ರಕ್ತದೊತ್ತಡ ಹೆಚ್ಚಾಗುವುದಿಲ್ಲ, ಅಲ್ಲದೇ ಹೃದಯದ ಬಡಿತವೂ ಸಾಮಾನ್ಯಸ್ಥಿತಿಯಲ್ಲಿರುತ್ತದೆ !
ನ್ಯೂಯಾರ್ಕ (ಅಮೇರಿಕಾ) – ಯಾವುದೇ ವ್ಯಕ್ತಿಯ ವಿಷಯದಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದರಿಂದ ನಿಮಗೆ ಮಾನಸಿಕ ದೃಷ್ಟಿಯಿಂದ ಬಲ ಸಿಗುತ್ತದೆ. ಕೃತಜ್ಞತೆಯು ಒಂದು ಸಕಾರಾತ್ಮಕ ಭಾವನೆಯಾಗಿದೆ. ಯಾವಾಗ ಅದು ನಿರ್ಮಾಣವಾಗುತ್ತದೆಯೋ, ಆಗ ನೀವು ಜೀವನದಲ್ಲಿ ಒಳ್ಳೆಯತನವೂ ಇದೆಯೆಂದು ಸ್ವೀಕರಿಸುತ್ತೀರಿ, ಎಂದು ಹೆಸರಾಂತ ಮಾನಸೋಪಚಾರತಜ್ಞ ರಾಬರ್ಟ ಎ.ಎಮ್ಸ್ ಇವರ ನಾಯಕತ್ವದಲ್ಲಿ ಅಧ್ಯಯನದ ಗುಂಪು ಸಂಶೋಧನೆ ನಡೆಸಿದೆ.
ಈ ಸಂಶೋಧನೆಯನುಸಾರ ಯಾರಲ್ಲಿ ಕೃತಜ್ಞತೆಯ ಭಾವನೆಯಿದೆಯೋ, ಅಂತಹವರ ರಕ್ತದೊತ್ತಡ ಹೆಚ್ಚಾಗುವುದಿಲ್ಲ ಹಾಗೆಯೇ ಅವರ ಹೃದಯದ ಬಡಿತವೂ ಸಾಮಾನ್ಯವಾಗಿರುತ್ತದೆ. ಈ ಸಂಶೋಧನೆಯ ಅಡಿಯಲ್ಲಿ ಒಂದು ಅಧ್ಯಯನ ನಡೆಸಲಾಯಿತು. ಇದರಲ್ಲಿ ಭಾಗವಹಿಸಿರುವವರಿಗೆ ಅವರ ಜೀವನದಲ್ಲಿ ನಡೆದ ಸಕಾರಾತ್ಮಕ ವಿಷಯಗಳ ಬಗ್ಗೆ ಮತ್ತು ಅವರ ಅರಿವಿಗೆ ಬಂದಂತಹ ಪರಿಣಾಮಗಳ ಸೂಚಿಯನ್ನು ಸಿದ್ಧಮಾಡಿ ಧನ್ಯವಾದದ ಪತ್ರವನ್ನು ಬರೆಯಲು ಹೇಳಲಾಯಿತು. ಪರಿಣಾಮಸ್ವರೂಪ ಇಂತಹ ಕ್ರಿಯೆಯಿಂದ ಕೇವಲ ಮಾನಸಿಕ ಆರೋಗ್ಯವಷ್ಟೇ ಅಲ್ಲದೇ ನಿರಾಶೆ ಮತ್ತು ಚಿಂತೆ ಕಡಿಮೆಯಾಗುತ್ತದೆ. ಇದರೊಂದಿಗೆ ಕೃತಜ್ಞತೆ ವ್ಯಕ್ತ ಪಡಿಸುವುದರಿಂದ ದಿನನಿತ್ಯದ ಜೀವನದಲ್ಲಿ ಆತ್ಮಗೌರವ ಹೆಚ್ಚುವುದರೊಂದಿಗೆ ಸಮಾಧಾನದ ಮಟ್ಟವೂ ಹೆಚ್ಚಾಗುತ್ತದೆ. ನಾರ್ಥ ಕೆರೊಲಿನಾ ವಿಶ್ವವಿದ್ಯಾಲಯದ ಮಾನಸೋಪಚಾರತಜ್ಞ ಸಾರಾ ಎಲ್ಗೊ ಇವರು, ಪರಿಚಯಸ್ಥ, ಸ್ನೇಹಿತರು ಅಥವಾ ಜೊತೆಗಾರರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದರಿಂದ ಸಂಬಂಧಗಳು ದೃಢಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಕುಟುಂಬ ಮತ್ತು ಸಹೋದ್ಯೋಗಿಗಳ ಬಗ್ಗೆ ಕೃತಜ್ಞರಾಗಿರುವುದರೊಂದಿಗೆ, ಭಗವಂತನ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದರೆ ಕೃತಜ್ಞತೆಗೆ ಆಧ್ಯಾತ್ಮಿಕ ಆಧಾರ ಲಭಿಸಿ ಮಾನಸಿಕ ಆರೋಗ್ಯದೊಂದಿಗೆ ಜೀವನವೂ ಆನಂದಮಯ ಮತ್ತು ಸಮಾಧಾನದಿಂದಿರಲು ಸಹಾಯಕವಾಗುತ್ತದೆಯೆನ್ನುವುದನ್ನು ಗಮನಿಸಬೇಕು ! |