ಇಸ್ರೈಲ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಭಾರತದ ತಪ್ಪು ನಕ್ಷೆ : ಇಸ್ರೈಲ್ ನಿಂದ ಕ್ಷಮಾಯಾಚನೆ !

ಭಾರತೀಯರು ‘X’ ನಿಂದ ತಪ್ಪನ್ನು ತೋರಿಸಿದರು !

ಟೆಲ್ ಅವಿವ್ (ಇಸ್ರೈಲ್) – ಇಸ್ರೈಲ್‌ನ ಅಧಿಕೃತ ಜಾಲತಾಣದ ಮೇಲೆ ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗವನ್ನು ಪಾಕಿಸ್ತಾನದಲ್ಲಿದೆ ಎಂದು ತೋರಿಸಿತ್ತು. ಭಾರತೀಯ ನಾಗರಿಕರು ಇದನ್ನು ‘X’ ನಲ್ಲಿ ಪೋಸ್ಟ್ ಮಾಡುವ ಮೂಲಕ ಸಾರ್ವಜನಿಕವಾಗಿ ಖಂಡಿಸಿದರು. ಇದಾದ ಬಳಿಕ ಭಾರತದಲ್ಲಿರುವ ಇಸ್ರೈಲ್ ರಾಯಭಾರಿ ರುವೆನ್ ಅಜರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಜಾಲತಾಣದ ಸಂಪಾದಕರ ತಪ್ಪಿನಿಂದ ಹೀಗಾಯಿತು ಎಂದು ವಿವರಿಸಿದ್ದಾರೆ. ನಾವು ತಕ್ಷಣವೇ ಆ ನಕ್ಷೆಯನ್ನು ಜಾಲತಾಣದಿಂದ ತೆಗೆದುಹಾಕಿದ್ದೇವೆ. ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ಹೇಳಿದರು.

ಭಾರತೀಯ ಪ್ರಜೆಯೊಬ್ಬರು ‘X’ ಮೂಲಕ ನಕ್ಷೆಯ ಛಾಯಾಚಿತ್ರವನ್ನು ಪೋಸ್ಟ ಮಾಡಿ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಅದರಲ್ಲಿ ಅವರು, ಇಸ್ರೈಲ್‌ನ ಹಮಾಸ್, ಹಿಜ್ಬುಲ್ಲಾ ಮತ್ತು ಇರಾನ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತ ಇಸ್ರೈಲ್‌ನೊಂದಿಗೆ ನಿಂತಿದೆ ಎಂದು ಅವರು ಹೇಳುತ್ತಾರೆ. ಆದರೆ, ಇಸ್ರೈಲ್ ಭಾರತದ ಜೊತೆಗಿದೆಯೇ ? ಇಸ್ರೈಲ್ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಭಾರತದ ಈ ನಕ್ಷೆಯನ್ನು ಪರಿಶೀಲಿಸಿ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ನೋಡಿ ಎಂದು ಬರೆದಿದ್ದರು. ಈ ವಿಷಯ ಎಲ್ಲೆಡೆ ಹರಡಿತು. ಭಾರತೀಯರೂ ಇದನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸಿದರು. ಇಸ್ರೈಲ್ ಇದನ್ನು ಅರಿತುಕೊಂಡು ತಕ್ಷಣ, ಕ್ಷಮೆಯಾಚಿಸುತ್ತಾ ಜಾಲತಾಣದಿಂದ ತಪ್ಪಾದ ನಕ್ಷೆಯನ್ನು ಕೂಡಲೇ ತೆಗೆದುಹಾಕಿತು.

ಸಂಪಾದಕೀಯ ನಿಲುವು

ಈ ರೀತಿಯಲ್ಲಿ ಜಾಗರೂಕರಾಗಿರುವ ಮತ್ತು ತತ್ಪರರಾಗಿರುವ ರಾಷ್ಟ್ರಪ್ರೇಮಿ ಭಾರತೀಯರಿಗೆ ಅಭಿನಂದನೆಗಳು !