ಪ್ರಧಾನಿ ಮೋದಿ ಮತ್ತು ಅಮೇರಿಕಾದ ರಾಷ್ಟ್ರಧ್ಯಕ್ಷ ಜೋ ಬಾಯಡೆನ್ ಅವರ ಜಂಟಿ ಹೇಳಿಕೆ !
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾ ಅಧ್ಯಕ್ಷ ಜೋ ಬಾಯಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ವಿಷಯಗಳ ಕುರಿತು ಚರ್ಚಿಸಿದ ನಂತರ ಸುದ್ದಿಗೋಷ್ಠಿಯನ್ನು ನಡೆಸಿ ಹೇಳಿಕೆಯನ್ನು ಮಂಡಿಸಿದರು. “ಪಾಕಿಸ್ತಾನವು ತನ್ನ ಭೂಮಿಯನ್ನು ಭಯೋತ್ಪಾದಕ ದಾಳಿಗೆ ಬಳಸದಂತೆ ನೋಡಿಕೊಳ್ಳಬೇಕು ಮತ್ತು ಇದಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು. ಗಡಿಯಾಚೆಗಿನ ಭಯೋತ್ಪಾದಕತೆಯನ್ನು ಅವರು ಬಲವಾಗಿ ಖಂಡಿಸಿದರು.
ಈ ಮನವಿಯಲ್ಲಿ ಅಲ್-ಕಾಯದಾ, ಇಸ್ಲಾಮಿಕ್ ಸ್ಟೇಟ್, ಲಷ್ಕರ್-ಎ-ತೊಯಾಬ, ಜೈಶ್-ಎ-ಮೊಹಮ್ಮದ್ ಮತ್ತು ಹಿಜಬುಲ್ ಮುಜಾಹಿದ್ದೀನ್ ಸೇರಿದಂತೆ ಎಲ್ಲಾ ಭಯೋತ್ಪಾದಕರ ಗುಂಪುಗಳ ವಿರುದ್ಧ ಕಠಿಣ ಕ್ರಮ ನಡೆಸಬೇಕೆಂದು ಹೇಳಲಾಗಿದೆ.
ಸಂಪಾದಕೀಯ ನಿಲುವುಹುಟ್ಟುಗುಣ ಸುಟ್ಟರೂಹೋಗಲ್ಲ ಎಂಬಂತೆ ಪಾಕಿಸ್ತಾನಕ್ಕೆ ಎಷ್ಟೇ ತಿಳಿಸಿ ಹೇಳಿದರೂ, ಯಾವುದೇ ಪರಿಣಾಮ ಬೀರುವುದಿಲ್ಲ. ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಹೇಳಿದ ನಂತರವೇ ಭಯೋತ್ಪಾದನೆ ನಾಶವಾಗುವುದು, ಇದಕ್ಕಾಗಿ ಭಾರತ ಮತ್ತು ಅಮೇರಿಕಾ ಕಾರ್ಯನಿರ್ವಹಿಸಬೇಕಾಗಿದೆ ! |