ಆಹಾರ ಧಾನ್ಯಗಳ ಪೂರೈಕೆಯ ವಿಳಂಬದ ಬಗ್ಗೆ ಪ್ರಶ್ನಿಸಿದ ರೈತನಿಗೆ ‘ಹೋಗಿ ಸಾಯಿರಿ’ ಎಂದು ಉದ್ಧಟತನದಿಂದ ಉತ್ತರಿಸಿದ ಕರ್ನಾಟಕದ ಸಚಿವ !

ಇಂತಹ ಉದ್ಧಟತನದ ಉತ್ತರವನ್ನು ನೀಡುವುದು ಇದು ಪರಾಕಾಷ್ಠೆಯ ಸಂವೇದನಾಶೂನ್ಯತೆಯಾಗಿದೆ. ಕರ್ನಾಟಕದ ಆಡಳಿತಾರೂಢ ಬಿಜೆಪಿ ಸರಕಾರವು ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ !

ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ

ಬೆಂಗಳೂರು (ಕರ್ನಾಟಕ) – ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿಯವರಿಗೆ ಓರ್ವ ರೈತನು, ‘ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಆಹಾರ ಧಾನ್ಯಗಳ ಉಚಿತ ಪೂರೈಕೆ ವಿಳಂಬವಾಗುತ್ತಿರುವುದರಿಂದ ನಾವು ಹೇಗೆ ಬದುಕುಳಿಯಬಹುದು ? ಎಂದು ಪ್ರಶ್ನಿಸಿದಾಗ ಸಚಿವರು ‘ಹೋಗಿ ಸಾಯಿರಿ’ ಎಂದು ಉತ್ತರಿಸಿದರು. ನಂತರ ಸಚಿವರು ಸ್ಪಷ್ಟೀಕರಣ ನೀಡುವಾಗಲೂ ಅದೇ ರೀತಿ ಉದ್ಧಟತನವಿತ್ತು.

೧. ಉತ್ತರ ಕನ್ನಡ ಜಿಲ್ಲೆಯ ಓರ್ವ ರೈತನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಆಹಾರ ಧಾನ್ಯಗಳನ್ನು ಉಚಿತವಾಗಿ ಪೂರೈಕೆಯು ಯೋಗ್ಯರೀತಿಯಲ್ಲಿ ಆಗುತ್ತಿಲ್ಲ, ಎಂದು ಉಮೇಶ ಕತ್ತಿಯವರಿಗೆ ಪ್ರತ್ಯಕ್ಷ ಭೇಟಿಯಾಗಿ ದೂರು ನೀಡಿದ್ದನು. ಅದಕ್ಕೆ ಪ್ರತಿ ಕುಟುಂಬಕ್ಕೆ ೫ ಕೆಜಿ ಧಾನ್ಯವನ್ನು ಪೂರೈಸಲು ಸರಕಾರವು ಆದೇಶಿಸಿದೆ ಎಂದು ಅವರು ರೈತರಿಗೆ ತಿಳಿಸಿದರು; ಆದರೆ, ಆದೇಶದ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ರೈತರು ಸಚಿವರಿಗೆ ಗಮನಕ್ಕೆ ತಂದುಕೊಟ್ಟರು ಮತ್ತು ‘ಆಹಾರ ಧಾನ್ಯಗಳ ಸರಬರಾಜು ಆಗುವವರೆಗೆ ನಾವು ಹೇಗೆ ಬದುಕುವುದು ?’ ಎಂದು ಪ್ರಶ್ನೆಯನ್ನು ವಿಚಾರಿಸಿದರು. ಅದಕ್ಕೆ ಸಚಿವರು ‘ಹೋಗಿ ಸಾಯಿರಿ’ ಎಂದು ಉತ್ತರಿಸಿದರು.

೨. ಉಮೇಶ್ ಕತ್ತಿ ಅವರ ಉತ್ತರಕ್ಕೆ ಸಮಾಜದಿಂದ ಸಾಕಷ್ಟು ಟೀಕೆಗಳಾದಾಗ ಅದಕ್ಕೆ ಸ್ಪಷ್ಟೀಕರಣ ನೀಡುತ್ತಾ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಅವರು “ರೈತನು ಚುಚ್ಚುವಂತೆ ಪ್ರಶ್ನೆ ಕೇಳಿದಾಗ; ನಾನು ಅವನಿಗೆ ಅದೇ ಭಾಷೆಯಲ್ಲಿ ಉತ್ತರಿಸಿದೆ.” ಎಂದರು (ಪ್ರಜಾಪ್ರಭುತ್ವದಲ್ಲಿ ಮಂತ್ರಿಗಳು ಜನರ ಸೇವಕರಾಗಿರುತ್ತಾರೆ. ಆದ್ದರಿಂದ ಅವರು ಇಂತಹ ಘಟನೆಗಳನ್ನು ಶಾಂತವಾಗಿ ಮತ್ತು ನಯವಾಗಿ ನಿಭಾಯಿಸುವುದು ಅಪೇಕ್ಷಿತವಿದೆ ! – ಸಂಪಾದಕರು) ಇದಕ್ಕೆ ಪತ್ರಕರ್ತನು ಕತ್ತಿಯವರಿಗೆ, ‘ರಾಜ್ಯ ಸರಕಾರವು ಸಂಪೂರ್ಣವಾಗಿ ಸಹಾಯ ಮಾಡುತಿದೆ. ನೀವು ಸಾಯುವ ಆಲೋಚನೆಯನ್ನು ಬಿಟ್ಟುಬಿಡಿ ಎಂದು ಹೇಳಬಹುದಿತ್ತಲ್ಲ.’ ಎಂದು ಹೇಳಿದಾಗ ಕತ್ತಿಯವರು ತಮ್ಮ ಮಾತಿಗೆ ಬದ್ಧರಾಗಿದ್ದರು.