ನರೇಂದ್ರ ಮೋದಿ ಇವರು ಪ್ರಪಂಚದಲ್ಲಿನ ಎಲ್ಲಕ್ಕಿಂತ ಜನಪ್ರಿಯ ನಾಯಕ !

‘ನ್ಯೂಯಾರ್ಕ್ ಟೈಮ್ಸ್’ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಶ್ಲಾಘನೆ

ನ್ಯೂಯಾರ್ಕ್ (ಅಮೇರಿಕ) – ಇಲ್ಲಿಯವರೆಗೆ ಭಾರತ ಮತ್ತು ಹಿಂದುತ್ವನಿಷ್ಠರನ್ನು ವಿರೋಧಿಸುವ ಅಮೆರಿಕಾದಲ್ಲಿನ ದೈನಿಕ ನ್ಯೂಯಾರ್ಕ್ ಟೈಮ್ಸ್ ಮೊಟ್ಟ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿದೆ.

ನ್ಯೂಯಾರ್ಕ್ ಟೈಮ್ಸ್ ನಲ್ಲಿ ಮುಜೀಬ್ ಮಶಾಲ್ ಇವರು ಬರೆದಿರುವ ಲೇಖನದಲ್ಲಿ, ಸಾಮಾಜಿಕ ಮಾಧ್ಯಮಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲಕ್ಕಿಂತ ಹಳೆಯ ರೇಡಿಯೋ ಈ ಪದ್ದತಿಯನ್ನೂ ಉಪಯೋಗಿಸುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ದಿಂದ ಜನರ ಜೊತೆಗೆ ಸಂವಾದ ನಡೆಸುತ್ತಾರೆ. ಅವರ ಸಂವಾದ ಮನಸ್ಸಿನಿಂದ ಇರುತ್ತದೆ. ಅದು ನೆರ ಜನರ ಮನಕ್ಕೆ ತಾಗುತ್ತದೆ. ರಾಷ್ಟ್ರದ ವಿಕಾಸಕ್ಕಾಗಿ ಮಾಡಿರುವ ಅವರ ಭಾಷಣ ಭಾರತವನ್ನು ಪ್ರಪಂಚದ ಜೊತೆಗೆ ಜೋಡಿಸುತ್ತದೆ. ನರೇಂದ್ರ ಮೋದಿ ಇವರು ಪ್ರಪಂಚದ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ಇರುವ ದೇಶದ ಪ್ರಧಾನಮಂತ್ರಿ ಇರುವರು ಆದ್ದರಿಂದ ಅಥವಾ ಅವರು ಸತತವಾಗಿ ವಿವಿಧ ದೇಶಗಳಿಗೆ ಭೇಟಿ ನೀಡುತ್ತಾರೆ ಎಂದು ಅವರ ಜನಪ್ರಿಯತೆ ಹೆಚ್ಚಿದೆ ಹೀಗೆ ಇಲ್ಲ, ಅವರ ನೀತಿಯ ಪ್ರಭಾವ ಜನರ ಮೇಲೆ ಇದೆ, ಆದ್ದರಿಂದ ಅವರು ಜನಪ್ರಿಯರಾಗಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿ ಮತ್ತು ಯುವಕರ ಜೊತೆ ಕೂಡ ನಿಯಮಿತ ಸಂವಾದ ನಡೆಸುತ್ತಾರೆ. ‘ಮಿತ್ರರೇ, ನಾನು ನಿಮ್ಮ ಕಷ್ಟದಲ್ಲಿ ಜೊತೆಗೆ ಇದ್ದೇನೆ’, ಎಂದು ಮೋದಿಯವರು ವಿಶ್ವಾಸ ನೀಡುತ್ತಾರೆ. ಆದ್ದರಿಂದ ಯುವಕರು ಮತ್ತು ವಿದ್ಯಾರ್ಥಿಗಳ ಮೇಲೆ ಕೂಡ ಅವರ ಒಳ್ಳೆಯ ಪ್ರಭಾವ ಬೀರಿದೆ, ಹೀಗೆ ಈ ವಾರ್ತಾಪತ್ರಿಕೆಯಲ್ಲಿ ಹೇಳಿದೆ.