ಇಸ್ರೇಲ್‌ನಿಂದ ಲೆಬನಾನ್‌ ಮೇಲೆ 24 ಗಂಟೆಗಳಲ್ಲಿ 2 ಬಾರಿ ವೈಮಾನಿಕ ದಾಳಿ : 12 ಸಾವು

ಹಿಜ್ಬುಲ್ಲಾದ ಹಿರಿಯ ಕಮಾಂಡರ್ ಹತ್ಯೆ

ಬೆರುತ್ (ಲೆಬನಾನ್) – ಇಸ್ರೇಲ್ 24 ಗಂಟೆಗಳಲ್ಲಿ ಲೆಬನಾನ್ ಮೇಲೆ 2 ಬಾರಿ ವೈಮಾನಿಕ ದಾಳಿ ಮಾಡಿದೆ. ರಾಜಧಾನಿ ಬೆರುತ್‌ನಲ್ಲಿನ ದಹಿಯಾ ಪ್ರದೇಶದಲ್ಲಿ ಈ ದಾಳಿ ಮಾಡಲಾಗಿದೆ. ಇದುವರೆಗೆ 12 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯ ಹಿರಿಯ ಕಮಾಂಡರ್ ಮತ್ತು ‘ಜಿಹಾದ್ ಕೌನ್ಸಿಲ್’ನ ಸದಸ್ಯ ಇಬ್ರಾಹಿಂ ಅಕಿಲ ಹಾಹೀ ಸಾವನ್ನಪ್ಪಿದ್ದಾನೆ. 1983 ರಲ್ಲಿ ಬೆರುತ್‌ನಲ್ಲಿರುವ ಅಮೇರಿಕಾದ ರಾಯಭಾರಿ ಕಛೇರಿ ಮೇಲಿನ ದಾಳಿಯ ಪ್ರಕರಣದಲ್ಲಿ ಅಕೀಲ್ ಅಮೇರಿಕಾದ ಪರಾರಿಯಾಗಿರರುವ ಪ್ರಮುಖ ಭಯೋತ್ಪಾದಕರ ಪಟ್ಟಿಯಲ್ಲಿದ್ದನು.

ಇಸ್ರೇಲ್‌ನ ಭದ್ರತಾ ಪಡೆಗಳು, ಲೆಬನಾನ್‌ನಲ್ಲಿ ಹಿಜ್ಬುಲ್ಲಾದ 100 ಕ್ಕೂ ಹೆಚ್ಚು ರಾಕೆಟ್ ಲಾಂಚರ್‌ಗಳ ಮೇಲೆ ದಾಳಿ ಮಾಡಿ ನಾಶಪಡಿಸಲಾಗಿದೆ. ನಾವು ಅವರ 1 ಸಾವಿರ ರಾಕೆಟ್ ಬ್ಯಾರೆಲ್‌ಗಳನ್ನು ನಾಶಪಡಿಸಿದ್ದೇವೆ. ಈ ಆಯುಧಗಳೊಂದಿಗೆ ಹಿಜ್ಬುಲ್ಲಾ ಇಸ್ರೇಲ್ ಮೇಲೆ ದಾಳಿ ಮಾಡುವ ಸಿದ್ದತೆಯಲ್ಲಿತ್ತು ಎಂದೂ ಹೇಳಿದ್ದಾರೆ.