ಮಹಾರಾಷ್ಟ್ರ: ಮೊಸರು ಕುಡಿಕೆ ಆಚರಣೆ ವೇಳೆ 15 ಜನರಿಗೆ ಗಾಯ

(ಮೊಸರು ಕುಡಿಕೆಯನ್ನು ಒಡೆಯುವವರನ್ನು ಮಹಾರಾಷ್ಟ್ರದಲ್ಲಿ ‘ಗೋವಿಂದ’ ಎಂದೂ ಸಹ ಕರೆಯುತ್ತಾರೆ)

ಮುಂಬಯಿ – ಮಹಾರಾಷ್ಟ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಮೊಸರು ಕುಡಿಕೆ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಬಯಿಯಲ್ಲಿಯೂ ಅನೇಕ ಸ್ಥಳಗಳಲ್ಲಿ ಮೊಸರು ಕುಡಿಕೆ ಉತ್ಸವವನ್ನು ಆನಂದದಿಂದ ಆಚರಿಸಲಾಯಿತು. ಆದರೆ ಮೊಸರು ಕುಡಿಕೆ ಒಡೆಯಲು ಯತ್ನಿಸಿದವರಲ್ಲಿ ವಿವಿಧೆಡೆ ಅನೇಕರು ಕುಸಿದು ಬಿದ್ದಿದ್ದರಿಂದ ಒಟ್ಟು 15 ಮಂದಿ ಗೋವಿಂದರು ಗಾಯಗೊಂಡಿದ್ದಾರೆ. ಗಾಯಗೊಂಡವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ.
ಗಾಯಗೊಂಡವರ ತುರ್ತು ಚಿಕಿತ್ಸೆಗಾಗಿ ರಾಜ್ಯ ಸರಕಾರ ಮತ್ತು ಮುಂಬಯಿ ಮಹಾನಗರಪಾಲಿಕೆ ಆಸ್ಪತ್ರೆಗಳನ್ನು ಸಿದ್ಧಪಡಿಸಿತ್ತು. ಕಳೆದ ಎರಡು ವರ್ಷಗಳಲ್ಲಿ ಈ ಉತ್ಸವದಲ್ಲಿ ಗಾಯಗೊಂಡವರ ಸಂಖ್ಯೆ 200 ರವರೆಗೆ ತಲುಪಿದೆ.

ಲಕ್ಷಾಂತರ ರೂಪಾಯಿಗಳ ಬಹುಮಾನ

ಮುಂಬಯಿ ಮತ್ತು ಠಾಣೆಯಲ್ಲಿ ಸುಮಾರು 1,354 ಸ್ಥಳಗಳಲ್ಲಿ ಈ ಮೊಸರು ಕುಡಿಕೆ ಉತ್ಸವವನ್ನು ಆಯೋಜಿಸಲಾಗಿದೆ. ಈ ಬಾರಿ ಕೂಡ ಈ ಉತ್ಸವದಲ್ಲಿ ಗೆದ್ದವರಿಗೆ ಮುಂಬಯಿ ಮತ್ತು ಠಾಣೆಯಲ್ಲಿ ಲಕ್ಷಾಂತರ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ. ಆ ಬಾರಿ ಗಿನ್ನೆಸ್ ಬುಕ್ ವರ್ಲ್ಡ್ ರೆಕಾರ್ಡ್ಸನ ದಾಖಲೆಯನ್ನು ಮುರಿಯುವ ಗೋವಿಂದಾ ತಂಡಕ್ಕೆ 25 ಲಕ್ಷ ರೂ.ಗಳ ಬಹುಮಾನವನ್ನು ನೀಡಲಾಗುವುದು. ಠಾಣೆಯಲ್ಲಿ ಟೆಂಬಿ ನಾಕಾದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆಯವರು ಮೊಸರು ಕುಡಿಕೆ ಒಡೆಯುವ ಪುರುಷರ ತಂಡಕ್ಕೆ 1 ಲಕ್ಷ 51 ಸಾವಿರ ರೂಪಾಯಿ ಮತ್ತು, ಮಹಿಳೆಯರ ತಂಡಕ್ಕೆ 1 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದಾರೆ.

ವರ್ಧಾ ಜಿಲ್ಲೆಯಲ್ಲಿ ವಿದ್ಯುತ್ ತಗುಲಿ ಇಬ್ಬರ ಸಾವು

ವರ್ಧಾ- ಮೊಸರು ಕುಡಿಕೆ ಉತ್ಸವದ ವೇಳೆ `ಡೀಜೆ’ಯ (ದೊಡ್ಡ ಧ್ವನಿಯಲ್ಲಿನ ಧ್ವನಿವರ್ಷಕ) ಪರಿಶೀಲಿಸಲು ಹೋಗಿದ್ದ ಇಬ್ಬರು ಯುವಕರಿಗೆ ವಿದ್ಯುತ್ ತಗುಲಿ ಮರಣ ಹೊಂದಿದ್ದಾರೆ. ಸೂರಜ ಚಿಂದೂಜಿ ಬಾವಣೆ(ವಯಸ್ಸು 27 ವರ್ಷ) ಮತ್ತು ಸೇಜಲ ಕಿಶೋರ ಬಾವಣೆ (ವಯಸ್ಸು 13 ವರ್ಷಗಳು) ಮೃತ ದುರ್ದೈವಿಗಳಾಗಿದ್ದಾರೆ. ವಿದ್ಯುತ್ ವಿತರಣಾ ನಿಗಮದ ಮುಖ್ಯ ಮಾರ್ಗದಿಂದ ನೇರ ವಿದ್ಯುತ್ ಸರಬರಾಜು ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.