ಅಮೇರಿಕಾದಲ್ಲಿ ಮತ್ತೊಂದು ಬ್ಯಾಂಕ್ ದಿವಾಳಿಯ ಅಂಚಿಗೆ !

ಅಮೇರಿಕದಲ್ಲಿ ಸಿಲಿಕಾನ್ ಮತ್ತು ಸಿಗ್ನೇಚರ್ ಬ್ಯಾಂಕ್‌ಗಳು ದಿವಾಳಿಯಾದ ನಂತರ, ‘ಫಸ್ಟ ರಿಪಬ್ಲಿಕ್ ಬ್ಯಾಂಕ್’ ಇದು ದಿವಾಳಿಯಾಗುವ ಅಂಚಿನಲ್ಲಿರುವುದು ಕಂಡುಬಂದಿದೆ. ‘ಬ್ಲೂಮ್‌ಬರ್ಗ್’ ಈ ಸಂಸ್ಥೆಯ ಪ್ರಕಾರ, ‘ಫಸ್ಟ್ ರಿಪಬ್ಲಿಕ್ ಬ್ಯಾಂಕ್’ನ ಷೇರು ಮೌಲ್ಯಗಳು ಶೇಕಡಾ ೬೧.೮೩ ರಷ್ಟು ಕುಸಿದಿವೆ.

ಅಮೇರಿಕಾದ ಸಂಸತ್ತಿನಲ್ಲಿ ‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ’ ಆಗಿರುವ ವಿಧೇಯಕ್ಕೆ ಅನುಮೋದನೆ

ಅಮೇರಿಕಾ ತನ್ನ ಸಂಸತ್ತಿನಲ್ಲಿ ಒಂದು ಪ್ರಸ್ತಾವವನ್ನು ಅನುಮೋದಿಸಿ ‘ಅರುಣಾಚಲ ಪ್ರದೇಶ ಇದು ಭಾರತದ ಅವಿಭಾಜ್ಯ ಅಂಗವಾಗಿದೆ’, ಎಂದು ಹೇಳಿದೆ. ಭಾರತದಲ್ಲಿನ ಅರುಣಾಚಲ ಪ್ರದೇಶ ಮತ್ತು ಚೀನಾದಲ್ಲಿನ ಮ್ಯಾಕಮೋಹನ ರೇಖೆಗೆ ಅಂತರರಾಷ್ಟ್ರೀಯ ಗಡಿ ಎಂದು ಅಮೆರಿಕದಿಂದ ಈ ವಿಧೇಯಕದ ಮೂಲಕ ಒಪ್ಪಿಗೆ ನೀಡಿದೆ.

ಚೀನಾವು ತೈವಾನದೊಂದಿಗೆ ಯುದ್ಧ ಮಾಡಿದರೆ ತೈವಾನನ ಪರವಾಗಿ ಯುದ್ಧಮಾಡುವ ಅಮೇರಿಕಾದ ಸ್ಫೋಟಕಗಳ ಸಂಗ್ರಹ ಒಂದು ವಾರದಲ್ಲಿ ಮುಗಿಯುವುದು! – ವರದಿಯಿಂದ ಬಹಿರಂಗ

ತೈವಾನನಿಂದ ಅಮೇರಿಕಾ ಮತ್ತು ಚೀನಾ ಇವರ ನಡುವಿನ ಒತ್ತಡ ಹೆಚ್ಚುತ್ತಿದ್ದು, ಮುಂಬರುವ ಕಾಲದಲ್ಲಿ ಅದು ಯುದ್ಧದಲ್ಲಿ ರೂಪಾಂತರಗೊಳ್ಳಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ‘ಫೋರ್ಬ್ಸ’ನ ವರದಿಯನುಸಾರ, ಚೀನಾದ ತುಲನೆಯಲ್ಲಿ ಅಮೇರಿಕಾದ ಆಕ್ರಮಣ ನಡೆಸುವ ಸಾಮರ್ಥ್ಯ ಕಡಿಮೆಯಾಗಿದೆ.

`ನಾಟು ನಾಟು’ ಗೀತೆಗೆ ಆಸ್ಕರ ಪುರಸ್ಕಾರ

95ನೇ ಆಸ್ಕರ ಪುರಸ್ಕಾರ ಸಮಾರಂಭದಲ್ಲಿ ಭಾರತೀಯ ಚಲನಚಿತ್ರ `ಆರ್.ಆರ್.ಆರ್’ನ ` ನಾಟು ನಾಟು’ ಈ ಗೀತೆಗೆ ಮೂಲ ಗೀತೆಯ ಶ್ರೇಣಿಯಲ್ಲಿ `ಸರ್ವೋತ್ಕೃಷ್ಟ ಗೀತೆ’ ಎಂದು ಪುರಸ್ಕಾರ ದೊರಕಿದೆ. ಈ ಹಿಂದೆ ಈ ಗೀತೆಗೆ `ಗೋಲ್ಡನ ಗ್ಲೋಬ’ ಪುರಸ್ಕಾರ ದೊರಕಿತ್ತು.

ಭಯೋತ್ಪಾದಕರನ್ನು ಒಳ್ಳೆಯ ಅಥವಾ ಕೆಟ್ಟ ಈ ರೀತಿ ವ್ಯತ್ಯಾಸ ಮಾಡುವುದೇ ತಪ್ಪು !

ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನದ ಮೇಲೆ ಟೀಕಾಸ್ತ್ರ

ಪಾಕಿಸ್ತಾನ ಮತ್ತು ಚೀನಾ ಇವರು ಕಾರ್ಯಾಚರಣೆ ನಡೆಸಿದರೆ ಭಾರತ ಪ್ರತ್ಯುತ್ತರ ನೀಡುವ ಸಾಧ್ಯತೆ ! – ಅಮೇರಿಕ ಗುಪ್ತಚರ ಇಲಾಖೆಯ ವರದಿ

ಅಮೇರಿಕಾದ ಸಂಸತ್ತಿನಲ್ಲಿ ರಾಷ್ಟ್ರೀಯ ಗುಪ್ತಚರ ಇಲಾಖೆಯ ಸಂಚಾಲಕ ಎವರಿಲ್ ಹೆನ್ಸ್ ಇವರು ಮಾಹಿತಿ ನೀಡುತ್ತಾ, ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಸುರಕ್ಷೆ ಮತ್ತು ನೇತೃತ್ವಕ್ಕೆ ಎಲ್ಲಕ್ಕಿಂತ ಹೆಚ್ಚಿನ ಅಪಾಯ ಚೀನಾದಿಂದ ಇದೆ ಎಂದು ಹೇಳಿದರು.

ವರ್ಲ್ಡ್ ಉಘುರ್ ಕಾಂಗ್ರೆಸ್ ಸಂಘಟನೆಗೆ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶನ

ಚೀನಾದಲ್ಲಿನ ಉಘುರ್ ಮುಸಲ್ಮಾನರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಘಟನೆ ‘ವರ್ಲ್ಡ್ ಉಘುರ್ ಕಾಂಗ್ರೆಸ್’ಗೆ ೨೦೨೩ ರ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ

ಲೈಂಗಿಕ ಸಮಾನತೆಯನ್ನು ಪಡೆಯಲು ಇನ್ನೂ ೩೦೦ ವರ್ಷಗಳು ಬೇಕಾಗಬಹುದು !

ಸದ್ಯದ ಅಂದಾಜಿನ ಅನುಸಾರ ಲೈಂಗಿಕ ಸಮಾನತೆ ಬರಲು ಜಗತ್ತಿಗೆ ಇನ್ನೂ ೩೦೦ ವರ್ಷಗಳು ತಗುಲಬಹುದು, ಎಂಬ ಖೇದಕರ ಹೇಳಿಕೆಯನ್ನು ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿಯಾದ ಅಂಟೋನಿಯೊ ಗುಟರೆಸರವರು ವ್ಯಕ್ತಪಡಿಸಿದ್ದಾರೆ.

ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ಪ್ರಶ್ನೆಯನ್ನು ಪ್ರಸ್ತಾಪಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ ಇವರನ್ನು ಭಾರತದಿಂದ ಛೀಮಾರಿ !

ಪಾಕಿಸ್ತಾನವು ಕಾಶ್ಮೀರ ಪ್ರಶ್ನೆಯನ್ನು ಜಗತ್ತಿನ ಎಲ್ಲಿಯೇ ಪ್ರಸ್ತಾಪಿಸಿದರೂ, ಅದಕ್ಕೆ ಇದೇ ರೀತಿ ಪ್ರತ್ಯುತ್ತರ ಸಿಗುತ್ತಿರುವುದು ಎನ್ನುವುದನ್ನು ಅವರು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು !

ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಟರ್ಕಿಯಿಂದ ಕಾಶ್ಮೀರ ಪ್ರಶ್ನೆಯ ಬಗ್ಗೆ ಪಾಕಿಸ್ತಾನದ ‘ರಾಗಾ’ ಎಳೆದಿದೆ !

ಇದಕ್ಕೆ ಹೇಳುವುದು ನಾಯಿ ಬಾಲ ಯಾವಾಗಲೂ ಡೌಂಕೆ ಇರುತ್ತದೆ ಎಂದು ! ಭಾರತವು ಭೂಕಂಪದ ಸಮಯದಲ್ಲಿ ಟರ್ಕಿಗೆ ಸಹಾಯ ಮಾಡಿದರು ಕೂಡ ಅದು ಇನ್ನೂ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ ಇದು ಸ್ಪಷ್ಟವಾಗಿದೆ !