ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಗಾಗಿ ‘ಮೆಡಿಕಲ್ ಆಪ್’ ನಿರ್ಮಿಸಲು ಪ್ರಯತ್ನಿಸಿದ್ದ ನೇತ್ರತಜ್ಞನ ಬಂಧನ

ಇಸ್ಲಾಮಿಕ್ ಸ್ಟೇಟ್‌ನ ಖುರಾಸಾನ ಗುಂಪಿಗಾಗಿ ಸಕ್ರಿಯವಿರುವ ಡಾ. ಅಬ್ದೂರ್ ರೆಹಮಾನ್ ಈ ೨೮ ವರ್ಷದ ನೇತ್ರತಜ್ಞನನ್ನು ರಾಷ್ಟ್ರೀಯ ತನಿಖಾ ತಂಡವು (ಎನ್.ಐ.ಎ.ಯು) ಬೆಂಗಳೂರಿನಲ್ಲಿ ಬಂಧಿಸಿದೆ. ಆತ ಇಲ್ಲಿಯ ಎಮ್.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಡಾ. ಅಬ್ದೂರ್ ೨೦೧೪ ರಲ್ಲಿ ಸಿರಿಯಾಗೂ ಹೋಗಿ ಬಂದಿದ್ದಾನೆ.

ಬೆಂಗಳೂರು ಗಲಭೆಗೆ ಇಸ್ಲಾಮಿಕ್ ಸ್ಟೇಟ್‌ನ ನಂಟಿರುವ ಶಂಕೆ

ಬೆಂಗಳೂರು ಗಲಭೆ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ಈ ಉಗ್ರ ಸಂಘಟನೆಯ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಪ್ರಾಥಮಿಕ ಸಾಕ್ಷ್ಯಗಳು ಲಭಿಸಿವೆ. ಗಲಭೆಗೆ ಉಗ್ರರ ಕೈವಾಡ ಇರುವುದು ಬಯಲಾಗುತ್ತಿದ್ದಂತೆ ಕೇಂದ್ರೀಯ ತನಿಖಾ ತಂಡ ಬೆಂಗಳೂರಿನಲ್ಲಿ ಅಫ್ರೋಜ್ ಹೆಸರಿನ ಶಂಕಿತನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಭಗವಾನ ಶ್ರೀಕೃಷ್ಣ ಹಾಗೂ ಗೋಪಿಯರ ಅಶ್ಲೀಲ ಚಿತ್ರವನ್ನು ಬಿಡಿಸುವ ಅಸ್ಸಾಂನ ಹಿಂದೂದ್ವೇಷಿ ಚಿತ್ರಕಾರ ಆಕ್ರಮ ಹುಸೇನ್ ಮೇಲೆ ೫ ವರ್ಷಗಳ ನಂತರವೂ ಕ್ರಮ ಕೈಗೊಂಡಿಲ್ಲ !

೨೦೧೫ ರಲ್ಲಿ ಹುಸೇನ್ ವಿರುದ್ಧ ‘ಹಿಂದೂ ಲೀಗಲ್ ಸೆಲ್’ನ ಆಸ್ಸಾಂನ ಸಂಯೋಜಕರಾದ ನ್ಯಾಯವಾದಿ ಧರ್ಮಾನಂದ ದೇವ ಇವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಆಗ ಪೊಲೀಸರು ಹುಸೇನ ಹಾಗೂ ‘ಗೌಹಾಟಿ ರಾಜ್ಯ ಆರ್ಟ್ ಗ್ಯಾಲರಿ’ಯ ಅಧಿಕಾರಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಕಲಂ ೩೪ ಹಾಗೂ ೨೯೫(ಅ) ಅಂತರ್ಗತದಲ್ಲಿ ಅಪರಾಧವನ್ನು ದಾಖಲಿಸಲಾಗಿತ್ತು.

ಅಮೇರಿಕಾದ ಡೆಮೊಕ್ರೆಟಿಕ್ ಪಕ್ಷದ ‘ಆನ್‌ಲೈನ್’ ರಾಷ್ಟ್ರೀಯ ಸಮ್ಮೇಳನದ ಪ್ರಾರ್ಥನಾ ಸಭೆಯಲ್ಲಿ ವೇದ ಹಾಗೂ ಮಹಾಭಾರತದ ಶ್ಲೋಕಗಳ ಪಠಣ !

ಅಮೇರಿಕಾದ ಡೆಮೊಕ್ರೆಟಿಕ್ ಪಕ್ಷದ ‘ಆನ್‌ಲೈನ್’ ರಾಷ್ಟ್ರೀಯ ಸಮ್ಮೇಳನವು ‘ಸರ್ವಧರ್ಮ ಪ್ರಾರ್ಥನಾಸಭೆ’ಯ ಮೂಲಕ ಆರಂಭವಾಯಿತು. ಇದರಲ್ಲಿ ವೇದ ಹಾಗೂ ಮಹಾಭಾರತಗಳ ಶ್ಲೋಕ, ಅದೇರೀತಿ ಸಿಕ್ಖ್ ಧರ್ಮದ ‘ಅರದಾಸ’ನನ್ನೂ ಪಠಿಸಲಾಯಿತು. ಟೆಕ್ಸಾಸ್(ಕೆನಡಾ)ನಲ್ಲಿಯ ಚಿನ್ಮಯ ಮಿಶನ್‌ನ ಓರ್ವ ಅನುಯಾಯಿಯು ವೇದಮಂತ್ರೋಚ್ಚಾರ ಮಾಡಿದರು.

ಎಸ್.ಡಿ.ಪಿ.ಐ. ಈ ಮತಾಂಧ ರಾಜಕೀಯ ಪಕ್ಷದ ಕಛೇರಿಯಲ್ಲಿ ಮಾರಕಾಸ್ತ್ರಗಳೊಂದಿಗೆ ೮ ಗಲಭೆಕೋರರ ಬಂಧನ

ಬೆಂಗಳೂರು ಗಲಭೆ ಪ್ರಕರಣದಲ್ಲಿ ಹೆಗ್ಗಡೆನಗರದ ಎಸ್.ಡಿಪಿಐ ಕಚೇರಿ ಮೇಲೆ ನಡೆದ ಸಿಸಿಬಿ ಪೊಲೀಸರ ದಾಳಿ ಮಾಡಿ ೮ ಮತಾಂಧರನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಕಬ್ಬಿಣದ ರಾಡ್, ಬ್ಯಾಟ್ ಸಮೇತ ಹಲವು ಮಾರಕಾಸ್ತ್ರಗಳು ಪತ್ತೆಯಾಗಿವೆ. ಇದರಿಂದ ಪೊಲೀಸರಿಗೆ ಈ ಗಲಭೆಯಲ್ಲಿ ‘ಎಸ್‌ಡಿಪಿಐ’ ಭಾಗಿಯಾಗಿದ್ದರ ಬಗ್ಗೆ ಪುರಾವೆಗಳು ಸಿಕ್ಕಿದೆ.

ಬೆಂಗಳೂರಿನ ಮತಾಂಧ ಗಲಭೆಕೋರರಿಂದ ನಷ್ಟವನ್ನು ತುಂಬಿಸಿಕೊಳ್ಳಿ ! ಹಿಂದೂ ವಿಧಿಜ್ಞ ಪರಿಷತ್ತಿನಿಂದ ಕರ್ನಾಟಕ ಸರಕಾರಕ್ಕೆ ಮನವಿ

ಗಲಭೆಕೋರರನ್ನು ಬಂಧಿಸುವುದು ಹಾಗೂ ಅವರನ್ನು ಸೆರೆಮನೆಗೆ ತಳ್ಳುವುದು ಇತ್ಯಾದಿ ಇದು ಸರಕಾರ, ಗೃಹಇಲಾಖೆ ಮತ್ತು ಪೊಲೀಸರ ಕರ್ತವ್ಯವಾಗಿದೆ; ಆದರೂ ಸರಕಾರದ ವತಿಯಿಂದ ಗಂಭೀರವಾದ ಹೆಜ್ಜೆಯನ್ನಿಟ್ಟು ಆರೋಪಿಗಳಿಗೆ ಜಾಮೀನು ಸಿಗದಂತೆ ಹಾಗೂ ಖಟ್ಲೆ ಯೋಗ್ಯ ರೀತಿಯಲ್ಲಿ ನಡೆಸಬೇಕೆಂದು ಪ್ರಯತ್ನಿಸಬೇಕು.

‘ಭಾರತ ಮಾತಾ ಕಿ ಜೈ’ ಹಾಗೂ ‘ವಂದೇ ಮಾತರಮ್’ನ ಘೋಷಣೆ ನೀಡದ ದೆಹಲಿಯ ಮುಖ್ಯಮಂತ್ರಿ ಕೆಜರಿವಾಲ !

ಗಸ್ಟ್ ೧೫ ರ ಸ್ವಾತಂತ್ರ್ಯದಿನದಂದು ಕೆಂಪು ಕೋಟೆಯಲ್ಲಿ ಧ್ವಜವಂದನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಯನ್ನು ಎತ್ತಿ ‘ಭಾರತಮಾತಾ ಕೀ ಜೈ’ ಹಾಗೂ ‘ವಂದೇ ಮಾತರಮ್’ ಘೋಷಣೆ ನೀಡುವಂತೆ ಎಲ್ಲರಿಗೆ ಕರೆ ನೀಡಿದ್ದರು. ಇದೇ ಸಮಯದಲ್ಲಿ ಅಲ್ಲಿ ಉಪಸ್ಥಿತ ಎಲ್ಲರೂ ಮೋದಿಯವರ ಕರೆಗೆ ಸ್ಪಂದಿಸುತ್ತಾ ಘೋಷಣೆಯನ್ನು ಕೂಗಿದರು; ಆದರೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೆಜರಿವಾಲ ಇವರು ಘೋಷಣೆ ಕೂಗಲಿಲ್ಲ, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಫ್ರಾಂಕ್‌ಫರ್ಟ್(ಜರ್ಮನಿ)ನಲ್ಲಿ ಪಾಕಿಸ್ತಾನದ ನಾಗರಿಕರಿಗೆ ಪ್ರತ್ಯುತ್ತರ ನೀಡಿದ ಭಾರತೀಯ ಯುವಕ !

ಆಗಸ್ಟ್ ೧೫ ರಂದು ಭಾರತದ ಸ್ವಾತಂತ್ರ್ಯದಿನದಂದು ಜರ್ಮನಿಯ ಫ್ರಾಂಕ್‌ಫರ್ಟ್‌ದಲ್ಲಿ ಪಾಕಿಸ್ತಾನಿ ನಾಗರಿಕರು ಪಾಕಿಸ್ತಾನದ ಸ್ವಾತಂತ್ರ್ಯದಿನವನ್ನು ಆಚರಿಸುವಾಗ ಭಾರತವಿರೋಧಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಮಯದಲ್ಲಿ ಪ್ರಶಾಂತ ವೆಂಗುರ್ಲೆಕರ ಈ ಭಾರತೀಯ ಯುವಕನು ಒಬ್ಬನೇ ಪ್ರತ್ಯುತ್ತರ ನೀಡಿದನು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಶ್ರೀರಾಮನು ಸ್ವತಃ ಈಶ್ವರ ಅವತಾರನಾಗಿದ್ದನು. ಪಾಂಡವರ ಸಮಯದಲ್ಲಿ ಪೂರ್ಣಾವತಾರ ಶ್ರೀಕೃಷ್ಣನಿದ್ದನು. ಛತ್ರಪತಿ ಶಿವಾಜಿ ಮಹಾರಾಜರ ಸಮಯದಲ್ಲಿ ಸಮರ್ಥ ರಾಮದಾಸ ಸ್ವಾಮಿಗಳು ಇದ್ದರು. ಇದರಿಂದ ಈಶ್ವರಿ ರಾಜ್ಯದ ಸ್ಥಾಪನೆಯನ್ನು ಈಶ್ವರನು ಸ್ವತಃ ಮಾಡುತ್ತಾನೆ ಅಥವಾ ಸಂತರಿಂದ ಮಾಡಿಸಿಕೊಳ್ಳುತ್ತಾನೆ ಎಂಬುದು ಗಮನಕ್ಕೆ ಬರುತ್ತದೆ.

ಸೀಮೋಲ್ಲಂಘನೆಯ ನಿರೀಕ್ಷೆ !

ಭಾರತವು ೫ ಆಗಸ್ಟ್ ೨೦೧೯ ರಂದು ಜಮ್ಮೂ-ಕಾಶ್ಮೀರವನ್ನು ಭಾರತ ದೇಶದಿಂದ ಪ್ರತ್ಯೇಕಿಸುವ ಮತ್ತು ಜಿಹಾದಿಗಳ ಭಯೋತ್ಪಾದನೆಯ ಚಟುವಟಿಕೆಗಳಿಗಾಗಿ ಅನುಕೂಲಕರವಾಗಿದ್ದ ಕಲಮ್ ೩೭೦ ಮತ್ತು ೩೫ (ಅ) ರದ್ದು ಪಡಿಸಿತು. ನಿಜ ಹೇಳಬೇಕೆಂದರೆ, ಈ ಕಲಮ್ ರದ್ದುಗೊಳಿಸಿರುವುದು ಭಾರತದ ಆಂತರಿಕ ವಿಷಯವಾಗಿತ್ತು; ಆದರೆ ಈ ಕಾಗದದ ಅಸ್ತ್ರವು ಪಾಕಿಸ್ತಾನ ಮತ್ತು ಚೀನಾ ದೇಶಗಳನ್ನು ಗಂಭೀರವಾಗಿ ಗಾಯಗೊಳಿಸಿತು.