Iran Israel Conflicts : ಮುಂದಿನ 72 ಗಂಟೆಗಳಲ್ಲಿ ಇಸ್ರೇಲ್ ಮೇಲೆ ದಾಳಿ; ಇರಾನ್ ನಿಂದ ಬೆದರಿಕೆ

ಅಮೇರಿಕಾದಿಂದ ಇಸ್ರೇಲ್ ಗೆ ರಕ್ಷಣೆ ಪೂರೈಕೆ !

ವಾಷಿಂಗ್ಟನ್ (ಅಮೇರಿಕಾ) / ಟೆಲ್ ಅವಿವ್ (ಇಸ್ರೇಲ್) – ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಇರಾನ್ (Iran) ಮುಂದಿನ 72 ಗಂಟೆಗಳಲ್ಲಿ ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ಅಮೇರಿಕಾವು ನೀರು, ಭೂಮಿ ಮತ್ತು ಆಕಾಶದಲ್ಲಿ ಇಸ್ರೇಲ್ ನ ಭದ್ರತೆಯನ್ನು ಹೆಚ್ಚಿಸಿದೆ.

ಅಮೇರಿಕಾದ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ (Lloyd Austin) ಅವರ ಹೇಳಿಕೆ ಪ್ರಕಾರ, ವಿಮಾನವಾಹಕ ನೌಕೆ ‘ಯು.ಎಸ್.ಎಸ್. ಅಬ್ರಹಾಂ ಲಿಂಕನ್’ ಅನ್ನು ಪೆಸಿಫಿಕ್ ಸಾಗರದಿಂದ ಈಗ ಓಮನ್ ನ ಕೊಲ್ಲಿಯಲ್ಲಿ ನಿಯೋಜಿಸುವುದಕ್ಕಾಗಿ ಕಳುಹಿಸಲಾಗಿದೆ. ಇಸ್ರೇಲ್‌ನ ಪಶ್ಚಿಮದ ಭೂಮಧ್ಯ ಸಮುದ್ರದಲ್ಲಿ ಅಮೇರಿಕಾ ತನ್ನ ವಿಧ್ವಂಸಕ ಯುದ್ಧನೌಕೆ ಮತ್ತು 80 ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಮಧ್ಯ ಏಷ್ಯಾದ (ಮಧ್ಯ ಪ್ರಾಚ್ಯ ಪ್ರದೇಶದಲ್ಲಿರುವ) 10 ದೇಶಗಳಲ್ಲಿ ಪ್ರಸ್ತುತ 45 ಸಾವಿರ ಅಮೆರಿಕನ್ ಸೈನಿಕರ ಸಂಖ್ಯೆಯನ್ನು ದ್ವಿಗುಣಗೊಳಿಸಿ 50 ಸಾವಿರ ಹೊಸ ಸೈನಿಕರನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.