ವಿಶ್ವ ಸಂಸ್ಥೆಯ ಶಾಂತಿ ಅಭಿಯಾನದಲ್ಲಿ ಪ್ರಾಣಾರ್ಪಣೆ ಮಾಡಿರುವವರಿಗೆ ಶ್ರದ್ಧಾಂಜಲಿ ಅರ್ಪಿಸುವದಕ್ಕಾಗಿ ಸ್ಮೃತಿ ಗೋಡೆ ಕಟ್ಟಲಾಗುವುದು !

ಭಾರತದ ಪ್ರಸ್ತಾವನೆಯನ್ನು ಒಪ್ಪಿದ ವಿಶ್ವ ಸಂಸ್ಥೆ

ನ್ಯೂಯಾರ್ಕ್ (ಅಮೇರಿಕ) – ಭಾರತವು ಮಂಡಿಸಿರುವ ಪ್ರಸ್ತಾವನೆಯನ್ನು ವಿಶ್ವ ಸಂಸ್ಥೆಯ ಮಹಾಸಭೆಯು ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಯಂತೆ ವಿಶ್ವ ಸಂಸ್ಥೆಯ ಮುಖ್ಯಾಲಯದಲ್ಲಿ ಒಂದು ಸ್ಮೃತಿ ಗೋಡೆ (ಮೆಮೋರಿಯಲ್ ವಾಲ್) ಕಟ್ಟಲಾಗುವುದು. ಇದರಲ್ಲಿ ವಿಶ್ವ ಸಂಸ್ಥೆಯ ಶಾಂತಿ ಅಭಿಯಾನದಲ್ಲಿ ಪ್ರಾಣಾರ್ಪಣೆ ಮಾಡಿರುವವರ ಹೆಸರು ಬರೆದು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುವುದು. ವಿಶ್ವ ಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ರುಚಿರ ಕಂಬೋಜ್ ಇವರು ಜೂನ್ ೧೪ ರಂದು ಈ ಪ್ರಸ್ತಾವನೆಯನ್ನು ಮಂಡಿಸಿದ್ದರು. ಅದಕ್ಕೆ ೧೯೦ ದೇಶಗಳು ಮಾನ್ಯತೆ ನೀಡಿದರು. ಮುಂದಿನ ೩ ವರ್ಷಗಳಲ್ಲಿ ಈ ಗೋಡೆ ಕಟ್ಟಲಾಗುವುದು.