ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಅಭಿಮಾನಿಯಾದೆ ! – ಎಲನ್ ಮಸ್ಕ್

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ನಂತರ ಖ್ಯಾತ ಉದ್ಯಮಿ ಎಲನ್ ಮಸ್ಕ್ ಹೇಳಿಕೆ !

ಖ್ಯಾತ ಉದ್ಯಮಿ ಎಲನ್ ಮಸ್ಕ್ ಮತ್ತು ಪ್ರಧಾನಿ ನರೇಂದ್ರ ಮೋದಿ

ವಾಷಿಂಗ್ಟನ್ (ಅಮೇರಿಕಾ) – ಟ್ವಿಟರ್ ನ ಮುಖ್ಯ ಕಾರ್ಯಕಾರಿ ಅಧಿಕಾರಿ ಹಾಗೂ ‘ಟೆಸ್ಲಾ’ ಕಂಪನಿಯ ಮಾಲೀಕ ಎಲನ್ ಮಸ್ಕ್ ಇವರು ಅಮೆರಿಕಾದ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇವರನ್ನು ಭೇಟಿಯಾದರು. ‘ನಮ್ಮಿಬ್ಬರ ಭೇಟಿಯಾದ ನಂತರ ನನಗೆ ಬಹಳ ಆನಂದವಾಯಿತು. ನಾನು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಡೆಸಿದ ಚರ್ಚೆಯು ಬಹಳ ಸಕಾರಾತ್ಮಕ ಸ್ತರದಲ್ಲಿ ನಡೆಯಿತು. ಮುಂದಿನ ವರ್ಷ ನಾನು ಭಾರತಕ್ಕೆ ಭೇಟಿ ನೀಡುವ ವಿಚಾರ ಮಾಡುತ್ತಿದ್ದೇನೆ. ಮೋದಿಯವರ ಭೇಟಿಯ ನಂತರ ನಾನು ಅವರ ಅಭಿಮಾನಿ ಆಗಿದ್ದೇನೆ, ಎಂದು ಎಲನ ಮಸ್ಕ್ ಇವರು ಹೇಳಿದರು. ‘ಟೆಸ್ಲಾ ಮೋಟರ್ಸ್’ ಈ ಕಂಪನಿಯು ಭಾರತದಲ್ಲಿ ಕಾರ್ಖಾನೆ ಆರಂಭಿಸುವ ದೃಷ್ಟಿಯಿಂದ ಸ್ಥಳದ ಹುಡುಕಾಟ ನಡೆಸುತ್ತಿದೆ. ಇದರ ಹಿನ್ನೆಲೆಯಲ್ಲಿ ಎಲನ್ ಮಸ್ಕ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಲ್ಲಿ ನಡೆದ ಈ ಭೇಟಿ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.

ಮಸ್ಕ್ ಇವರು ಮುಂದೆ ಮಾತನಾಡುತ್ತಾ, ‘ಟೆಸ್ಲಾ’ ಭಾರತಕ್ಕೆ ಶೀಘ್ರದಲ್ಲಿಯೇ ಬರುವುದು. ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಧನ್ಯವಾದ ಹೇಳುತ್ತೇನೆ. ಭವಿಷ್ಯದಲ್ಲಿ ನಾವು ದೊಡ್ಡ ಘೋಷಣೆ ಮಾಡುವೆವು. ಭಾರತದಲ್ಲಿ ಬಂಡವಾಳ ಹೂಡುವುದು ಇದು ಖಂಡಿತ ಮಹತ್ವದ್ದಾಗಿದೆ’, ಎಂದರು.

ಮೋದಿ ಇವರಿಂದ ಗಣ್ಯರ ಭೇಟಿ !

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಲ್ಲಿ ಸುಮಾರು ೨೪ ಗಣ್ಯರನ್ನು ಭೇಟಿಯಾದರು. ಇದರಲ್ಲಿ ನೊಬೆಲ್ ಪುರಸ್ಕಾರ ವಿಜೇತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾನರು ಮತ್ತು ವ್ಯಾಪಾರಸ್ಥರ ಸಮಾವೇಶವಿದೆ. ಲೇಖಕ ಮತ್ತು ಶೈಕ್ಷಣಿಕ ಪ್ರಾಧ್ಯಾಪಕ ರಾಬರ್ಟ್ ಥರ್ಮನ್, ಪ್ರಬಂಧಕಾರ ಮತ್ತು ಸಾಂಖಿಕಶಾಸ್ತ್ರಜ್ಞ ಪ್ರಾಧ್ಯಾಪಕ ನಸೀಮ್ ನಿಕೋಲಸ್ ತಾಲೇಬ್, ಖಗೋಲಭೌತ ವಿಜ್ಞಾನಿ ಮತ್ತು ಲೇಖಕ ನೀಲ್ ಡಿಗ್ರಾಸ್ ಟೈಸನ್, ನೊಬೆಲ್ ಪುರಸ್ಕಾರ ವಿಜೇತ ಅರ್ಥಶಾಸ್ತ್ರಜ್ಞ ಪಾಲ್ ರೋಮರ ಹಾಗೂ ಬಂಡವಾಳ ಹೂಡಿಕೆದಾರ ರೆ ಡಾಲಿಯೋ ಇದರಲ್ಲಿ ಇವರ ಸಮಾವೇಶವಿದೆ.

ಸ್ಥಳೀಯ ಸರಕಾರಗಳ ನಿಯಮಗಳನ್ನು ಪಾಲಿಸುವುದು ಯೋಗ್ಯ !

ಭಾರತ ಸರಕಾರದ ಮೇಲಿನ ಜಾಕ ಡಾರ್ಸಿ ಇವರ ಆರೋಪಗಳಿಗೆ ಎಲನ್ ಮಸ್ಕ್ ಇವರಿಂದ ಉತ್ತರ !

ಪ್ರಧಾನಿ ಮೋದಿ ಇವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರು ಎಲನ್ ಮಸ್ಕ್ ಇವರಿಗೆ ಟ್ವಿಟರ್ ನ ಮಾಜಿ ಮುಖ್ಯ ಕಾರ್ಯಕಾರಿ ಅಧಿಕಾರಿ ಜಾಕ್ ಡಾರ್ಸಿ ಇವರು ಭಾರತದಲ್ಲಿ ನಡೆದಿರುವ ಟೀಕೆಗಳ ಬಗ್ಗೆ ಪ್ರಶ್ನೆ ಕೇಳಿದರು. ಅದರ ಬಗ್ಗೆ ಎಲನ್ ಮಸ್ಕ್ ಇವರು ಉತ್ತರಿಸುತ್ತಾ, ಯಾವುದೇ ಸಾಮಾಜಿಕ ಮಾಧ್ಯಮಗಳಿಗೆ ಸ್ಥಳೀಯ ಸರಕಾರದ ನಿಯಮದ ಪಾಲನೆ ಮಾಡದೇ ಬೇರೆ ಪರ್ಯಾಯವಿಲ್ಲ. ಪರ್ಯಾಯ ಇದ್ದರೆ ಆಗ ಅದು ಸಾಮಾಜಿಕ ಮಾಧ್ಯಮಗಳು ಮುಚ್ಚುವುದು. ಆದ್ದರಿಂದ ಯಾವುದು ಒಳ್ಳೆಯದು ಅದನ್ನು ಮಾಡಬೇಕು. ಇದಕ್ಕಿಂತಲೂ ಬೇರೆ ಏನು ಮಾಡುವುದು ಅಸಾಧ್ಯ, ಎಂದು ಹೇಳಿದರು.

ಡಾರ್ಸಿ ಇವರು ಭಾರತ ಸರಕಾರದ ಮೇಲೆ ಆರೋಪಿಸುತ್ತಾ, ಕೃಷಿ ಕಾನೂನಿನ ವಿರೋಧ ಮಾಡುವವರ ಟ್ವಿಟರ್ ಖಾತೆಗಳನ್ನು ಸರಕಾರ ಮುಚ್ಚಲು ಹೇಳಿತ್ತು. ಅದಕ್ಕಾಗಿ ಸರಕಾರ ನನ್ನ ಮೇಲೆ ಒತ್ತಡ ಹೇರಿತ್ತು, ಎಂದಿದ್ದರು.