ಗಾಜಾ ಶಾಲೆಯ ಮೇಲೆ ಇಸ್ರೇಲ್ ದಾಳಿ; 100 ಮಂದಿ ಸಾವು

ಶಾಲೆಯಲ್ಲಿ ಹಮಾಸ್ ಭಯೋತ್ಪಾದಕರು ಅಡಗಿದ್ದರಿಂದ ಕ್ರಮ

ಟೆಲ್ ಅವಿವ್ (ಇಸ್ರೇಲ್) – ಗಾಜಾದ ದರಾಜ್ ಜಿಲ್ಲೆಯ ಶಾಲೆಯೊಂದರ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅನೇಕ ನಿರಾಶ್ರಿತರು ಈ ಶಾಲೆಯಲ್ಲಿ ಆಶ್ರಯ ಪಡೆದಿದ್ದರು. ಶಾಲೆಯಲ್ಲಿ ಬೆಳಗ್ಗೆ ನಮಾಜ್ ಪಠಣ ನಡೆಯುತ್ತಿದ್ದ ವೇಳೆ ರಾಕೆಟ್‌ ನಿಂದ ದಾಳಿ ಮಾಡಲಾಯಿತು. ಈ ಹಿಂದೆ ಇಸ್ರೇಲ್ ಗಾಜಾದ ಎರಡು ಶಾಲೆಗಳ ಮೇಲೆ ದಾಳಿ ನಡೆಸಿತ್ತು. ಹಮಾಸ್ ಈ ಶಾಲೆಗಳನ್ನು ತನ್ನ ಕಚೇರಿಯಾಗಿ ಬಳಸುತ್ತಿದ್ದು ಅಲ್ಲಿ ಅನೇಕ ಹಮಾಸ್ ಭಯೋತ್ಪಾದಕರಿದ್ದರು ಎಂದು ಇಸ್ರೇಲ್ ಸೇನೆ ಹಳಿತ್ತು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಇದುವರೆಗೆ 41 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ 16 ಸಾವಿರಕ್ಕೂ ಹೆಚ್ಚು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. (ಇಷ್ಟೊಂದು ನರಸಂಹಾರ ನಡೆದರೂ ಹಮಾಸ್ ಇನ್ನೂ ಶರಣಾಗಿಲ್ಲ ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ ಎಂಬುದನ್ನು ಗಮನಿಸಿ ! – ಸಂಪಾದಕರು).