ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಪ್ರದೇಶದಲ್ಲಿ ಉರುಳಿದ ಬೃಹತ್ ಅಕ್ಷಯವಟ ಮರ !

ಕಾಶಿ ವಿಶ್ವನಾಥ ಕಾರಿಡಾರ್ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ !

  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಂತ ಪರಿವಾರದಿಂದ ಬೇಡಿಕೆ

  • ಈ ರೀತಿಯಾಗಿ ಹಿಂದೂಗಳ ಆಧ್ಯಾತ್ಮಿಕ ಪರಂಪರೆಯನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯ !

ವಾರಣಾಸಿ (ಉತ್ತರ ಪ್ರದೇಶ) – ಕಾಶಿ ವಿಶ್ವನಾಥ ದೇವಸ್ಥಾನ ಪ್ರದೇಶದ ಅಕ್ಷಯವಟ ಹನುಮಾನ ಮಂದಿರ’ ಬಳಿ ದೊಡ್ಡದಾದ ಅಕ್ಷಯವಟ ಮರ ಏಪ್ರಿಲ್ ೨೮ ರಂದು ಉರುಳಿದೆ. ‘ಕಾಶಿ ವಿಶ್ವನಾಥ ದೇವಾಲಯದ ಆಡಳಿತವರ್ಗದವರ ನಿರ್ಲಕ್ಷ್ಯದಿಂದಲೇ ಉರುಳಿದೆ’ ಎಂದು ವಾರಣಾಸಿ ಮಹಂತ ಪರಿವಾರವು ಆರೋಪಿಸಿದೆ. ಇಲ್ಲಿ ನಡೆಯುತ್ತಿರುವ ವಿಶ್ವನಾಥ ದೇವಾಲಯದ ಕಾರಿಡಾರ್ ಪ್ರದೇಶದಲ್ಲಿ ಈ ಮರವು ಬಂದಿತ್ತು. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

೧. ಮಹಂತ ಪರಿವಾರದ ಅನುಮತಿಯೊಂದಿಗೆ ಮತ್ತು ವಿಶ್ವನಾಥ ದೇವಾಲಯ ಆಡಳಿತದ ಲಿಖಿತ ಭರವಸೆಯೊಂದಿಗೆ ಸುವ್ಯವಸ್ಥಿತವನ್ನಾಗಿಸಲು ಪ್ರಾರಂಭಿಸಲಾಗಿತ್ತು. ಈ ಸಮಯದಲ್ಲಿ ಮರವನ್ನು ಸುರಕ್ಷಿತವಾಗಿಡಲು ಮಹಂತ ಪರಿವಾರವು ಸೂಚನೆ ನೀಡಿತ್ತು. ಅಧಿಕಾರಿಗಳು ಕೂಡ ‘ಕಾಳಜಿ ವಹಿಸುತ್ತೇವೆ’, ಎಂದು ಹೇಳಿದ್ದರು. ಆದರೆ ನಿರ್ಲಕ್ಷ್ಯದಿಂದ ಮರ ಉರುಳಿತು. ಆದ್ದರಿಂದ ಮಹಂತ ಪರಿವಾರ ಮತ್ತು ಕಾಶಿಯ ನಾಗರಿಕರು ಆಕ್ರೋಶಗೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿ ದೂರು ನೀಡುವುದಾಗಿ ಮಹಂತ ಪರಿವಾರ ಹೇಳಿದೆ.

೨. ಒಂದುಕಡೆ ನಾವು ಆಮ್ಲಜನಕದ ರಕ್ಷಣೆಯ ಬಗ್ಗೆ ಚರ್ಚಿಸುತ್ತಿದ್ದೇವೆ, ಮತ್ತೊಂದೆಡೆ ನಾವು ಪ್ರಾಚೀನ ವಸ್ತುಗಳನ್ನು ನಾಶಪಡಿಸುತ್ತಿದ್ದೇವೆ. ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಶಿ ವಿದ್ವತ್ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಮನಾರಾಯಣ ದ್ವಿವೇದಿಯವರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ಅಕ್ಷಯವಟ ಉರುಳಿರುವುದು ಖಂಡನೀಯ ! – ಸ್ವಾಮಿ ಅಬಿಮುಕ್ತೇಶ್ವರಾನಂದ ಸರಸ್ವತಿಯವರು ಅಕ್ಷಯವಟ ಮರ ಉರುಳಿರುವುದು ಖೇದಕರವಾಗಿದೆ. ಈ ಹಿಂದೆ ಪೂರ್ವ ಗೋವಿಂದೇಶ್ವರ ಮಹಾದೇವ ದೇವಸ್ಥಾನದ ಬಳಿ ಅಶ್ವತ ಮರವನ್ನು ಕಡಿಯಲಾಗಿತ್ತು ಎಂದಿದ್ದಾರೆ

ಅಕ್ಷಯವಟವೃಕ್ಷದ ಮಹತ್ವ

ಭಾರತದಾದ್ಯಂತ ಕೇವಲ ಕಾಶಿ, ಗಯಾ ಮತ್ತು ಪ್ರಯಾಗದಲ್ಲಿ ಅಕ್ಷಯವಟವೃಕ್ಷಗಳು ಇವೆ. ಗಯಾದಲ್ಲಿ ಈ ಮರದ ಕೆಳಗೆ ಕುಳಿತು ಪಿಂಡದಾನವನ್ನು ಮಾಡಲಾಗುತ್ತದೆ, ಪ್ರಯಾಗರಾಜನಲ್ಲಿ ಕ್ಷೌರ ಮಾಡಲಾಗುತ್ತದೆ ಹಾಗೂ ಕಾಶಿಯಲ್ಲಿ ದಂಡಿ ಸ್ವಾಮಿಗೆ ಆಹಾರವನ್ನು ನೀಡುವ ಪದ್ದತಿ ಇದೆ. ಈ ಮೂರು ಸ್ಥಳಗಳಲ್ಲಿ ಹನುಮಂತನ ದೇವಾಲಯವಿದೆ. ಗಯಾದಲ್ಲಿ ಕುಳಿತಿರುವ, ಪ್ರಯಾಗರಾಜದ ಬಳಿ ಮಲಗಿರುವ ಹಾಗೂ ಕಾಶಿಯಲ್ಲಿ ನಿಂತಿರುವ ಹನುಮಂತನ ಮೂರ್ತಿ ಇದೆ.