|
ಮುಂಬಯಿ – ಮಾಲ್ವಣದಲ್ಲಿರುವ ರಾಜ್‌ಕೋಟ ಕೋಟೆಯಲ್ಲಿ (ಕೋಟೆಯ ಮೇಲೆ) ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು; ಆದರೆ ಅದು ಆಗಸ್ಟ್ 26 ರಂದು ಉರುಳಿದೆ. ಈ ಪ್ರಕರಣದಲ್ಲಿ ಗುತ್ತಿಗೆದಾರ ಜೈದೀಪ್ ಆಪ್ಟೆ ಮತ್ತು ರಚನಾತ್ಮಕ ಸಲಹೆಗಾರ (ಸ್ಟ್ರಕ್ಚರಲ್ ಕನ್ಸಲ್ಟೆಂಟ್) ಚೇತನ ಪಾಟೀಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳ (ಕಲಂಗಳ) ಅಡಿಯಲ್ಲಿ ದೂರನ್ನು ದಾಖಲಿಸಲಾಗಿದೆ. ಭ್ರಷ್ಟಾಚಾರ, ವಂಚನೆ, ಸಾರ್ವಜನಿಕ ಭದ್ರತೆಗೆ ಅಪಾಯಕ್ಕೆ ತರುವುದು ಇತ್ಯಾದಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಮೆಯ ನಿರ್ಮಾಣವು ಕಳಪೆ ಗುಣಮಟ್ಟದ್ದಾಗಿದ್ದು ಅದರ ರಚನೆಯಲ್ಲಿ ಬಳಸಲಾದ ನಟ್ ಮತ್ತು ಬೋಲ್ಟ್‌ಗಳು ತುಕ್ಕು ಹಿಡಿದಿರುವುದು ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.