವಿಮಾನವು ಉಡ್ಡಯನ ಮಾಡುತ್ತಿದ್ದಾಗ, ಅದರ ಇಂಜಿನ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡು ಬೆಂಕಿ ಕಾಣಿಸಿಕೊಂಡಿತು.

‘ನಮಗೆ ಹಣ ಬೇಡ; ಆದರೆ ಅಪಘಾತ ಏಕೆ ಸಂಭವಿಸಿತು ಮತ್ತು ಅದರಲ್ಲಿ ಏನಾದರೂ ತಾಂತ್ರಿಕ ದೋಷವಿತ್ತೇ?’ ಎಂಬ ಮಾಹಿತಿ ನೀಡಿ !

ಏರ್‌ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ ಕಳೆದ ವರ್ಷ ಜುಲೈನಲ್ಲಿ ವಿಮಾನ ಅಪಘಾತದ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿತ್ತು. ಅಂತಿಮ ವರದಿಯು ಈ ವರ್ಷದ ಜೂನ್‌ ನಲ್ಲಿ, ಅಂದರೆ ಅಪಘಾತದ ಮೊದಲ ವರ್ಷದ ಸ್ಮರಣಾರ್ಥ ದಿನದ ವೇಳೆ ಬರುವ ಸಾಧ್ಯತೆಯಿದೆ.

ನಾಲಂದಾ (ಬಿಹಾರ) ಇಲ್ಲಿಯ ಶ್ರೀ ಶೀತಲಾ ಮಾತಾ ದೇವಸ್ಥಾನದಲ್ಲಿ ಕಾಲ್ತುಳಿತ: 9 ಮಂದಿ ಸಾವು, ಹಲವರಿಗೆ ಗಾಯ

ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ದೇವಸ್ಥಾನಗಳಲ್ಲಿ ಇಂತಹ ಕಾಲ್ತುಳಿತದ ಘಟನೆಗಳು ನಡೆಯುತ್ತಿದ್ದರೂ, ಅವುಗಳನ್ನು ಶಾಶ್ವತವಾಗಿ ತಡೆಗಟ್ಟಲು ಸರಕಾರ, ಪೊಲೀಸ್, ಆಡಳಿತ ಮಂಡಳಿ ಮತ್ತು ದೇವಸ್ಥಾನದ ವ್ಯವಸ್ಥಾಪಕರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ವಸ್ತುಸ್ಥಿತಿಯಾಗಿದೆ !

ಅಸ್ಸಾಂ: ವಾಯುಪಡೆಯ ಸುಖೋಯ್ ಯುದ್ಧ ವಿಮಾನ ಪತನ : ೨ ಪೈಲಟ್‌ಗಳ ಸಾವು

​ಜೂನ್ ೨೦೨೪ ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾಡ್‌ನ ಶಿರಸಗಾಂವ್ ಗ್ರಾಮದ ಬಳಿ ‘ಸುಖೋಯ್-೩೦ ಎಮ್‌ಕೆಐ’ ವಿಮಾನವು ಪತನಗೊಂಡಿತ್ತು; ಆದರೆ ಪೈಲಟ್ ಮತ್ತು ಸಹ-ಪೈಲಟ್ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದರು.

ನವಿ ಮುಂಬಯಿನಲ್ಲಿ ಮೇಲ್ಚಾವಣಿ ಕುಸಿದು ೧ ವಿದ್ಯಾರ್ಥಿ ಮೃತ, ೧೧ ವಿದ್ಯಾರ್ಥಿಗಳು ಮತ್ತು ೧ ಶಿಕ್ಷಕಿಗೆ ಗಾಯ! – Building Slab Collapses

ಕೊಪರ್‌ಖೈರಣೇಯ ಸೆಕ್ಟರ್-2ರ ವಿದ್ಯಾಭವನ ಕಟ್ಟಡದಲ್ಲಿ ಟ್ಯೂಷನ್ ನಡೆಯುತ್ತಿದ್ದ ವೇಳೆ ಮನೆಯ ಮೇಲ್ಚಾವಣಿ ಕುಸಿದು 9 ವರ್ಷದ ಮನೀಷ್ ಮ್ಹಸೆ ಮೃತನಾಗಿದ್ದು, ಶಿಕ್ಷಕಿ ಸೇರಿ 11 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.