ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಶ್ರೀಲಂಕಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಲು ನಿಷೇಧ

ಪಾಕಿಸ್ತಾನದ ಟೀಕೆ

ಭಾರತವು ಶ್ರೀಲಂಕಾದಿಂದ ಆದರ್ಶವನ್ನು ಯಾವಾಗ ತೆಗೆದುಕೊಳ್ಳುತ್ತದೆ ?

ಕೊಲಂಬೊ (ಶ್ರೀಲಂಕಾ) – ದೇಶದ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸುವ ಪ್ರಸ್ತಾಪಕ್ಕೆ ಶ್ರೀಲಂಕಾದ ಸಚಿವ ಸಂಪುಟವು ಅನುಮೋದನೆಯನ್ನು ನೀಡಿದೆ. ರಾಷ್ಟ್ರೀಯ ಭದ್ರತೆಗೆ ಅಪಾಯವಿರುವುದರಿಂದ ನಿಷೇಧವನ್ನು ಹೇರಲಾಗಿದೆ ಎಂದು ಸರಕಾರವು ಹೇಳಿದೆ. ೨ ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಜಿಹಾದಿ ಉಗ್ರರು ಈಸ್ಟರ್ ಸಂಡೆಯಂದು ಚರ್ಚ್ ಮೇಲೆ ಬಾಂಬ್ ಸ್ಫೋಟಿಸಿದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸರಕಾರದ ಈ ನಿರ್ಧಾರವನ್ನು ಟೀಕಿಸಿದ ಶ್ರೀಲಂಕಾದ ಪಾಕಿಸ್ತಾನದ ರಾಯಭಾರಿಯು ‘ಈ ನಿಷೇಧವು ಕೇವಲ ಶ್ರೀಲಂಕಾದ ಮುಸಲ್ಮಾನರಿಗೆ ಮಾತ್ರವಲ್ಲ ಇದು ವಿಶ್ವದಾದ್ಯಂತದ ಮುಸಲ್ಮಾನರ ಭಾವನೆಗಳಿಗೆ ನೋವುಂಟು ಮಾಡುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.(ಪ್ರತಿಯೊಂದು ದೇಶಕ್ಕೆ ತನ್ನ ರಾಷ್ಟ್ರೀಯ ಭದ್ರತೆಗಾಗಿ ಯಾವುದೇ ಹೆಜ್ಜೆಯನ್ನಿಡುವ ಅಧಿಕಾರವು ಇದೆ. ಪಾಕಿಸ್ತಾನವು ಶ್ರೀಲಂಕಾವನ್ನು ಟೀಕಿಸುವ ಬದಲು ಜಿಹಾದಿ ಭಯೋತ್ಪಾದನೆಯನ್ನು ಟೀಕಿಸುವ ಧೈರ್ಯವನ್ನು ತೋರಿಸಬೇಕು, ತಮ್ಮ ದೇಶದ ಜಿಹಾದಿ ಭಯೋತ್ಪಾದಕರ ಕಾರ್ಖಾನೆಗಳನ್ನು ಮುಚ್ಚಬೇಕು ! – ಸಂಪಾದಕ)