ಬಾರಮೆರ್ (ರಾಜಸ್ಥಾನ) – ಇಲ್ಲಿನ ವಾಯುಪಡೆಯ ವಿಮಾನ ನಿಲ್ದಾಣದ ಬಳಿ ಮಿಗ್-29 ಯುದ್ಧ ವಿಮಾನ ಪತನಗೊಂಡಿದೆ. ವಿಮಾನ ಪತನಗೊಳ್ಳುವ ಮುನ್ನ ಪೈಲಟ್ ಪ್ಯಾರಾಚೂಟ್ ಮೂಲಕ ಹೊರಗೆ ಹಾರಿದ್ದರಿಂದ ಬದುಕಿದನು. ವಿಮಾನ ಪತನಗೊಂಡ ಬಳಿಕ ಬೆಂಕಿ ಹೊತ್ತಿಕೊಂಡಿದೆ. ವಿಶೇಷ ಅಂದರೆ ವಿಮಾನ ಅಪಘಾತಕ್ಕೀಡಾಗಲಿದೆ ಎಂಬ ಕಲ್ಪನೆ ಬಂದ ಮೇಲೆ ಪೈಲಟ್ ನು ವಿಮಾನವನ್ನು ನಿರ್ಜನ ಸ್ಥಳಕ್ಕೆ ತಿರುಗಿಸಿದನು. ಆದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಸಂಪಾದಕೀಯ ನಿಲುವುಮಿಗ್ ವಿಮಾನಗಳು ‘ಹಾರುವ ಶವಪೆಟ್ಟಿಗೆಗಳಾಗಿದ್ದು’ ಅವುಗಳನ್ನು ಭಾರತೀಯ ವಾಯುಪಡೆಯಿಂದ ತೆಗೆದುಹಾಕುವ ಅವಶ್ಯಕತೆ ಇರುವಾಗ ಅವು ಇನ್ನೂ ಬಳಕೆಯಲ್ಲಿವೆ ದುರಾದೃಷ್ಟಕರ ಸಂಗತಿ ! |