ಸಭೆಯಲ್ಲಿ ಮಾಸ್ಕ್ ಧರಿಸದೇ ಪಾಲ್ಗೊಂಡ ಥೈಲ್ಯಾಂಡ್‌ನ ಪ್ರಧಾನಿಯಿಂದ ದಂಡ ವಸೂಲಿ !

ಭಾರತದಲ್ಲಿ ಕಾನೂನುಬಾಹಿರವಾಗಿ ವರ್ತಿಸುವ ರಾಜಕಾರಣಿಗಳಿಂದ ಈ ರೀತಿ ದಂಡವನ್ನು ಸಂಗ್ರಹಿಸುವ ಧೈರ್ಯ ಆಡಳಿತಕ್ಕೆ ಇದೆಯೇ ?

ಬ್ಯಾಂಕಾಕ್ (ಥೈಲ್ಯಾಂಡ್) – ಮಾಸ್ಕ್ ಧರಿಸದ ಕಾರಣ ಥೈಲ್ಯಾಂಡ್ ಪ್ರಧಾನಿ ಜನರಲ್ ಪ್ರಯುತ ಚಾನ್ ಓ ಚಾ ಅವರು ೧೪,೨೭೦ ರೂಪಾಯಿ ದಂಡ ತುಂಬಿಸಬೇಕಾಯಿತು. ಅವರು ಮಾಸ್ಕ್ ಧರಿಸದೆ ಒಂದು ಸಭೆಗೆ ಹಾಜರಾಗಿದ್ದರು. ಮಾಸ್ಕ್ ಧರಿಸುವುದನ್ನು ಬ್ಯಾಂಕಾಕ್‌ನಲ್ಲಿ ಕಡ್ಡಾಯಗೊಳಿಸಲಾಗಿದೆ. ಬ್ಯಾಂಕಾಕ್‌ನ ಗವರ್ನರ್ ಅಸವಿನ್ ಕ್ವಾನ್ಮುವಾಂಗ್ ಅವರು ಪ್ರಧಾನಿ ವಿರುದ್ಧ ದೂರು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.