‘ಭಾರತದಲ್ಲಿನ ಮುಸಲ್ಮಾನರ ಸುರಕ್ಷೆಯ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಬೇಕಂತೆ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರಿಗೆ ಮಾಜಿ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಇವರ ಸಲಹೆ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇವರು ಪ್ರಧಾನಿ ಮೋದಿ ಇವರ ಜೊತೆಗೆ ಭಾರತದಲ್ಲಿನ ಮುಸಲ್ಮಾನರ ಸುರಕ್ಷತೆಯ ಬಗ್ಗೆ ಚರ್ಚೆ ಮಾಡಬೇಕು, ಎಂದು ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ಮತ್ತು ಬಾಯಡೆನ ಇವರ ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮ ಇಬ್ಬರ ಭೇಟಿಯ ಮೊದಲು ಸಲಹೆ ನೀಡಿದ್ದರು. ‘ಮೋದಿಯವರೊಂದಿಗೆ ನನ್ನ ಭೇಟಿ ಆಗುತ್ತಿದ್ದರೆ, ಅಲ್ಪಸಂಖ್ಯಾತರ ಅಧಿಕಾರದ ಬಗ್ಗೆ ಕೇಳುತ್ತಿದ್ದೆ’, ಎಂದು ಕೂಡ ಅವರು ಹೇಳಿದರು. ಬಾಯಡೆನ್ ಮತ್ತು ಮೋದಿ ಇವರಲ್ಲಿ ನಡೆದಿರುವ ದ್ವಿಪಕ್ಷಿಯ ಸಭೆಯಲ್ಲಿ ಭಯ್ಯೋತ್ಪಾದನೆಯ ವಿಷಯದ ಬಗ್ಗೆ ಚರ್ಚೆ ನಡೆದಿರುವುದಾಗಿ ಅವರ ಸಂಯುಕ್ತ ಮನವಿಯ ಮೂಲಕ ಹೇಳಲಾಗಿದೆ.

ಹಿಂದೂ ಮತ್ತು ಮುಸಲ್ಮಾನರಲ್ಲಿನ ಬಿರುಕು ಅವರ ಮತ್ತು ಭಾರತದ ವಿರೋಧದಲ್ಲಿ ಇರುವುದು !

ಬರಾಕ್ ಒಬಾಮ ಇವರು ‘ಸಿ.ಎನ್.ಎನ್.’ ಈ ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ, ಪ್ರಧಾನಿ ಮೋದಿ ಇವರು ನನ್ನ ಒಳ್ಳೆಯ ಸ್ನೇಹಿತರಾಗಿದ್ದಾರೆ; ಆದರೆ ಭಾರತದಲ್ಲಿ ಮುಸಲ್ಮಾನರ ಸುರಕ್ಷೆಯ ವಿಷಯ ಕಳವಳಕಾರಿಯಾಗಿದೆ. ಭಾರತವು ಹಿಂದೂ ಬಹುಸಂಖ್ಯಾತ ದೇಶವಾಗಿದೆ; ಆದರೆ ಅಲ್ಲಿಯ ಮುಸಲ್ಮಾನ ಅಲ್ಪಸಂಖ್ಯಾತರ ಸುರಕ್ಷೆಯ ವಿಷಯ ಇದು ಕೂಡ ಅಷ್ಟೇ ಮಹತ್ವದ್ದಾಗಿದೆ, ಎಂದು ಹೇಳಿದ್ದರು.

ಅಮೇರಿಕಾದ ರಾಷ್ಟ್ರಾಧ್ಯಕ್ಷ ಆಗುವುದು ಸುಲಭವಲ್ಲ !

ಬರಾಕ್ ಒಬಾಮಾ ಮಾತು ಮುಂದುವರೆಸಿ, ಅಮೇರಿಕಾದ ರಾಷ್ಟ್ರಾಧ್ಯಕ್ಷ ಆಗುವುದು ಸುಲಭವಾದ ವಿಷಯವಲ್ಲ. ಯಾವಾಗ ನಾನು ಅಮೇರಿಕಾದ ರಾಷ್ಟ್ರಾಧ್ಯಕ್ಷನಾಗಿದ್ದೆ, ಆಗ ನಾನು ಜನರ ಭೇಟಿ ಮಾಡುತ್ತಿದ್ದೆ. ನಾನು ಜನರೊಂದಿಗೆ ಚರ್ಚೆ ನಡೆಸುತ್ತಿದೆ. ಅವರಿಗೆ ನಾನು, ನಮ್ಮ ಸರಕಾರ, ನಮ್ಮ ಪಕ್ಷವು ಪ್ರಜಾಪ್ರಭುತ್ವ ಪಾಲಿಸುತ್ತಿದೆ, ಹೀಗೆ ನಿಮಗೆ ಅನಿಸುತ್ತದೆಯೆ ? ಎಂದು ಕೇಳುತ್ತಿದ್ದೆ. ಹಲವಾರು ಬಾರಿ ಈ ಪ್ರಶ್ನೆಗೆ ‘ಇಲ್ಲ’ ಎಂದು ಜನರು ಉತ್ತರ ಕೊಡುತ್ತಿದ್ದರು. ಅಮೇರಿಕಾದ ರಾಷ್ಟ್ರಾಧ್ಯಕ್ಷನಿಗೆ ಇದು ಮತ್ತು ಇಂತಹ ಅನೇಕ ವಿಷಯಗಳು ಸ್ವೀಕರಿಸಬೇಕಾಗುತ್ತದೆ. ಇದರಲ್ಲಿ ಹಣಕಾಸಿನ ಅಂಶಗಳ ಕೂಡ ಸಮಾವೇಶವಾಗಿರುತ್ತದೆ ಎಂದು ಹೇಳಿದರು.

ಭಾರತದಲ್ಲಿನ ಮುಸಲ್ಮಾನರ ಇಷ್ಟೊಂದು ಕಳಕಳಿ ಇರುವ ಬರಾಕ್ ಒಬಾಮ ಇವರ ನಿಜವಾದ ಮುಖವಾಡ !

ಒಬಾಮ ರಾಷ್ಟ್ರಾಧ್ಯಕ್ಷ ಇರುವಾಗ ಅವರು ಒಂದು ವರ್ಷದಲ್ಲಿ ಸಿರಿಯಾ, ಇರಾಕ್, ಅಫ್ಘಾನಿಸ್ತಾನ್, ಲಿಬಿಯಾ, ಎಮನ್, ಸೋಮಾಲಿಯಾ ಮತ್ತು ಪಾಕಿಸ್ತಾನ ಈ ೭ ಇಸ್ಲಾಮಿ ದೇಶಗಳ ಮೇಲೆ ೨೬ ಸಾವಿರ ೧೭೧ ಬಾಂಬ್ ಸಿಡಿಸಿದ್ದಾರೆ. ಇದರಲ್ಲಿ ಲಕ್ಷಾಂತರ ಮುಸಲ್ಮಾನರು ಸಾವನ್ನಪ್ಪಿದರು. ಒಬಾಮಾ ಇವರ ಕಾರ್ಯಕಾಲದಲ್ಲಿ ಅಮೆರಿಕದಿಂದ ಇತರ ದೇಶಗಳ ಮೇಲೆ ಎಲ್ಲಕ್ಕಿಂತ ಹೆಚ್ಚು ಡ್ರೋನ್ ದಾಳಿ ನಡೆಯಿತು. ಅಮೇರಿಕಾದ ಸೈನಿಕರು ೭೦ ದೇಶಗಳಲ್ಲಿ ನೇಮಕವಾಗಿದ್ದವು. ಅದರ ನಂತರ ಕೂಡ ಇವರಿಗೆ ಶಾಂತಿಗಾಗಿ ನೋಬೆಲ್ ಪುರಸ್ಕಾರ ನೀಡಲಾಗಿತ್ತು.

ಸಂಪಾದಕೀಯ ನಿಲುವು

ಭಾರತದಲ್ಲಿನ ಆಂತರಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಯಾವುದೇ ದೇಶಕ್ಕೆ ಮತ್ತು ಅದರ ಅಧ್ಯಕ್ಷರಿಗೆ ಅಧಿಕಾರ ಇಲ್ಲ, ಇದು ಒಬಾಮಾಗೆ ತಿಳಿದಿಲ್ಲವೇ ? ‘ಪ್ರಧಾನಿ ಮೋದಿ ಇವರು ಬಾಯಡೆನ ಜೊತೆಗೆ ಅಮೇರಿಕಾದಲ್ಲಿನ ಅಶ್ವೇತವರ್ಣದವರ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಬೇಕು’, ಎಂದು ಭಾರತವು ಎಂದಾದರೂ ಹೇಳಿದೆಯೇ ?