ಅಮೇರಿಕಾದಲ್ಲಿ ಪ್ರಧಾನಿ ಮೋದಿಯವರಿಗೆ ಕೆಲವು ಸಂಘಟನೆಗಳಿಂದ ವಿರೋಧ !

ವಾಷಿಂಗ್ಟನ್ (ಅಮೇರಿಕ) – ೪ ದಿನಗಳ ಅಮೇರಿಕಾದ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ ಅದ್ಧೂರಿ ಸ್ವಾಗತದ ಜೊತೆಗೆ ವಿರೋಧವು ವ್ಯಕ್ತವಾಗುತ್ತಿದೆ. ಕಾಶ್ಮೀರ ಸಮಸ್ಯೆ, ರೈತರ ಆಂದೋಲನ, ಅಲ್ಪಸಂಖ್ಯಾತರ ಮೇಲಾಗುವ ದಾಳಿಗಳು, ಮಾನವ ಹಕ್ಕುಗಳ ಕಾನೂನು ಉಲ್ಲಂಘನೆ ಇತ್ಯಾದಿ ಅಂಶಗಳ ಆರೋಪಗಳಿಗಾಗಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಅಮೇರಿಕದ ನಾಗರಿಕರು ಬೀದಿಗಿಳಿದು ಮೋದಿಯವರನ್ನು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟಿಸುವ ನಾಗರಿಕರು ‘ಮೋದಿ ತಿರುಗಿ ಹೋಗು’, ‘ಮೋದಿಯವರನ್ನು ಸ್ವಾಗತಿಸುವುದಿಲ್ಲ’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ನ್ಯೂಯಾರ್ಕ್ ಮೂಲದ ‘ದೇಸಿಸ್ ರೈಸಿಂಗ್ ಅಪ್ ಅಂಡ್ ಮೂವಿಂಗ್’, ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’, ‘ಕ್ವೀನ್ಸ್ ಎಗೇನ್ಸ್ಟ್ ಹಿಂದೂ ಫ್ಯಾಸಿಸಂ’ ಮತ್ತು ‘ವರ್ಲ್ಡ್ ಸಿಖ್ ಪಾರ್ಲಿಮೆಂಟ್’ ಮುಂತಾದ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ಈ ನಾಗರೀಕರ ಪ್ರಕಾರ, ಮೋದಿ ಪೂರ್ವದಲ್ಲಿ ಉದಯಿಸುವ ಹಿಟ್ಲರ್ ಆಗಿದ್ದಾರೆ. ಮೋದಿಯವರ ಸರ್ವಾಧಿಕಾರಕ್ಕೆ ಉತ್ತೇಜನ ನೀಡುವುದನ್ನು ಬಹಾಯಡೆನ್ ಅವರು ನಿಲ್ಲಿಸಬೇಕು. ಪ್ರಧಾನಿ ಮೋದಿ ಅಲ್ಪಸಂಖ್ಯಾತರನ್ನು ಕೊಲ್ಲುವುದನ್ನು ನಿಲ್ಲಿಸಿ, ಮೋದಿ ಕೊಲೆಗಾರ, ಹಿಂದುತ್ವವೇ ಹಿಂದೂಗಳ ಪರಮಾಧಿಕಾರ. ಪೊಲೀಸರಿಂದ ರೈತರ ಮೇಲಾಗುವ ದೌರ್ಜನ್ಯ ನಿಲ್ಲಿಸಿ, ಅನ್ಯಾಯವಾಗಿರುವ ರೈತರ ಕಾನೂನು ಹಿಂಪಡೆಯಿರಿ, ಮೋದಿ ಭಾರತೀಯ ಭಯೋತ್ಪಾದನೆಯ ಮುಖ ಎಂದು ಹಲವಾರು ಪೋಸ್ಟರ್‌ಗಳೊಂದಿಗೆ ಅಮೇರಿಕದಲ್ಲಿನ ನಾಗರಿಕರು ಪ್ರಧಾನಿ ಮೋದಿಯವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.