ಇಸ್ರೇಲ್ ಮತ್ತು ಭಯೋತ್ಪಾದಕ ಗುಂಪುಗಳ ನಡುವೆ ಘರ್ಷಣೆ !
ಟೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾನನ್ನು ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ವಾಸ್ತವ್ಯವಿದ್ದಾಗ ಹತ್ಯೆ ಮಾಡಿದೆಯೆಂದು ಹೇಳಲಾಗುತ್ತಿದೆ. ಇದರಿಂದಾಗಿ ಇರಾನನಿಂದ ಇಸ್ರೇಲ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಇಂತಹುದರಲ್ಲಿಯೇ ಈಗ ಇರಾನ ಪರ ಸಂಘಟನೆಯಾದ ಹಿಜ್ಬುಲ್ಲಾ ಇಸ್ರೇಲ್ ಮೇಲೆ ಒಂದರ ಹಿಂದೆ ಒಂದು ಹೀಗೆ ಸುಮಾರು 50 ಕ್ಷಿಪಣಿಗಳನ್ನು ಹಾರಿಸಿತು. ಆಗಸ್ಟ್ 3 ರ ಸಂಜೆ, ದಕ್ಷಿಣ ಲೆಬನಾನ್‌ನಿಂದ ಇಸ್ರೇಲ್ ಉತ್ತರದ ಭಾಗಕ್ಕೆ ದಾಳಿಗಳನ್ನು ನಡೆಸಿತು; ಆದರೆ ‘ಐರನ್ ಡೋಮ್’ ಈ ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯು ಎಲ್ಲಾ ಕ್ಷಿಪಣಿಗಳನ್ನು ವಿಫಲಗೊಳಿಸಿತು. ಅನೇಕ ಕ್ಷಿಪಣಿಗಳು ಗಾಳಿಯಲ್ಲಿಯೇ ನಾಶವಾಯಿತು. ಈ ದಾಳಿಯಿಂದ ಇಸ್ರೇಲ್ ಗೆ ಯಾವುದೇ ಹಾನಿಯಾಗಿಲ್ಲ.
ಇಸ್ರೇಲ್ ಗೆ ಪ್ರಸ್ತುತ ಏಕಕಾಲದಲ್ಲಿ ಅನೇಕ ಹಂತಗಳಲ್ಲಿ ಸಂಘರ್ಷಗಳನ್ನು ಎದುರಿಸುತ್ತಿದೆ. ಒಂದೆಡೆ, ಗಾಜಾ ಮತ್ತು ರಫಾದಲ್ಲಿ ಹಮಾಸ್ ವಿರುದ್ಧ ಮಿಲಿಟರಿ ಸಂಘರ್ಷ ಮುಂದುವರೆದಿದೆ ಮತ್ತು ಈಗ ಲೆಬನಾನ ಗಡಿಯಲ್ಲಿ ಹಿಜಬುಲ್ಲಾದೊಂದಿಗೆ ಹೋರಾಡಬೇಕಾಗುತ್ತಿದೆ. ಇರಾನ್ ಇಸ್ರೈಲ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರಲ್ಲಿ ಹಿಜಬುಲ್ಲಾ ಪ್ರಮುಖ ಕಾರ್ಯಕರ್ತನಾಗಿದ್ದ ಅಲಿ ಅಬ್ದ್ ಅಲಿ ಇವನು ದಕ್ಷಿಣ ಲೆಬನಾನ್‌ನ ಬಜೋರಿಹ್‌ನಲ್ಲಿ ಆಗಸ್ಟ್ 3 ರ ಬೆಳಿಗ್ಗೆ ಇಸ್ರೇಲಿ ಡ್ರೋನ್ ದಾಳಿಯಿಂದ ಕೊಲ್ಲಲ್ಪಟ್ಟನು.