ಆಹಾರ ಧಾನ್ಯಗಳ ಪೂರೈಕೆಯ ವಿಳಂಬದ ಬಗ್ಗೆ ಪ್ರಶ್ನಿಸಿದ ರೈತನಿಗೆ ‘ಹೋಗಿ ಸಾಯಿರಿ’ ಎಂದು ಉದ್ಧಟತನದಿಂದ ಉತ್ತರಿಸಿದ ಕರ್ನಾಟಕದ ಸಚಿವ !

ಇಂತಹ ಉದ್ಧಟತನದ ಉತ್ತರವನ್ನು ನೀಡುವುದು ಇದು ಪರಾಕಾಷ್ಠೆಯ ಸಂವೇದನಾಶೂನ್ಯತೆಯಾಗಿದೆ. ಕರ್ನಾಟಕದ ಆಡಳಿತಾರೂಢ ಬಿಜೆಪಿ ಸರಕಾರವು ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ !

ಚೀನಾದ ಸೇನೆಯಿಂದ ಟಿಬೆಟ್‍ನಲ್ಲಿ ರಹಸ್ಯವಾಗಿ ಹೊಸ ಕಮಾಂಡರ್ ನ ನೇಮಕ

ಚೀನಾ ವಿಶ್ವಾಸದ್ರೋಹಿ ಆಗಿರುವುದರಿಂದ, ಭಾರತವು ಅದರ ಪ್ರತಿಯೊಂದು ಕೃತಿಯ ಮೇಲೆ ನಿಗಾವಿಟ್ಟು ಜಾಗರೂಕರಾಗಿರುವುದು ಯೋಗ್ಯವಾಗಿದೆ ! ಚೀನಾವು ಧೂರ್ತತನ ತೋರಿಸಿದರೆ, ಅದಕ್ಕೆ ಪ್ರತ್ಯುತ್ತರ ನೀಡಲು ಭಾರತವು ಸಿದ್ಧವಾಗಿರಬೇಕು !

ಅಂತ್ಯ ಸಂಸ್ಕಾರಕ್ಕಾಗಿ ಸಾಲ ಮಾಡಿ ಸ್ಮಶಾನಭೂಮಿಯ ಸಿಬ್ಬಂದಿಗೆ ಲಂಚ ಕೊಟ್ಟ ಮಹಿಳೆ

ಬೀದಿ ಬೀದಿ ವ್ಯಾಪಾರ ಮಾಡುವ ರಾಧಮ್ಮ ಹೆಸರಿನ ಮಹಿಳೆ ಬಡ್ಡಿ ಸಹಿತ ಸಾಲ ತಂದು ಆಯಂಬುಲೆನ್ಸ್‌ಗೆ ೫ ಸಾವಿರ ಹಾಗೂ ಚಿತಾಗಾರ ಸಿಬ್ಬಂದಿಗೆ ೩ ಸಾವಿರ ನೀಡಿ ಮೃತ ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿದ ದಾರುಣ ಘಟನೆಯು ಶುಕ್ರವಾರ ಯಲಹಂಕದ ಮೇಡಿ ಚಿತಾಗಾರದಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯವಾಗುತ್ತಿದೆ ಎಂದು ದೂರು ನೀಡಿದ್ದಕ್ಕಾಗಿ ಸೈನಿಕನಿಗೆ ಥಳಿತ

ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿರುವ ಸೈನಿಕ ಶ್ರೀನಿವಾಸ ಅವರನ್ನು ಶ್ರೀನಿವಾಸಪುರ ಸರಕಾರಿ ಆಸ್ಪತ್ರೆಯ ಆವರಣದಲ್ಲಿಯೇ ಸಿಬ್ಬಂದಿಗಳು ಹೊಡೆದಿದ್ದಾರೆ. ಅದರಲ್ಲೂ ವಿಶೇಷವೆಂದರೆ ಈ ಪೊಲೀಸರ ಸಮ್ಮುಖದಲ್ಲಿ ಈ ಹಲ್ಲೆಯು ನಡೆದಿದೆ.

ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಶ್ರೀಲಂಕಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಲು ನಿಷೇಧ

ದೇಶದ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸುವ ಪ್ರಸ್ತಾಪಕ್ಕೆ ಶ್ರೀಲಂಕಾದ ಸಚಿವ ಸಂಪುಟವು ಅನುಮೋದನೆಯನ್ನು ನೀಡಿದೆ. ರಾಷ್ಟ್ರೀಯ ಭದ್ರತೆಗೆ ಅಪಾಯವಿರುವುದರಿಂದ ನಿಷೇಧವನ್ನು ಹೇರಲಾಗಿದೆ ಎಂದು ಸರಕಾರವು ಹೇಳಿದೆ.

ಸಭೆಯಲ್ಲಿ ಮಾಸ್ಕ್ ಧರಿಸದೇ ಪಾಲ್ಗೊಂಡ ಥೈಲ್ಯಾಂಡ್‌ನ ಪ್ರಧಾನಿಯಿಂದ ದಂಡ ವಸೂಲಿ !

ಮಾಸ್ಕ್ ಧರಿಸದ ಕಾರಣ ಥೈಲ್ಯಾಂಡ್ ಪ್ರಧಾನಿ ಜನರಲ್ ಪ್ರಯುತ ಚಾನ್ ಓ ಚಾ ಅವರು ೧೪,೨೭೦ ರೂಪಾಯಿ ದಂಡ ತುಂಬಿಸಬೇಕಾಯಿತು. ಅವರು ಮಾಸ್ಕ್ ಧರಿಸದೆ ಒಂದು ಸಭೆಗೆ ಹಾಜರಾಗಿದ್ದರು.

ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಪ್ರದೇಶದಲ್ಲಿ ಉರುಳಿದ ಬೃಹತ್ ಅಕ್ಷಯವಟ ಮರ !

ಕಾಶಿ ವಿಶ್ವನಾಥ ದೇವಸ್ಥಾನ ಪ್ರದೇಶದ ಅಕ್ಷಯವಟ ಹನುಮಾನ ಮಂದಿರ’ ಬಳಿ ದೊಡ್ಡದಾದ ಅಕ್ಷಯವಟ ಮರ ಏಪ್ರಿಲ್ ೨೮ ರಂದು ಉರುಳಿದೆ. ‘ಕಾಶಿ ವಿಶ್ವನಾಥ ದೇವಾಲಯದ ಆಡಳಿತವರ್ಗದವರ ನಿರ್ಲಕ್ಷ್ಯದಿಂದಲೇ ಉರುಳಿದೆ’ ಎಂದು ವಾರಣಾಸಿ ಮಹಂತ ಪರಿವಾರವು ಆರೋಪಿಸಿದೆ.

ಸಾಧನೆ ಮತ್ತು ಧರ್ಮಾಚರಣೆಯನ್ನು ಮಾಡಿದರೆ ಮಾತ್ರ ನಾವು ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಬಹುದು! – ಸದ್ಗುರು ನಂದಕುಮಾರ ಜಾಧವ

ಕೇವಲ ಕರೋನಾ ಸಾಂಕ್ರಾಮಿಕ ಮಾತ್ರವಲ್ಲ, ಇತರ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಉಂಟಾಗುವುದರ ಹಿಂದೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ಅಧರ್ಮಾಚರಣೆಯೇ (ಧರ್ಮಗ್ಲಾನಿ) ಕಾರಣವಾಗಿರುತ್ತದೆ. ಪೃಥ್ವಿಯ ಮೇಲೆ ರಜ-ತಮದ ಪ್ರಮಾಣವು ಹೆಚ್ಚಾದಂತೆ ಆಧ್ಯಾತ್ಮಿಕ ಮಾಲಿನ್ಯವೂ ಹೆಚ್ಚಾಗುತ್ತದೆ.

ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗೆ ತೆರಳಿ ಸೋಂಕಿತರ ಆರೋಗ್ಯ ವಿಚಾರಿಸಿದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ನಲ್ಲಿರುವ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪಿಪಿಇ ಕಿಟ್ ಧರಿಸಿಕೊಂಡು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ರಾಜಸ್ಥಾನದಲ್ಲಿ ಮಾಸ್ಕ್ ಧರಿಸದ ಸಾಧುಗಳನ್ನು ಥಳಿಸಿದ ಕಾಂಗ್ರೆಸ್‌ನ ತೃತೀಯಲಿಂಗಿ ಕಾರ್ಪೊರೇಟರ್

ಹನುಮನ್‌ಗಡದ ಪಿಲಿಬಂಗಾದ ಕಾಂಗ್ರೆಸ್ ನಪುಂಸಕ ಕಾರ್ಪೊರೇಟರ್ ಪೂನಂ ಮಹಂತ್ ಅವರು ಇಬ್ಬರು ಸಾಧುಗಳನ್ನು ಮಾಸ್ಕ್ ಧರಿಸಲಿಲ್ಲ ಎಂಬ ಕಾರಣಕ್ಕೆ ಹೊಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗಿದೆ.