ಪೊಲೀಸರು ರಾತ್ರಿಯಿಡೀ ಆಮ್ಲಜನಕ ವಾಹನವನ್ನು ತಡೆ ಹಿಡಿದು ನಿಲ್ಲಿಸಿದುದೇ ಕೊರೋನಾ ರೋಗಿಯ ಮರಣವಾಗಿದೆ ಎಂದು ಹೇಳಿಕೆ.

ಪೊಲೀಸರು ಇಲ್ಲಿ ರಾತ್ರಿಯಿಡೀ ಆಮ್ಲಜನಕವನ್ನು ಸಾಗಿಸುವ ವಾಹನವನ್ನು ನಿಲ್ಲಿಸಿದ್ದರಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಆದರೆ ಪೊಲೀಸರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಬಾಗಲಕೋಟೆಯಲ್ಲಿ ಲಂಚ ಸಂಗ್ರಹದ ಪ್ರಕರಣದಲ್ಲಿ ಆರೋಗ್ಯಾಧಿಕಾರಿಯ ಬಂಧನ

ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ನಿಡಸನೂರ ಇವರನ್ನು ಲಂಚ ಸಂಗ್ರಹದ ಪ್ರಕರಣದಲ್ಲಿ ಬಂಧಿಸಲಾಗಿದೆ. ಇವರು ಜಿಲ್ಲೆಯಲ್ಲಿರುವ ಆರೋಗ್ಯ ಇಲಾಖೆಯ ವಿವಿಧ ಕಚೇರಿಗಳಿಂದ ಪರ್ಸೆಂಟೇಜ್ ಆಧಾರದಲ್ಲಿ ಲಂಚದ ಹಣ ಸಂಗ್ರಹಿಸುತ್ತಿದ್ದರು.

ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಬೆಲೆಬಾಳುವ ವಸ್ತುಗಳು ಕಳವು

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿವೊಬ್ಬರಿಂದ ಬೆಲೆಬಾಳುವ ವಸ್ತುಗಳನ್ನು ಆಸ್ಪತ್ರೆಯಲ್ಲಿ ಕಳವು ಮಾಡಿರುವ ಆರೋಪ ಕೇಳಿಬಂದಿದೆ. ಅತ್ತಿಬೆಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದರು.

ಬೆಂಗಳೂರಿನ ಆಕ್ಸಫರ್ಡ್ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹದ ಬಗ್ಗೆ ನಿರ್ಲಕ್ಷ್ಯ

ಕೊರೋನಾದಿಂದ​ಮೃತಪಟ್ಟ ವ್ಯಕ್ತಿಯ ಶವವನ್ನು ಆಸ್ಪತ್ರೆಯ ನೆಲದ ಮೇಲೆ ಹಾಗೆಯೆ ಬಿಟ್ಟು ನಿರ್ಲಕ್ಷ್ಯ ತೋರಿರುವ ಘಟನೆ ಇಲ್ಲಿನ ಅತ್ತಿಬೆಲೆ-ಯಡವನಹಳ್ಳಿ ಗೇಟ್​​ ಬಳಿ ಇರುವ ಆಕ್ಸ್​​​​​ಫರ್ಡ್​​​​ ಆಸ್ಪತ್ರೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

‘ಕೊರೋನಾ ಸಾಂಕ್ರಾಮಿಕ ರೋಗದ ನಡುವೆಯೂ ಲಕ್ಷಾಂತರ ಹಿಂದೂಗಳ ಮತಾಂತರ’ ಈ ಆನ್‌ಲೈನ್ ವಿಶೇಷ ಸಂವಾದದ ಮೂಲಕ ‘ಮತಾಂತರ ನಿಷೇಧ’ದ ಬೇಡಿಕೆ !

ಕೊರೋನಾದ ಜಾಗತಿಕ ಸಾಂಕ್ರಾಮಿಕ ಕಾಲದಲ್ಲಿ ನಿಸ್ವಾರ್ಥ ಭಾವದಿಂದ ಸಹಕಾರದ ಅವಶ್ಯಕತೆಯಿರುವಾಗ ಮತಾಂತರ ಮಾಡುವವರು ‘ಹಿಂದೂಗಳ ಮತಾಂತರ ಮಾಡುವ ಒಂದು ದೊಡ್ಡ ಅವಕಾಶವಾಗಿದೆ’ ಎಂದು ತಿಳಿಯುತ್ತಿದ್ದಾರೆ ಮತ್ತು ಅವರು ಹಾಗೆ ಮಾಡಲೂ ಪ್ರಯತ್ನಿಸುತ್ತಿದ್ದಾರೆ. ಇದು ಮಾನವೀಯತೆಗೆ ದೊಡ್ಡ ಕಳಂಕವಾಗಿದೆ.

ಗುರುಗಳು ಸುಖದ ಸಾಗರ | ಗುರುಗಳು ಪ್ರೇಮದ ಆಗರ

ನಮ್ಮ ದಯಾಳು ಮತ್ತು ಸರ್ವಜ್ಞರಾದ ಪ.ಪೂ. ಗುರುದೇವರು ಭೀಕರ ಕಲಿಯುಗವಿದ್ದರೂ ನಮಗೆ ಸಾಧ್ಯವಾಗುವಂತಹ ಸುಲಭ ಸಾಧನಾಮಾರ್ಗವನ್ನು ಲಭ್ಯ ಮಾಡಿಕೊಟ್ಟಿದ್ದಾರೆ ಮತ್ತು ಪ.ಪೂ. ಗುರುದೇವರ ತಳಮಳದಿಂದಾಗಿ ಸಾಧಕರು ಪ್ರಗತಿಯ ಪಥದ ಕಡೆಗೆ ಮಾರ್ಗಕ್ರಮಣ ಮಾಡುತ್ತಿದ್ದಾರೆ.

‘ಸನಾತನ ಪ್ರಭಾತ ಪತ್ರಿಕೆಯು ನಿಮ್ಮದೇ ಆಗಿದೆ, ಎಂದು ಹಿಂದುತ್ವನಿಷ್ಠರಿಗೆ ಹೇಳಿ ಆಧಾರ ನೀಡುವುದು

‘ಸನಾತನ ಪ್ರಭಾತವು ‘ಸನಾತನ ಸಂಸ್ಥೆಯ ಮುಖವಾಣಿ ಪತ್ರಿಕೆಯಾಗಿದೆ, ಎಂದು ಸಮಾಜವು ತಿಳಿಯುತ್ತದೆ; ಆದರೆ ಪರಾತ್ಪರ ಗುರು ಡಾಕ್ಟರರು ಮಾತ್ರ ‘ಸನಾತನ ಪ್ರಭಾತವು ‘ಸಮಸ್ತ ಹಿಂದುತ್ವವಾದಿಗಳ ಮುಖವಾಣಿ ಪತ್ರಿಕೆ ಎಂದು ಕಾರ್ಯ ಮಾಡಬೇಕು, ಎಂಬ ಬೋಧನೆಯನ್ನು ಸಾಧಕರಿಗೆ ನೀಡಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರು ತಾವು ಉಪಯೋಗಿಸಿದ ವಸ್ತುಗಳನ್ನು ಸಾಧಕರಿಗೆ ಚೈತನ್ಯವನ್ನು ಪಡೆಯಲು ಕೊಡುವುದು

‘ಸಾಧಕರಿಗೆ ಸಕಾರಾತ್ಮಕ ಶಕ್ತಿ ಸಿಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ವಸ್ತುಗಳನ್ನು ಸಾಧಕರಿಗೆ ಕೋಣೆಯಲ್ಲಿನ ಕಪಾಟಿನಲ್ಲಿ ಅಥವಾ ಹಾಸಿಗೆಯ ಕೆಳಗಡೆ ಇಡಲು ಕೊಡುತ್ತಾರೆ. ಇತರ ಸಂತರು ಭಕ್ತರಿಗೆ ವಿಭೂತಿಯನ್ನು ನೀಡುತ್ತಾರೆ, ಆದರೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಚೈತನ್ಯವನ್ನು ದೊರಕಿಸಿಕೊಡಲು ಇಂತಹ ವಸ್ತುಗಳನ್ನು ಕೊಡುತ್ತಾರೆ !

ವಿವಿಧ ಬುದ್ಧಿಗೆ ಮೀರಿದ ಬದಲಾವಣೆಗಳ ಕುರಿತು ಪ.ಪೂ. ಡಾಕ್ಟರರ ವಿಶ್ಲೇಷಣೆ

ಇದರ ಒಂದು ಸುಂದರ ಉದಾಹರಣೆಯೆಂದರೆ ಸೂರ್ಯನು ಉದಯಿಸಿದಾಗ ಎಲ್ಲರೂ ಏಳುತ್ತಾರೆ, ಹೂವುಗಳು ಅರಳುತ್ತವೆ.ಇದು ಕೇವಲ ಸೂರ್ಯನ ಅಸ್ತಿತ್ವದಿಂದಾಗುತ್ತದೆ. ಸೂರ್ಯನು ಯಾರಿಗೂ ‘ಏಳಿರಿ’ ಅಥವಾ ಹೂವುಗಳಿಗೆ ‘ಅರಳಿರಿ’ ಎಂದು ಹೇಳುವುದಿಲ್ಲ !’

ಪರಾತ್ಪರ ಗುರು ಡಾ. ಆಠವಲೆಯವರ ಪ್ರೀತಿಯ ವ್ಯಾಪಕತೆ

ವಿಕಲ್ಪಗಳಿಂದಾಗಿ ಸಾಧನೆಯಿಂದ ದೂರವಾಗಿರುವ ಸಾಧಕರ ಬಗ್ಗೆಯೂ ಅವರ ಮನಸ್ಸಿನಲ್ಲಿ ದ್ವೇಷ ನಿರ್ಮಾಣವಾಗುವುದಿಲ್ಲ. ವಿಕಲ್ಪಗಳಿಂದ ದೂರವಾಗಿರುವ ಸಾಧಕರು ಕೆಲವು ಕಾಲಾವಧಿಯ ಬಳಿಕ ಮರಳಿ ಬಂದಾಗಲೂ ಪರಾತ್ಪರ ಗುರು ಡಾಕ್ಟರರು ಅವರನ್ನು ಅಷ್ಟೇ ಸಹಜವಾಗಿ ಆತ್ಮೀಯತೆಯಿಂದ ತಮ್ಮವರನ್ನಾಗಿ ಮಾಡಿಕೊಳ್ಳುತ್ತಾರೆ.