ಅಮೇರಿಕಾ ಕಾರಣದಿಂದ ಯೋಜನೆ ರದ್ದು !
ಟೆಲ್ ಅವಿವ (ಇಸ್ರೈಲ್) – ಕಳೆದ ಅನೇಕ ದಿನಗಳಿಂದ ಇಸ್ರೈಲ್ ಸೇನೆಯು ಲೆಬನಾನ್‌ನಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನು ವಿರೋಧಿಸಿ ಇರಾನ್ ಇಸ್ರೈಲ್ ಮೇಲೆ ತನ್ನ ಅತಿದೊಡ್ಡ ಕ್ಷಿಪಣಿ ದಾಳಿ ನಡೆಸಿತು. ಇದರ ನಂತರ ಇಸ್ರೈಲ್, ಇರಾನ್ ಮೇಲೆ ಪ್ರತ್ಯುತ್ತರವಾಗಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಕೆಲವು ತಜ್ಞರು ಇಸ್ರೈಲ್ ಇರಾನ್‌ನ ಪರಮಾಣು ರಿಯಾಕ್ಟರ್ (ಪರಮಾಣು ಯೋಜನೆಗಳ?) ಮೇಲೆ ಗುರಿಯಾಗಿಸಬಹುದು ಎಂದು ಊಹಿಸುತ್ತಿದ್ದಾರೆ; ಆದರೆ ಇಸ್ರೈಲ್‌ನ ಪ್ರಮುಖ ಮಿತ್ರ ಅಮೇರಿಕಾ ಹಾಗೆ ಮಾಡಬಾರದೆಂದು ಹೇಳಿದೆ. ಇಸ್ರೈಲ್ 1981 ರಲ್ಲಿ ಇರಾಕನ ಒಸಿರಾಕನಲ್ಲಿ ಪರಮಾಣು ರಿಯಾಕ್ಟರ್ ನಾಶಪಡಿಸಿತ್ತು. ಇಸ್ರೈಲ್‌ನ ವಾಯುಪಡೆಯು 3 ದೇಶಗಳ ಗಡಿಯನ್ನು ದಾಟಿ ಇರಾಕ್‌ನ ತಲುಪಿತ್ತು ಮತ್ತು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಹಿಂತಿರುಗಿತ್ತು. ಭಾರತವು ಇಸ್ರೈಲ್‌ನ ಸಹಾಯದಿಂದ 1982 ರಲ್ಲಿ ಪಾಕಿಸ್ತಾನದ ಪರಮಾಣು ಯೋಜನೆಯ ಮೇಲೆ ದಾಳಿ ನಡೆಸುವ ಯೋಜನೆಯನ್ನು ರಚಿಸಿತ್ತು; ಆದರೆ ಅಮೇರಿಕೆಯು ಇದಕ್ಕೆ ಅಡ್ಡಿಪಡಿಸಿ ರದ್ದು ಗೊಳಿಸಿತು. ಈ ಸಂದರ್ಭದಲ್ಲಿ ‘ನವಭಾರತ್ ಟೈಮ್ಸ್’ ಸುದ್ದಿಪತ್ರಿಕೆಯ ಸಂಕೇತಸ್ಥಳದ ಮೇಲೆ ಮಾಹಿತಿ ನೀಡಲಾಗಿದೆ.
ಸಂಪಾದಕೀಯ ನಿಲುವುಅಮೇರಿಕಾ ಎಂದಿಗೂ ಭಾರತದ ಸ್ನೇಹಿತನಾಗಿರಲಿಲ್ಲ, ಈಗಲೂ ಇಲ್ಲ ಮತ್ತು ಮುಂದೆಯೂ ಇರಲು ಸಾಧ್ಯವಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ! |
ಇಸ್ರೈಲ್ ಭಾರತಕ್ಕೆ ಸಹಾಯ ನೀಡಿತ್ತು !
ಇಸ್ರೈಲ್ ಪಾಕಿಸ್ತಾನದ ಪರಮಾಣು ಕಾರ್ಯಕ್ರಮವನ್ನು ಧ್ವಂಸಗೊಳಿಸಲು ಭಾರತಕ್ಕೆ ಸಹಾಯವನ್ನು ಕೂಡ ನೀಡಿದ್ದರು ಮತ್ತು ಅದಕ್ಕಾಗಿ ಯೋಜನೆಯನ್ನು ತಯಾರಿಸಲಾಗಿತ್ತು. ಈ ಯೋಜನೆಯನ್ನು ಏಕೆ ಜಾರಿಗೊಳಿಸಲಿಲ್ಲ ? ಆ ಯೋಜನೆ ಏನಾಗಿತ್ತು ಎನ್ನುವುದನ್ನು ತಿಳಿದುಕೊಳ್ಳೋಣ.
ಅ. ಇಸ್ರೈಲ್ ಮತ್ತು ಭಾರತದ ನಡುವೆ ಔಪಚಾರಿಕ ರಾಜಕೀಯ ಸಂಬಂಧವು 1992 ರ ಮಧ್ಯದಲ್ಲಿ ಸ್ಥಾಪನೆಯಾಗಿತ್ತು; ಆದರೆ ಎರಡೂ ದೇಶಗಳು ದೀರ್ಘಕಾಲದಿಂದ ಪರಸ್ಪರ ಸಂಪರ್ಕದಲ್ಲಿತ್ತು.
ಆ. 1984 ರಲ್ಲಿ ಭಾರತ ಮತ್ತು ಇಸ್ರೈಲ್ ಪಾಕಿಸ್ತಾನದಲ್ಲಿ ರಹಸ್ಯ ಕಾರ್ಯಾಚರಣೆಯ ಯೋಜನೆಯನ್ನು ಸಿದ್ಧಪಡಿಸಿತ್ತು. ಇಬ್ಬರಿಗೂ ಪಾಕಿಸ್ತಾನದ ಪರಮಾಣು ಕಾರ್ಯಕ್ರಮದಿಂದ ಅಪಾಯವಿತ್ತು. 1965 ರಲ್ಲಿ ಪಾಕಿಸ್ತಾನದ ಅಂದಿನ ವಿದೇಶಾಂಗ ಸಚಿವ ಮತ್ತು ನಂತರ ಪ್ರಧಾನಿಯಾಗಿದ್ದ ಜುಲ್ಫಿಕರ್ ಅಲಿ ಭುಟ್ಟೋ ಅವರು ಅಣುಬಾಂಬ್ ತಯಾರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅವರು, ‘ಪಾಕಿಸ್ತಾನವು ಹುಲ್ಲು ಅಥವಾ ಎಲೆಗಳನ್ನು ತಿಂದು ಜೀವಂತವಾಗಿರುವುದು; ಆದರೆ ಪಾಕಿಸ್ತಾನಕ್ಕೆ ಅಣುಬಾಂಬ್ ಸಿಗುತ್ತದೆ.’ 1971ರಲ್ಲಿ ಭಾರತದೊಂದಿಗೆ ಯುದ್ಧದಲ್ಲಿ ಸೋತ ನಂತರ, ಭುಟ್ಟೋ ಪಾಕಿಸ್ತಾನದ ಅಧಿಪತ್ಯವನ್ನು ವಹಿಸಿಕೊಂಡರು. ಆಗ ಅವರು ಅದರ ಮೇಲೆ ಕೆಲಸವನ್ನು ಪ್ರಾರಂಭಿಸಿದರು.
🇮🇳 India and 🇮🇱 Israel were planning to destroy 🇵🇰 Pakistan’s Nuclear facility
The plan was canceled because of the U.S.#Israel had offered help to India.
It must be understood that #America was never India’s friend, is not and may never be in the future! pic.twitter.com/DdQqoJ4yTx
— Sanatan Prabhat (@SanatanPrabhat) October 5, 2024
ಭಾರತ ಮತ್ತು ಇಸ್ರೈಲ್ ಭಯ
ಪಾಕಿಸ್ತಾನದ ಪರಮಾಣು ಕಾರ್ಯಕ್ರಮವು ಯುರೋಪ್ ಮತ್ತು ಚೀನಾದಿಂದ ಕದ್ದ ಮಾಹಿತಿ ಮತ್ತು ತಂತ್ರಜ್ಞಾನವನ್ನು ಅವಲಂಬಿಸಿತ್ತು. ಪಾಕಿಸ್ತಾನವು 1970 ಮತ್ತು 1980 ರ ರ ದಶಕದ ಕೊನೆಯಲ್ಲಿ, ಶಸ್ತ್ರಾಸ್ತ್ರಗಳನ್ನು ತಯಾರಿಸುವ ದಿಕ್ಕಿನಲ್ಲಿ ಮುಂದುವರಿದಿತ್ತು. ಇದು ಭಾರತ ಅಥವಾ ಇಸ್ರೈಲ್ ಇಬ್ಬರಿಗೂ ಚಿಂತೆಯ ವಿಷಯವಾಗಿತ್ತು. ಇದೇ ಸಮಯದಲ್ಲಿ ಇಸ್ಲಾಮಾಬಾದ್ ಹತ್ತಿರದ ಕಹೂತಾದಲ್ಲಿ ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಯತ್ನಿಸುತ್ತಿದೆ ಎಂಬ ಮಾಹಿತಿ ಭಾರತಕ್ಕೆ ಸಿಕ್ಕಿತ್ತು. ಪಾಕಿಸ್ತಾನ ಯಾವುದೇ ಪರಮಾಣು ಶಸ್ತ್ರಾಸ್ತ್ರ ತಂದರೂ ಅದರ ಗುರಿ ಪ್ರಮುಖವಾಗಿ ನವದೆಹಲಿ ಆಗಿರಲಿದೆ ಎನ್ನುವುದು ಭಾರತಕ್ಕೆ ತಿಳಿದಿತ್ತು, ಅದೇ ಸಮಯದಲ್ಲಿ ‘ಪಾಕಿಸ್ತಾನದ ‘ಇಸ್ಲಾಮಿ ಅಣುಬಾಂಬ’ ನಮ್ಮ ಅರಬ ಪ್ರತಿ ಸ್ಪರ್ಧಿಗೆ ದೊಡ್ಡ ಶಕ್ತಿಯಾಗಲಿದೆ.’ ಎನ್ನುವ ಹೆದರಿಕೆ ಇಸ್ರೈಲ್ ಗೆ ಅನಿಸುತ್ತಿತ್ತು. ತದನಂತರ ಪಾಕಿಸ್ತಾನದ ಅಣುಬಾಂಬ ವಿಷಯದಲ್ಲಿ ಭಾರತದ ಗುಪ್ತಚರ ಇಲಾಖೆ ‘ರಾ’ ಮತ್ತು ಇಸ್ರೈಲ್ ‘ಮೊಸಾದ’ ಇವರ ನಡುವೆ ಸಹಕಾರ ಪ್ರಾರಂಭವಾಯಿತು.
ಪಾಕಿಸ್ತಾನದಲ್ಲಿ ವೈಮಾನಿಕ ದಾಳಿಯ ಯೋಜನೆ
ಇಸ್ರೈಲ್ ಭಾರತದೊಂದಿಗೆ ಒಂದು ಯೋಜನೆ ರೂಪಿಸಿತ್ತು ಎಂದು ತಜ್ಞರು ಹೇಳಿಕೆಯಾಗಿತ್ತು. ಉಭಯ ದೇಶಗಳು ಜಂಟಿಯಾಗಿ ಪಾಕಿಸ್ತಾನದ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿ ನಾಶಪಡಿಸುವುದು ಯೋಜನೆಯಾಗಿತ್ತು. 1981 ರಲ್ಲಿ, ಇಸ್ರೈಲ್ ಇರಾಕ್‌ನಲ್ಲಿರುವ ಒಸಿರಾಕ್ ಪರಮಾಣು ರಿಯಾಕ್ಟರ್ ಮೇಲೆ ದಾಳಿ ಮಾಡಿ ನಾಶಪಡಿಸಿತು. ಆದಷ್ಟು ಶೀಘ್ರದಲ್ಲೇ ಇಸ್ರೈಲ್ ಮತ್ತು ಭಾರತವು ಕಹುಟಾದಲ್ಲಿ ಇದೇ ರೀತಿಯ ದಾಳಿಯನ್ನು ಯೋಜಿಸುತ್ತಿದೆ ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ತನ್ನ ಸರಕಾರವನ್ನು ಎಚ್ಚರಿಸಿತು.
ಪಾಕಿಸ್ತಾನದ ಮೇಲೆ ದಾಳಿ ಮಾಡಲು ಇಸ್ರೇಲಿ ವಿಮಾನಗಳು ಗುಜರಾತ್‌ನ ಜಾಮ್‌ನಗರ ನೆಲೆಯಿಂದ ಹಾರಾಟ ನಡೆಸಬೇಕಿತ್ತು. ಇದರಲ್ಲಿ ಎಫ್-15 ಮತ್ತು ಎಫ್-16 ಯುದ್ಧ ವಿಮಾನಗಳನ್ನು ಬಳಸುವವರಿದ್ದರು. ಆದಾಗ್ಯೂ, ಈ ಮಾಹಿತಿಯನ್ನು ಯಾವತ್ತೂ ದೃಢೀಕರಿಸಲಾಗಿಲ್ಲ. ಪತ್ರಕರ್ತ ಆಡ್ರಿಯನ್ ಲೆವಿ ಇವರು ಈ ವಿಷಯದಲ್ಲಿ ಒಸಿರಾಕ್ ಮೇಲಿನ ಇಸ್ರೈಲ್ ದಾಳಿಯ ನಂತರ ಭಾರತೀಯ ಅಧಿಕಾರಿಗಳ ತಂಡ ಇಸ್ರೈಲ್‌ಗೆ ತಲುಪಿತ್ತು ಎಂದು ಬರೆದಿದ್ದಾರೆ. ಆ ತಂಡದಲ್ಲಿ ಸೇನೆ ಮತ್ತು ಗುಪ್ತಚರ ಅಧಿಕಾರಿಗಳು ಇಬ್ಬರೂ ಇದ್ದರು.
ಅಮೇರಿಕಾ ಆಟವನ್ನು ಹೇಗೆ ಬುಡಮೇಲೆ ಮಾಡಿತು ?
1982 ರಲ್ಲಿ ‘ವಾಷಿಂಗ್ಟನ್ ಪೋಸ್ಟ್’ ಮತ್ತು 1984 ರಲ್ಲಿ ಅಮೇರಿಕಾದ ‘ಎಬಿಸಿ ನ್ಯೂಸ್’ ಪಾಕಿಸ್ತಾನದ ಪರಮಾಣು ಕೇಂದ್ರಗಳ ಮೇಲೆ ಭಾರತ ಮತ್ತು ಇಸ್ರೈಲ್ ಜಂಟಿಯಾಗಿ ದಾಳಿ ನಡೆಸಲಿದೆ ಎಂದು ವರದಿ ಮಾಡಿತ್ತು. ಈ ಸುದ್ದಿಯಿಂದ ನೇರ ಕ್ರಮ ಕೈಗೊಳ್ಳದಂತೆ ಭಾರತದ ಮೇಲೆ ಒತ್ತಡ ಹೆಚ್ಚಿತು. ಅದೇ ಸಮಯದಲ್ಲಿ, ಇಸ್ರೈಲ್ ಸ್ವತಃ ಮುಂದೆ ಬಂದು ದಾಳಿ ಮಾಡಲು ತನ್ನ ಸಿದ್ಧತೆಯನ್ನು ತೋರಿಸಿತು. ಇದಕ್ಕಾಗಿ ಇಸ್ರೇಲಿ ಫೈಟರ್ ಜೆಟ್‌ಗಳು ಜಾಮ್‌ನಗರ ವಾಯುನೆಲೆಯನ್ನು ಬಳಸಿಕೊಳ್ಳಲಿತ್ತು.
ಈ ಯೋಜನೆಯ ಪ್ರಕಾರ, ಇಸ್ರೇಲಿ ವಿಮಾನಗಳು ರಾಡಾರ್‌ನಿಂದ ತಪ್ಪಿಸಿಕೊಂಡು ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿ ಮುಂದೆ ಹೋಗಿ ಇಸ್ಲಾಮಾಬಾದ್ ಬಳಿ ದಾಳಿ ಮಾಡಬೇಕಿತ್ತು. ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರು ಮಾರ್ಚ್ 1984 ರಲ್ಲಿ ಈ ಕ್ರಮವನ್ನು ಅನುಮೋದಿಸಿದ್ದರು; ಆದರೆ ಅಮೇರಿಕೆಯ ಗುಪ್ತಚರ ಸಂಸ್ಥೆ ಸಿಐಎ ಈ ಕ್ರಮದ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತು. ಇದರ ನಂತರ ಭಾರತ ಮತ್ತು ಇಸ್ರೈಲ್ ದಾಳಿಯ ಯೋಜನೆಯನ್ನು ರದ್ದುಗೊಳಿಸಲು ನಿರ್ಧರಿಸಿದವು.