ಮಂಗಳೂರು : ಉತ್ತರ ಕನ್ನಡ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲ್ವೆ ಸಿಬ್ಬಂದಿ ಮಹಾದೇವ ನಾಯಿಕ್ ಇವರು ಹಳಿಯ ಮೇಲೆ ಐದು ನಿಮಿಷದಲ್ಲಿ 500 ಮೀಟರ್ ಓಡಿ ರೈಲು ದುರಂತ ಆಗುವುದನ್ನು ತಪ್ಪಿಸಿದ್ದಾರೆ.
ಹೌದು ಕುಮಟಾ-ಹೊನ್ನಾವರ ನಡುವಿನ ಹಳಿಯ ವೆಲ್ಡಿಂಗ್ ಬಿಟ್ಟಿತ್ತು. ಇದರಿಂದ ಇದೇ ಮಾರ್ಗದಲ್ಲಿ ಬರುವ ರಾಜಧಾನಿ ಎಕ್ಸ್ಪ್ರೆಸ್ ರೈಲು ದುರಂತವಾಗುವ ಸಾಧ್ಯತೆ ಇತ್ತು. ರಾತ್ರಿ ಕರ್ತವ್ಯದಲ್ಲಿದ್ದ ರೈಲ್ವೆ ನಿರ್ವಾಹಕ ಮಹಾದೇವ ನಾಯಿಕ್, ಹಳಿ ಪರಿಶೀಲನೆ ಮಾಡುವಾಗ ಹಳಿಯ ವೆಲ್ಡಿಂಗ್ ಬಿಟ್ಟಿರುವುದು ಗಮನಕ್ಕೆ ಬಂದಿದೆ. ಅವರು ಕೂಡಲೇ ಸ್ಟೇಶನ್ ಮಾಸ್ಟರ್‌ಗೆ ಕರೆ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಆಗ ಅವರು ತತ್ಪರತೆಯಿಂದ ಕೆಂಪು ದೀಪ ಹಿಡಿದು ಹಳಿ ಮೇಲೆ 500 ಮೀಟರ್ ದೂರದವರೆಗೆ ಓಡಿ ಹೊನ್ನಾವರದಿಂದ ಕಾರವಾರದತ್ತ ಬರುತಿದ್ದ ರೈಲಿಗೆ ಕಂಪು ದೀಪ ತೋರಿಸಿ ರೈಲನ್ನು ನಿಲ್ಲಿಸಿ ಎಲ್ಲರ ಪ್ರಶೆಂಸೆಗೆ ಪಾತ್ರರಾಗಿದ್ದಾರೆ.