140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಿಂದಲೂ ನಮಗೆ ಅಪಾರ ಬೆಂಬಲ ! : Benjamin Netanyahu

140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಿಂದಲೂ ನಮಗೆ ಭಾರಿ ಬೆಂಬಲ ಸಿಗುತ್ತಿದೆ ಎಂಬ ಮಾತುಗಳೊಂದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕಾಗೆ ಪ್ರತ್ಯುತ್ತರ ನೀಡಿದ್ದಾರೆ. ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ನೆತನ್ಯಾಹು ಅವರು ಈ ವಿಷಯವನ್ನು ತಿಳಿಸಿದ್ದಾರೆ.

ನಾನು ಟ್ರಂಪ್ ಅವರ ಹೇಳಿಕೆಯಂತೆ ಮತ್ತು ಟ್ರಂಪ್ ನನ್ನ ಹೇಳಿಕೆಯಂತೆ ಕೆಲಸ ಮಾಡುತ್ತಿಲ್ಲ! – ನೆತನ್ಯಾಹು

ಇಸ್ರೇಲ್ ಮತ್ತು ಅಮೆರಿಕ ನಿಕಟ ಮಿತ್ರರಾಷ್ಟ್ರಗಳು, ಆದರೆ ಎರಡೂ ದೇಶಗಳು ತಮ್ಮದೇ ಆದ ಹಿತಾಸಕ್ತಿಗಳನ್ನು ಹೊಂದಿವೆ ಎಂದು ನೆತನ್ಯಾಹು ಹೇಳಿದರು. ಅವರ ಅಭಿಪ್ರಾಯಗಳು ಯಾವಾಗಲೂ ಒಂದೇ ಆಗಿರುವುದಿಲ್ಲ.

ಅಮೆರಿಕ ಎಷ್ಟೇ ಒತ್ತಡ ಹೇರಿದರೂ ಲೆಬನಾನ್‌ನಿಂದ ಹಿಂದೆ ಸರಿಯುವುದಿಲ್ಲ! – ಇಸ್ರೇಲ್

ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ತನ್ನ ಆಯುಧಗಳನ್ನು ಸಂಪೂರ್ಣವಾಗಿ ಕೆಳಗಿಟ್ಟು ಶರಣಾಗದ ಹೊರತು ಇಸ್ರೇಲ್ ತನ್ನ ನಿಲುವನ್ನು ಬದಲಾಯಿಸುವುದಿಲ್ಲ. ‘ಇಸ್ರೇಲ್ ಸೈನ್ಯವು ಲೆಬನಾನ್‌ನಿಂದ ಹಿಂದೆ ಸರಿಯಬೇಕು’ ಎಂದು ಅಮೆರಿಕ ಯಾವುದೇ ಔಪಚಾರಿಕ ಬೇಡಿಕೆ ಮಾಡುತ್ತದೆ ಎಂಬ ನಿರೀಕ್ಷೆಯಿಲ್ಲ.

ಕದನ ವಿರಾಮದ ನಂತರವೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಕೆ: 18 ಜನರ ಸಾವು

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಇಸ್ರೇಲ್ ಲೆಬನಾನ್ ಮೇಲೆ ಆಕ್ರಮಣ ಮಾಡಿತು. ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಲೆಬನಾನ್ನಲ್ಲಿ ಹೆಜ್ಬೊಲ್ಲಾ ಉಗ್ರರು ಮತ್ತು ಅವರ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳು ನಡೆದಿವೆ.

ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !

ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಭಾರತೀಯರಿಗೆ ಇರಾನ್ ಪ್ರವಾಸವನ್ನು ತಪ್ಪಿಸಲು ಸಲಹೆ ನೀಡಿದ್ದು, ಇರಾನ್‌ನಲ್ಲಿರುವ ಭಾರತೀಯ ನಾಗರಿಕರು ಲಭ್ಯವಿರುವ ಸಾರಿಗೆ ಸೌಲಭ್ಯಗಳನ್ನು ಬಳಸಿಕೊಂಡು ಆದಷ್ಟು ಬೇಗ ಇರಾನ್ ತೊರೆಯುವಂತೆ ಸಲಹೆ ನೀಡಲಾಗಿದೆ.

ಭಾರತದಲ್ಲಿ ಇಸ್ರೇಲ್ ಗೆ ಅಭೂತಪೂರ್ವ ಬೆಂಬಲ!

ನೆತನ್ಯಾಹು ಅವರು ಮಾತು ಮುಂದುವರಿಸಿ, ಇಸ್ರೇಲ್ ನ ಜಾಗತಿಕ ಕಾರ್ಯತಂತ್ರದಲ್ಲಿ ಭಾರತಕ್ಕೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಅನನ್ಯವಾಗಿದೆ. ಭಾರತದ ಜನರಲ್ಲಿ ಇಸ್ರೇಲ್ ಕುರಿತು ವಿಶೇಷವಾದ ಆತ್ಮೀಯತೆಯಿದೆ.

ಇರಾನ್‌ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ಭಾರತವು ಕಠಿಣ ನಿರ್ಬಂಧಗಳನ್ನು ಹೇರಬೇಕು!

ಈ ವಿಷಯದಲ್ಲಿ ಭಾರತವು ನಿರ್ಧಾರ ತೆಗೆದುಕೊಳ್ಳುವಂತೆ ಇಸ್ರೇಲ್ ಪದೇ ಪದೇ ವಿನಂತಿಸಿದೆ ಎಂದು ಇಸ್ರೇಲಿ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಐ.ಆರ್.ಜಿ.ಸಿ.ಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಮಾತ್ರವಲ್ಲದೆ ಇತರ ಪ್ರದೇಶಗಳಿಗೂ ಅಪಾಯ ಉಂಟಾಗಿದೆ.

ಇಸ್ರೇಲ್ ನಿಂದ ಹಿಜ್ಬುಲ್ಲಾದ ೨ ಕಿಲೋಮೀಟರ್ ಉದ್ದದ ೨ ಸುರಂಗಗಳು ಧ್ವಂಸ

ಇದುವರೆಗೆ ಪತ್ತೆಹಚ್ಚಲಾದ ಸುರಂಗಗಳ ಪೈಕಿ ಇವು ಎಲ್ಲಕ್ಕಿಂತ ಉದ್ದದ ಸುರಂಗಗಳಾಗಿದ್ದವು ಎಂದು ಇಸ್ರೇಲಿ ಸೈನ್ಯವು ಸ್ಪಷ್ಟಪಡಿಸಿದೆ. ಈ ಸುರಂಗಗಳು ೨೫ ಮೀಟರ್ ಆಳದವರೆಗೆ ವಿಸ್ತರಿಸಿದ್ದವು.

ಭಾರತವು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು! – ಇಸ್ರೇಲ್

ಹಮಾಸ್‌ಗೆ ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕವಿದೆ ಎಂಬ ಇಸ್ರೇಲ್‌ನ ದಾವೆ

ಇಸ್ರೇಲ್‌ನಲ್ಲಿ ಕಾಗೆಗಳ ಹಿಂಡಿನ ನಂತರ ಈಗ ಜೇನುನೊಣಗಳ ದಾಳಿ

ಕಳೆದ ತಿಂಗಳು ತೆಲ್ ಅವಿವ್ ನಗರದ ಮೇಲೆ ಸಾವಿರಾರು ಕಾಗೆಗಳ ಹಿಂಡುಗಳು ಸುಳಿದಾಡುತ್ತಿರುವುದು ಕಂಡುಬಂದಿತ್ತು. ಇರಾನ್ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಇದನ್ನು ವಿನಾಶದ ಸಂಕೇತವೆಂದು ನೋಡಲಾಗಿತ್ತು ಮತ್ತು ಬೈಬಲ್‌ನ ವಚನಗಳೊಂದಿಗೆ ಇದನ್ನು ಜೋಡಿಸಲಾಗಿತ್ತು.