‘ಕರೋನಾ ಸಾಂಕ್ರಾಮಿಕದಲ್ಲಿ ಮನಸ್ಸನ್ನು ಸ್ಥಿರವಾಗಿರಿಸುವುದು ಹೇಗೆ ?’ ಕುರಿತು ಆನ್‌ಲೈನ್ ವಿಶೇಷ ವಿಚಾರಸಂಕಿರಣ!
ಕೇವಲ ಕರೋನಾ ಸಾಂಕ್ರಾಮಿಕ ಮಾತ್ರವಲ್ಲ, ಇತರ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಉಂಟಾಗುವುದರ ಹಿಂದೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ಅಧರ್ಮಾಚರಣೆಯೇ (ಧರ್ಮಗ್ಲಾನಿ) ಕಾರಣವಾಗಿರುತ್ತದೆ. ಪೃಥ್ವಿಯ ಮೇಲೆ ರಜ-ತಮದ ಪ್ರಮಾಣವು ಹೆಚ್ಚಾದಂತೆ ಆಧ್ಯಾತ್ಮಿಕ ಮಾಲಿನ್ಯವೂ ಹೆಚ್ಚಾಗುತ್ತದೆ. ಇದರ ಪರಿಣಾಮಗಳನ್ನು ಇಡೀ ಸಮಾಜವು ಅನುಭವಿಸಬೇಕಾಗಿದೆ. ಅಂತಹ ಸಂದರ್ಭಗಳಲ್ಲಿ, ಇದು ಹೆಚ್ಚಾಗಿ ಒಣಗಿದ ಜೊತೆಗೆ ಹಸಿ ಕಟ್ಟಿಗೆಯೂ ಸುಟ್ಟುಹೋಗುತ್ತದೆ. ‘ನಮೇ ಭಕ್ತಃ ಪ್ರಣಶ್ಯತಿ |’ ಅಂದರೆ ‘ನನ್ನ ಭಕ್ತನು ಎಂದಿಗೂ ನಾಶವಾಗುವುದಿಲ್ಲ’, ಎಂದು ಭಗವಂತನು ಭಗವದ್ಗೀತೆಯಲ್ಲಿ ಹೇಳಿದ್ದಾನೆ; ಆದ್ದರಿಂದ ನಾವು ಸಾಧನೆ ಮಾಡುವ ಮೂಲಕ ಈಶ್ವರನ ಭಕ್ತರಾಗಬೇಕು. ಪ್ರತಿಯೊಬ್ಬರೂ ಸಾಧನೆ ಮತ್ತು ಧರ್ಮಾಚರಣೆಯನ್ನು ಮಾಡಿದರೆ ನಾವು ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಬಹುದು ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ನಂದಕುಮಾರ ಜಾಧವರು ಪ್ರತಿಪಾದಿಸಿದರು.
ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಕೊರೋನಾ ಜಾಗತಿಕ ಮಹಾಮಾರಿ: ಮನಸ್ಸನ್ನು ಹೇಗೆ ಸ್ಥಿರಗೊಳಿಸುವುದು ?’ ಎಂಬ ಆನ್‌ಲೈನ್ ವಿಶೇಷ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ‘ಫೇಸ್‌ಬುಕ್’ ಮತ್ತು ‘ಯೂ-ಟ್ಯೂಬ್’ ಮೂಲಕ 12,956 ಜನರು ವೀಕ್ಷಿಸಿದ್ದಾರೆ.
ಸದ್ಗುರು ನಂದಕುಮಾರ ಜಾಧವ ಅವರು ಮುಂದೆ ಮಾತನಾಡುತ್ತಾ, ‘ಇಂದು, ಕರೋನಾ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ, ಚುಚ್ಚುಮದ್ದು ಮತ್ತು ಆಮ್ಲಜನಕಗಳು ದೊರೆಯುತ್ತಿಲ್ಲ. ಎಲ್ಲೆಡೆ ಪರಿಸ್ಥಿತಿಯು ಭೀಕರವಾಗಿದೆ. ವಾರ್ತಾವಾಹಿನಿಗಳಲ್ಲಿ ನಿರಂತರವಾಗಿ ತೋರಿಸಲಾಗುತ್ತಿರುವ ಸುದ್ದಿಗಳು ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿವೆ. ಹೆಚ್ಚಿನ ಜನರು ಒತ್ತಡದಲ್ಲಿದ್ದಾರೆ. ಅಂತಹ ಸಮಯದಲ್ಲಿ ನಾವು ಸಾಧನೆ ಮಾಡಿದರೆ, ನಮ್ಮ ಆತ್ಮಬಲವು ಹೆಚ್ಚಾಗಿ ನಾವು ಸ್ಥಿರವಾಗಿ ಉಳಿಯಬಹುದು. ಅದಕ್ಕಾಗಿ ಎಲ್ಲರೂ ಇಂದಿನಿಂದಲೇ ಸಾಧನೆಯನ್ನು ಪ್ರಾರಂಭಿಸಬೇಕು”, ಎಂದರು.
ಹರಿಯಾಣದ ವೈದ್ಯ ಭೂಪೇಶ ಶರ್ಮಾ ಇವರು ಮಾತನಾಡುತ್ತಾ, ಸಾವಿರಾರು ವರ್ಷಗಳ ಹಿಂದೆ ಮಹರ್ಷಿ ಚರಕ ಇವರು ಆಯುರ್ವೇದದಲ್ಲಿ, ಅಪೇಕ್ಷೆಯಿಂದ ದುಃಖವಾಗುತ್ತದೆ ಮತ್ತು ದುಃಖವು ರೋಗಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದರು. ವಿದೇಶದಲ್ಲಿ ಚರ್ಮರೋಗಶಾಸ್ತ್ರದ ಅಧ್ಯಯನಗಳಲ್ಲಿ ಮಾನಸಿಕ ತೊಂದರೆಯಿಂದ ಉಂಟಾಗುವ ರೋಗಗಳು ಗುಣಮುಖವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಕಂಡುಬಂದಿದೆ. ಆದ್ದರಿಂದ, ಪ್ರತಿಯೊಂದು ರೋಗಕ್ಕೂ ದೈಹಿಕ ಚಿಕಿತ್ಸೆಯ ಜೊತೆಗೆ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಚಿಕಿತ್ಸೆ ನೀಡಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಪಾಶ್ಚಾತ್ಯ ಜೀವನವಿಧಾನವನ್ನು ತೊರೆದು ಭಾರತೀಯ ಜೀವನವಿಧಾನಕ್ಕೆ ಹೊರಳಬೇಕು. ಪ್ರತಿದಿನ ಯೋಗಾಸನಗಳು. ಪ್ರಾಣಾಯಾಮ, ವ್ಯಾಯಾಮಗಳೊಂದಿಗೆ ಸರಿಯಾದ ಆಹಾರ, ನಿದ್ರೆ, ವಿಹಾರ ಮಾಡಿದರೆ ನಮಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ಉತ್ತಮ ಲಾಭವಾಗುತ್ತದೆ, ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯದ ಸಮನ್ವಯಕರಾದ ಶ್ರೀ. ಆನಂದ ಜಖೋಟಿಯಾ ಇವರು ಕೊರೋನಾ ಅವಧಿಯಲ್ಲಿ ಜಪಾನ್‌ನಲ್ಲಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲೂ ಇದೇ ರೀತಿಯ ಪರಿಸ್ಥಿತಿಯಿದೆ. ನಿರಂತರವಾಗಿ ಹೆಚ್ಚುತ್ತಿರುವ ಒತ್ತಡವೇ ಇದಕ್ಕೆ ಕಾರಣವಾಗಿದೆ. ಆದ್ದರಿಂದ, ದೈಹಿಕ ಚಿಕಿತ್ಸೆಯನ್ನು ಮಾಡುವಾಗ, ಪ್ರತಿಯೊಬ್ಬರ ಸ್ಥೈರ್ಯವನ್ನು ಹೆಚ್ಚಿಸಬೇಕು. ಅದಕ್ಕಾಗಿ ಹಲವು ವರ್ಷಗಳ ಸಂಶೋಧನೆಯ ನಂತರ, ಸನಾತನ ಸಂಸ್ಥೆಯ ಸಂಸ್ಥಾಪಕ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಮಾನಸೋಪಚಾರತಜ್ಞ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಅವರು ವಿನೂತನ ಚಿಕಿತ್ಸಾಪದ್ಧತಿಗಳನ್ನು ಪತ್ತೆಹಚ್ಚಿದ್ದಾರೆ. ಮನಸ್ಸಿಗೆ ಸಕಾರಾತ್ಮಕ ಶಕ್ತಿಯನ್ನು ನೀಡುವ ಸ್ವಯಂಸೂಚನೆಯ ಚಿಕಿತ್ಸಾಪದ್ಧತಿಗಳಿಂದ ಸಾವಿರಾರು ಜನರು ಒತ್ತಡದಿಂದ ಹೊರಬಂದಿದ್ದಾರೆ. ಪ್ರತಿ ಕುಟುಂಬವು ತಮ್ಮ ದೈನಂದಿನ ದಿನಚರಿಯಲ್ಲಿ ಈ ಸ್ವಯಂಸೂಚನೆಯನ್ನು ತೆಗೆದುಕೊಂಡರೆ ಅದರಿಂದ ಇಡೀ ಸಮಾಜಕ್ಕೆ ಪ್ರಯೋಜನವಾಗುತ್ತದೆ.