ಶಾಹರುಖ್ ನನ್ನು ಹುಡುಕುತ್ತಿರುವ ಪೊಲೀಸರು
ಅಜಮೇರ (ರಾಜಸ್ಥಾನ) – ಕಾನಪುರದ ಬಳಿಕ ಈಗ ರಾಜಸ್ಥಾನದಲ್ಲಿಯೂ ಹಳಿಯ ಮೇಲೆ ಭಾರವಾದ ವಸ್ತುಗಳನ್ನು ಇರಿಸುವ ಮೂಲಕ ರೈಲ್ವೆ ಅಪಘಾತವನ್ನು ನಡೆಸಲು ಪ್ರಯತ್ನ ನಡೆದಿದೆ. ರಾಜಸ್ಥಾನದ ಅಜಮೇರ ಜಿಲ್ಲೆಯಲ್ಲಿ ರೇಲ್ವೆ ಹಳಿಯ ಮೇಲೆ ಸುಮಾರು 100 ಕೆಜಿ ತೂಕದ ಸಿಮೆಂಟ್ ತುಂಡುಗಳು ಪತ್ತೆಯಾಗಿವೆ. ಈ ತುಂಡುಗಳನ್ನು ಅಡ್ಡವಿರಿಸಿ ಗೂಡ್ಸ ರೈಲಿನ ಅಪಘಾತ ಮಾಡುವ ಪ್ರಯತ್ನವನ್ನು ಮಾಡಲಾಗಿದೆ.
ಪೊಲೀಸರಲ್ಲಿ ದೂರು ದಾಖಲು!
ಕೇವಲ ಒಂದು ಸಿಮೆಂಟಿನ ತುಂಡು ಮಾತ್ರವಲ್ಲ, ಅದರ ಮುಂದೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಸಿಮೆಂಟಿನ ಮತ್ತೊಂದು ತುಂಡನ್ನು ಇಡಲಾಗಿತ್ತು. ಅಜಮೇರನ ಸರಾಧನಾ ಮತ್ತು ಬಾಂಗಡ ಗ್ರಾಮ ರೇಲ್ವೆ ನಿಲ್ದಾಣದ ನಡುವೆ ಈ ಅಪಘಾತದ ಪ್ರಯತ್ನವನ್ನು ಮಾಡಲಾಯಿತು. ಈ ಪ್ರಕರಣದಲ್ಲಿ ರೇಲ್ವೆ ಸಿಬ್ಬಂದಿ ರವಿ ಬುಂದೇಲಾ ಮತ್ತು ವಿಶ್ವಜಿತ ದಾಸ ಇವರು ಪೊಲೀಸರಲ್ಲಿ ದೂರ ದಾಖಲಿಸಿದ್ದಾರೆ. ಸಪ್ಟೆಂಬರ 8ರಂದು ರಾತ್ರಿ 10 ಗಂಟೆ 36 ನಿಮಿಷಕ್ಕೆ ರೇಲ್ವೆ ಹಳಿಯ ಮೇಲೆ ಸಿಮೆಂಟ ತುಂಡು ಇಡಲಾಗಿರುವ ಮಾಹಿತಿ ಸಿಕ್ಕಿತು. ಘಟನಾಸ್ಥಳವನ್ನು ತಲುಪಿದಾಗ ಅದು ತುಂಡಾಗಿರುವ ಸ್ಥಿತಿಯಲ್ಲಿ ಕಂಡು ಬಂದಿತು. ಎರಡೂ ತುಂಡು ಬೇರೆ ಬೇರೆ ಸ್ಥಳಗಳಲ್ಲಿ ಇಡಲಾಗಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ನಮೂದಿಸಲಾಗಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದು, ಶಾಹರುಖ್ ಹೆಸರಿನ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ.
ಅಪಘಾತದ ಮೂರನೇ ಪ್ರಯತ್ನ!
ಸಿಮೆಂಟ ತುಂಡುಗಳು ಸಿಕ್ಕ ಬಳಿಕ ರೈಲ್ವೇ ಅಧಿಕಾರಿಗಳು ಸರಾಧನದಿಂದ ಬಾಂಗಡ ಗ್ರಾಮದ ವರೆಗೆ ಪರಿಶೀಲನೆ ನಡೆಸಿದರು; ಆದರೆ ಈ ಮಾರ್ಗದಲ್ಲಿ ಎಲ್ಲವೂ ಸರಿಯಾಗಿದೆಯೆಂದು ಕಂಡು ಬಂದಿತು. ಈ ಹಿಂದೆಯೂ ರೇಲ್ವೆಯ ಅಪಘಾತವನ್ನು ನಡೆಸುವ ಪ್ರಯತ್ನ ನಡೆದಿರುವ ಇದು ಮೂರನೇಯ ಪ್ರಯತ್ನವಾಗಿದೆ. ಈ ಹಿಂದೆಯೂ ಆಗಸ್ಟ 28 ರಂದು ಛಬಡಾದಲ್ಲಿ ಗೂಡ್ಸ ರೈಲಿನ ಮಾರ್ಗದಲ್ಲಿ ಗುಜರಿಯ ದ್ವಿಚಕ್ರವಾಹನವನ್ನು ಇಡಲಾಗಿತ್ತು. ಸೆಪ್ಟೆಂಬರ್ 9 ರಂದು ಉತ್ತರ ಪ್ರದೇಶದ ಕಾನಪುರದಲ್ಲಿ ರೈಲ್ವೆ ಹಳಿಯ ಮೇಲೆ ಸಿಲಿಂಡರ್ ಇಡಲಾಗಿತ್ತು. ಅದಕ್ಕೆ ಕಾಳಿಂದಿ ಎಕ್ಸ್‌ಪ್ರೆಸ್ ಬಡಿದಿತ್ತು.
ಸಂಪಾದಕೀಯ ನಿಲುವು
|