|
ಕಾನಪುರ – ಇಲ್ಲಿನ ಶವರಾಜಪುರ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 8 ರಂದು ಬೆಳಿಗ್ಗೆ 8 ಗಂಟೆಗೆ ಇದೇ ಹಳಿಯ ಮೇಲೆ ಭಿವಾನಿಯಿಂದ ಪ್ರಯಾಗರಾಜಗೆ ಹೋಗುವ ಕಾಳಿಂದಿ ಎಕ್ಸ್‌ಪ್ರೆಸ ರೈಲು ಒಂದು ಸಿಲಿಂಡರಿಗೆ ಬಡಿದು ಹಳಿಯಿಂದ ಪಕ್ಕಕ್ಕೆ ಎಸೆಯಲ್ಪಟ್ಟಿತು. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಈ ಘಟನೆಯ ಬಳಿಕ ಕಾಳಿಂದಿ ಎಕ್ಸ್‌ಪ್ರೆಸ್ ರೈಲನ್ನು ಸುಮಾರು 20 ನಿಮಿಷಗಳ ಕಾಲ ನಿಲ್ಲಿಸಲಾಯಿತು.
ಅಪರಿಚಿತರ ವಿರುದ್ಧ ದೂರು ದಾಖಲು !
ರೈಲು ನಿಲ್ಲುತ್ತಲೇ ರೈಲು ಚಾಲಕನು ಘಟನೆಯ ಮಾಹಿತಿಯನ್ನು ರೇಲ್ವೆ ಗಾರ್ಡ ಮತ್ತು ಗೇಟಮ್ಯಾನಗೆ ನೀಡಿದನು. ಘಟನೆಯ ಮಾಹಿತಿ ಸಿಗುತ್ತಲೇ ರೇಲ್ವೆ ಅಧಿಕಾರಿ ಮತ್ತು ರೇಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದರು. ಈ ಸ್ಥಳದಲ್ಲಿ ರೈಲನ್ನು ಸುಮಾರು 20 ನಿಮಿಷ ತಡೆಯಲಾಯಿತು. ಘಟನಾಸ್ಥಳದಿಂದ ರೇಲ್ವೆ ಪೊಲೀಸರು ಸಿಲಿಂಡರನ್ನು ವಶಪಡಿಸಿಕೊಂಡಿದ್ದು, ಅಜ್ಞಾತ ವ್ಯಕ್ತಿಗಳ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ. ಪೊಲೀಸರಿಗೆ ಘಟನಾ ಸ್ಥಳದಲ್ಲಿ ಪೆಟ್ರೋಲ್ ಬಾಟಲಿಗಳು ಮತ್ತು ಕಡ್ಡಿ ಪೊಟ್ಟಣ ಸಿಕ್ಕಿದೆ. ಇದರಿಂದ ಕಾಳಿಂದಿ ಎಕ್ಸಪ್ರೆಸ್ ರೈಲನ್ನು ಅಪಘಾತ ಮಾಡುವ ಷಡ್ಯಂತ್ರವಾಗಿತ್ತೇ ? ಎಂದು ಪೊಲೀಸರಿಗೆ ಅನುಮಾನ ಮೂಡಿದೆ.
3 ವಾರಗಳಲ್ಲಿ ಮೂರನೇ ಘಟನೆ !
ಕಳೆದ 3 ವಾರಗಳಲ್ಲಿ ಇದು ಮೂರನೇ ಘಟನೆಯಾಗಿದೆ. ಆಗಸ್ಟ್ 16 ರಂದು ಕಾನಪುರ ಝಾನ್ಸಿ ಮಾರ್ಗದಲ್ಲಿಯೂ ಇಂತಹದೇ ಅಹಿತಕರ ಘಟನೆ ಸಂಭವಿಸಿತ್ತು. ಆ ಸಮಯದಲ್ಲಿ, ಸಾಬರಮತಿ ಎಕ್ಸ್‌ಪ್ರೆಸ್‌ನ 20 ಬೋಗಿಗಳು ಹಳಿಯಿಂದ ಜಾರಿದ್ದವು. ಈ ಘಟನೆಯಲ್ಲಿ ಕೆಲವು ಜನರು ಗಾಯಗೊಂಡಿದ್ದರು. ತದನಂತರ ಆಗಸ್ಟ್ 23 ರಂದು ಕಾಂಸಗಂಜ ರೇಲ್ವೆ ಮಾರ್ಗದ ಮೇಲೆ ಕಟ್ಟಿಗೆಯನ್ನು ಇಡಲಾಗಿತ್ತು. ಆಗಲೂ ದೊಡ್ಡ ದುರ್ಘಟನೆ ತಪ್ಪಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಅವರು ಮದ್ಯದ ನಶೆಯಲ್ಲಿ ರೇಲ್ವೆ ಹಳಿಯ ಮೇಲೆ ಕಟ್ಟಿಗೆ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದರು.
ಸಂಪಾದಕೀಯ ನಿಲುವುಸರಕಾರ ಇಂತಹ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೀವಾವಧಿ ಶಿಕ್ಷೆ ವಿಧಿಸಬೇಕು ! |