ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯವಾಗುತ್ತಿದೆ ಎಂದು ದೂರು ನೀಡಿದ್ದಕ್ಕಾಗಿ ಸೈನಿಕನಿಗೆ ಥಳಿತ

ಕೋಲಾರದಲ್ಲಿ ನಡೆದ ಘಟನೆ !

ಪೊಲೀಸರ ಸಮ್ಮುಖದಲ್ಲಿ ಥಳಿತ !

ಓರ್ವ ಸೈನಿಕನ ಮೇಲೆ ಕೈ ಎತ್ತುವ ಧೈರ್ಯವಾದರೂ ಹೇಗೆ ಬರುತ್ತದೆ ? ಇಂತಹ ನೌಕರರನ್ನು ಬಂಧಿಸಿ ಜೈಲಿಗೆ ಹಾಕಬೇಕು, ಹಾಗೆಯೇ ನಿಷ್ಕ್ರಿಯ ಪೊಲೀಸರನ್ನು ಅಮಾನತುಗೊಳಿಬೇಕು !

ಕೋಲಾರ (ಕರ್ನಾಟಕ) – ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿರುವ ಸೈನಿಕ ಶ್ರೀನಿವಾಸ ಅವರನ್ನು ಶ್ರೀನಿವಾಸಪುರ ಸರಕಾರಿ ಆಸ್ಪತ್ರೆಯ ಆವರಣದಲ್ಲಿಯೇ ಸಿಬ್ಬಂದಿಗಳು ಹೊಡೆದಿದ್ದಾರೆ. ಅದರಲ್ಲೂ ವಿಶೇಷವೆಂದರೆ ಈ ಪೊಲೀಸರ ಸಮ್ಮುಖದಲ್ಲಿ ಈ ಹಲ್ಲೆಯು ನಡೆದಿದೆ. ಇದಕ್ಕೂ ಮೊದಲು ಶ್ರೀನಿವಾಸ ಇವರು ಉಪಮುಖ್ಯಮಂತ್ರಿ ಅಶ್ವಥ ನಾರಾಯಣ ಇವರಲ್ಲಿಯೂ ಚಿಕಿತ್ಸೆಯ ವಿಷಯದಲ್ಲಿನ ನಿರ್ಲಕ್ಷ್ಯದ ನೀಡುವ ಬಗ್ಗೆ ದೂರು ನೀಡಿದ್ದರು.

ತಮಿಳುನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಅವರ ತಾಯಿ ಕೊರೋನಾ ಸೋಂಕು ತಗಲಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು. ಶ್ರೀನಿವಾಸ ಅವರನ್ನು ನೋಡಲು ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಹೋದಾಗ, ಅವರ ತಾಯಿ ಹಾಸಿಗೆಯ ಮೇಲಿಂದ ಬಿದ್ದು ಗಾಯಗೊಂಡಿದ್ದರು ಮತ್ತು ಅವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲವೆಂದು ಕಂಡು ಬಂದಿತು. ಇದರಿಂದ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಕಾರಣವಾಯಿತು. ಮಧ್ಯಾಹ್ನ ಉಪಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ ಇವರು ಆಸ್ಪತ್ರೆಗೆ ಭೇಟಿ ನೀಡಿದರು. ಆ ಸಮಯದಲ್ಲಿ ಶ್ರೀನಿವಾಸ ಅವರು ಈ ಬಗ್ಗೆ ನಾರಾಯಣ ಇವರಿಗೆ ದೂರು ನೀಡಿದ್ದರು. ಇದಕ್ಕೆ ಆಕ್ಷೇಪಿಸಿದ ಸಿಬ್ಬಂದಿ ಶ್ರೀನಿವಾಸ ಇವರ ಮೇಲೆ ಹಲ್ಲೆ ನಡೆಸಿದರು. ಸ್ಥಳೀಯರು ಘಟನೆಯನ್ನು ಚಿತ್ರೀಕರಿಸಿದ್ದಾರೆ. ಆಸ್ಪತ್ರೆಯ ಇತರ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಥಳಿತವನ್ನು ಪ್ರೋತ್ಸಾಹಿಸಿದರು ಎಂದು ಶ್ರೀನಿವಾಸ ಇವರು ಆರೋಪಿಸಿದರು. ಅದೇರೀತಿ ಹೊಡೆಯುವ ಸಮಯದಲ್ಲಿ ಪೊಲೀಸರು ಕೂಡ ಉಪಸ್ಥಿತರಿದ್ದರು.