ಗುಜರಾತನಲ್ಲಿ ಜೂನ್ ೧೫ ರಿಂದ ‘ಲವ್ ಜಿಹಾದ್’ ವಿರೋಧಿ ಕಾನೂನು ಜಾರಿಗೆ

ಗುಜರಾತ ಸರಕಾರವು ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿದ ಲವ್ ಜಿಹಾದ ವಿರೋಧಿ ಕಾನೂನಿಗೆ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಅನುಮೋದನೆ ನೀಡಿದ್ದಾರೆ. ಈ ಕಾನೂನು ಜೂನ್ ೧೫ ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ.

ಅಲೋಪತಿ ಜೊತೆಗೆ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳುವ ರೋಗಿಗಳು ಕೇವಲ ಅಲೋಪತಿ ಔಷಧಿಯನ್ನು ಮಾತ್ರ ತೆಗೆದುಕೊಳ್ಳುವ ರೋಗಿಗಳ ತುಲನೆಯಲ್ಲಿ ಬೇಗ ಕೊರೊನಾಮುಕ್ತರಾದರು !

ಇಡೀ ದೇಶದಲ್ಲಿ ಕೊರೋನಾ ಚಿಕಿತ್ಸೆಯಲ್ಲಿ ಆಯುರ್ವೇದದ ಸಹಭಾಗಿತ್ವವನ್ನು ಪಡೆದುಕೊಳ್ಳಬೇಕು ಎಂದು ಜನರಿಗೆ ಅನಿಸುತ್ತದೆ ! ಈ ಬಗ್ಗೆ ಕೇಂದ್ರ ಸರಕಾರವು ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ !

ಬನಾಸಕಾಂಠಾ (ಗುಜರಾತ) ನ ಹಳ್ಳಿಯಲ್ಲಿನ ಗೋಶಾಲೆಯಲ್ಲಿ ಕೋವಿಡ್ ಸೆಂಟರ !

ಇಲ್ಲಿಯ ತೆತೊಡಾ ಗ್ರಾಮದಲ್ಲಿ ಒಂದು ಗೋಶಾಲೆಯನ್ನು ಕೋವಿಡ್ ಸೆಂಟರ್‌ನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿನ ರೋಗಿಗಳಿಗೆ ಹಸುವಿನ ಹಾಲು ಮತ್ತು ಗೋಮೂತ್ರದಿಂದ ತಯಾರಿಸಿದ ಔಷಧಿಗಳ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾದ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದ ಗುಜರಾತ ಉಚ್ಚ ನ್ಯಾಯಾಲಯ!

ಕೊರೋನಾಗೆ ಸಂಬಂಧಿಸಿದಂತೆ ಸರಕಾರವು ಮಾಡಿದ ಪರಿಹಾರೋಪಾಯಗಳ ದಾವೆಗಳು ಮತ್ತು ವಾಸ್ತವ ಪರಿಸ್ಥಿತಿಯ ನಡುವೆ ದೊಡ್ಡ ವ್ಯತ್ಯಾಸವಿದೆ, ಎಂದು ಕಠೋರ ಮಾತುಗಳಲ್ಲಿ ಗುಜರಾತ ಉಚ್ಚ ನ್ಯಾಯಾಲಯವು ಕರೋನಾ ಪರಿಸ್ಥಿತಿಯ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದೆ.