ಪ್ರಧಾನ ಮಂತ್ರಿ ಮೋದಿ ಇವರ ಕಾಲಿಗೆ ನಮಸ್ಕರಿಸುತ್ತಾ ಆಶೀರ್ವಾದ ಪಡೆದರು !
ವಾಷಿಂಗ್ಟನ್ (ಅಮೇರಿಕಾ) – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೪ ದಿನಗಳ ಕಾಲ ಅಮೇರಿಕಾ ಪ್ರವಾಸ ಮುಗಿಸಿ ಈಜಿಪ್ತ್ ಪ್ರವಾಸದಲ್ಲಿ ಇದ್ದಾರೆ. ಅದಕ್ಕಿಂತ ಮೊದಲು ಅಮೇರಿಕಾದಲ್ಲಿ ಪ್ರಧಾನಮಂತ್ರಿ ಮೋದಿ ಇವರು ರೋನಾಲ್ಡ್ ರೇಗನ್ ಸೆಂಟರ್ನಲ್ಲಿ ಅನಿವಾಸಿ ಭಾರತೀಯರಿಗೆ ಸಂಭೋಧಿಸಿದ್ದರು. ಈ ಕಾರ್ಯಕ್ರಮದ ಮುಕ್ತಾಯದ ಸಮಯದಲ್ಲಿ ಹಾಲಿವುಡ್ ಗಾಯಕಿ ಮೇರಿ ಮಿಲಬೇನ್ ಇವರು ವೇದಿಕೆಯಲ್ಲಿ ಭಾರತೀಯ ರಾಷ್ಟ್ರಗೀತೆ ಜನಗಣಮನ ಹಾಡಿದರು. ರಾಷ್ಟ್ರಗೀತೆಯ ನಂತರ ಮೇರಿ ಇವರು ವೇದಿಕೆಯಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಕಾಲು ಮುಟ್ಟಿ ಅವರ ಆಶೀರ್ವಾದ ಪಡೆದರು. ‘ಪ್ರಧಾನಮಂತ್ರಿ ಮೋದಿಯವರ ಕಾರ್ಯಕ್ರಮದಲ್ಲಿ ನನಗೆ ನನಗೆ ಅವಕಾಶ ಸಿಕ್ಕಿತು ಇದು ನನಗಾಗಿ ಬಹಳ ಅಭಿಮಾನದ ವಿಷಯವಾಗಿದೆ’, ಎಂದು ಮೇರಿ ಇವರು ಪ್ರಸಾರ ಮಾಧ್ಯಮದ ಜೊತೆ ಮಾತನಾಡುವಾಗ ಹೇಳಿದರು.
A night I will treasure forever. Performing for His Excellency Prime Minister Narendra Modi for the concluding event of the PM’s Official State Arrival Visit to the United States. See last night’s post for the official performance airing from @DDNewslive.
What I loved most… pic.twitter.com/RFUctGkh3l
— Mary Millben (@MaryMillben) June 24, 2023
ಭಾರತೀಯರು ಆತ್ಮವಿಶ್ವಾಸ ಮತ್ತೆ ಗಳಿಸಿದ್ದಾರೆ ! – ನರೇಂದ್ರ ಮೋದಿ
ಉಪಸ್ಥಿತ ಭಾರತೀಯರನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು, ನೀವೆಲ್ಲರೂ ಅಮೆರಿಕದಲ್ಲಿ ‘ಮಹಾನ ಭಾರತ’ದ ಒಂದು ಚಿತ್ರಣವನ್ನು ನಿರ್ಮಿಸಿದ್ದೀರಿ. ಅದಕ್ಕಾಗಿ ನಿಮಗೆ ಬಹಳ ಬಹಳ ಅಭಿನಂದನೆ. ಅಮೇರಿಕಾದಲ್ಲಿ ನನಗೆ ಏನು ಗೌರವ ಸಿಗುತ್ತಿದೆ ಅದರ ಶ್ರೇಯಸ್ಸು ನಿಮ್ಮದಾಗಿದೆ. ನೀವು ಇಲ್ಲಿ ಪಟ್ಟಿರುವ ಶ್ರಮದಿಂದ ಮತ್ತು ಅಮೆರಿಕಾದ ವಿಕಾಸದಲ್ಲಿ ನೀಡಿರುವ ಯೋಗದಾನದಿಂದ ನನಗೆ ಈ ಗೌರವ ಸಿಕ್ಕಿದೆ. ಅಮೇರಿಕಾದಲ್ಲಿ ವಾಸಿಸುತ್ತಿರುವ ಭಾರತದ ಪ್ರತಿಯೊಬ್ಬನಿಗೆ ನಾನು ವಂದಿಸುತ್ತೇನೆ. ಪ್ರಸ್ತುತ ಭಾರತದಲ್ಲಿ ಏನು ಪ್ರಗತಿ ಆಗುತ್ತಿದೆ, ಅದರ ಹಿಂದೆ ಎಲ್ಲಕ್ಕಿಂತ ದೊಡ್ಡ ಕಾರಣ ಎಂದರೆ ಭಾರತೀಯರ ಆತ್ಮವಿಶ್ವಾಸ. ನೂರಾರು ವರ್ಷದ ಗುಲಾಮಿಯಿಂದ ನಾವು ಈ ಆತ್ಮವಿಶ್ವಾಸ ಕಳೆದುಕೊಂಡಿದ್ದೆವು; ಆದರೆ ಈಗ ಹೊಸ ಭಾರತದಲ್ಲಿ ಈ ಆತ್ಮವಿಶ್ವಾಸ ಮತ್ತೆ ಮರಳಿ ಪಡೆದಿದ್ದೇವೆ ಎಂದು ಹೇಳಿದರು.