|
ನವ ದೆಹಲಿ – ಭಾರತದಲ್ಲಿ ಯುದ್ಧ ಹಾಗೂ ಭಯೋತ್ಪಾದನೆ ಮತ್ತು ನಕ್ಸಲ ದಾಳಿಗಿಂತ ರಸ್ತೆ ಅಪಘಾತದಲ್ಲಿ ಹೆಚ್ಚಿನ ಜನರು ಜೀವ ಕಳೆದುಕೊಂಡಿದ್ದಾರೆ, ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡಕರಿ ಇವರು ಒಂದು ಕಾರ್ಯಕ್ರಮದಲ್ಲಿ ಇಲ್ಲಿ ಮಾತನಾಡುವಾಗ ಮಾಹಿತಿ ನೀಡಿದರು.
ಗಡಕರಿ ಮಾತು ಮುಂದುವರೆಸಿ,
೧. ಭಾರತದಲ್ಲಿ ಪ್ರತಿ ವರ್ಷ ೫ ಲಕ್ಷ ಅಪಘಾತಗಳು ನಡೆಯುತ್ತವೆ ಮತ್ತು ಒಂದುವರೆ ಲಕ್ಷ ಜನರು ಸಾವನ್ನಪ್ಪುತ್ತಿದ್ದರು ಹಾಗೂ ಸುಮಾರು ೩ ಲಕ್ಷ ಜನರು ಗಾಯಗೊಳ್ಳುತ್ತಾರೆ. ಆದ್ದರಿಂದ ದೇಶದ ಎಲ್ಲಾ ರಾಷ್ಟ್ರೀಯ ಉತ್ಪಾದನೆಗೆ (ಜಿಡಿಪಿಗೆ) ಶೇಕಡ ೩ ರಷ್ಟು ಹಾನಿ ಆಗಿದೆ.
೨. ಹರಕೆಯ ಕುರಿಯಂತೆ ಪ್ರತಿಯೊಂದು ಅಪಘಾತಕ್ಕಾಗಿ ಚಾಲಕನನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ನಾನು ನಿಮಗೆ ಹೇಳುವುದು ಮತ್ತು ನಾನು ಸೂಕ್ಷ್ಮವಾಗಿ ನಿರೀಕ್ಷಣೆ ಕೂಡ ಮಾಡುತ್ತೇನೆ, ರಸ್ತೆ ಇಂಜಿನಿಯರಿಂಗ್ ನಲ್ಲಿ ಬಹಳಷ್ಟು ಬಾರಿ ತಪ್ಪುಗಳು ಆಗುತ್ತವೆ. ಎಲ್ಲಾ ಹೆದ್ದಾರಿಗಳ ಸುರಕ್ಷಾ ಪರಿಶೀಲನೆ ಮಾಡುವ ಆವಶ್ಯಕತೆ ಇದೆ.
೩. ರಸ್ತೆ ಸಾರಿಗೆ ಮತ್ತು ಮಹಾಮಾರ್ಗ ಸಚಿವಾಲಯ ಆಂಬುಲೆನ್ಸ್ ಮತ್ತು ಅದರ ಚಾಲಕರಿಗಾಗಿ ನಿಯಮ ರೂಪಿಸುತ್ತಾರೆ. ಅದರಿಂದ ರಸ್ತೆ ಅಪಘಾತ ಪೀಡಿತರಿಗೆ ತಕ್ಷಣ ಕಾಪಾಡುವುದಕ್ಕಾಗಿ ‘ಕಟರ್’ ನಂತಹ ಯಂತ್ರ ಸಾಮಾಗ್ರಿಯ ಬಳಕೆ ಮಾಡಲು ಪ್ರಶಿಕ್ಷಣ ನೀಡಬಹುದು.
ಸಂಪಾದಕೀಯ ನಿಲುವುಭಾರತೀಯರಿಗೆ ವಾಹನ ಚಾಲನೆಗಾಗಿ ರಸ್ತೆಯಲ್ಲಿ ಚಾಲನೆ ಮಾಡುವಾಗ ಮತ್ತು ನಿಯಮಗಳ ಪಾಲನೆ ಮಾಡುವ ಶಿಸ್ತು ಇಲ್ಲದಿರುವುದರಿಂದ ಅಪಘಾತಗಳು ನಡೆಯುತ್ತವೆ. ಇಲ್ಲಿಯವರೆಗೆ ಎಲ್ಲಾ ಪಕ್ಷದ ಆಡಳಿತಗಾರರು ಜನರಿಗೆ ಈ ಸಂದರ್ಭದಲ್ಲಿ ಶಿಸ್ತು ಕಲಿಸಲಿಲ್ಲ, ಇದೆ ಎಲ್ಲಕ್ಕಿಂತ ದೊಡ್ಡ ಅಪರಾಧವಾಗಿದೆ ! |